Advertisement

ಸರ್ಕಾರಿ ಜಮೀನಿನಲ್ಲಿ ಸೋಲಾರ್‌ ಪ್ಲಾಂಟ್‌

03:55 PM Dec 02, 2019 | Suhan S |

ಗುಡಿಬಂಡೆ: ಸರ್ಕಾರ ಜಾನುವಾರುಗಳ ಮೇವಿಗಾಗಿ ಕಾಯ್ದಿರಿಸಿದ 60 ಎಕರೆ ದನಗಳ ಮುಪ್ಪತ್ತು ಜಮೀನನ್ನು ಖಾಸಗಿ ಕಂಪನಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸೋಲಾರ್‌ ಪ್ಲಾಂಟ್‌ ನಿರ್ಮಾಣ ಮಾಡುತ್ತಿದ್ದರೂ ಸಹ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜಮೀನನ್ನು ಉಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ತಾಲೂಕಿನ ರೈತರುಆರೋಪಿಸಿ ಎಸಿಬಿ, ಲೋಕಾಯುಕ್ತ ಹಾಗೂ ಭೂ ಕಬಳಿಕೆ ಆಯೋಗಗಳಿಗೆ ದೂರು ನೀಡಲು ಮುಂದಾಗಿದ್ದಾರೆ.

Advertisement

ಹೌದು, ಇಂತಹದೊಂದು ಘಟನೆ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಸುತ್ತಮುತ್ತಲಿನ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಯ್ದಿರಿಸಿದ ಜಮೀನನ್ನು ಸಮತಟ್ಟು ಖಾಸಗಿ ಕಂಪನಿಯವರು ಕಾಮಗಾರಿ ಪ್ರಾರಂಭಿಸಿದ್ದಾರೆ. ಆದರೆ ರೈತರು ತಹಶೀಲ್ದಾರ್‌ಗೆ ಅನೇಕ ದೂರು ನೀಡಿದರೂ ಜಮೀನು ಉಳಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಹಶೀಲ್ದಾರ್‌ ತೀವ್ರ ನಿರ್ಲಕ್ಷ್ಯ: ಸೋಮೇಶ್ವರ ಗ್ರಾಮದ ಸರ್ವೆ ನಂ.31 ರಲ್ಲಿ 54 ಎಕರೆ ಮತ್ತು ಸರ್ವೆ ನಂಬರ್‌ 31 ರಲ್ಲಿ 5 ಎಕರೆ ಜಮೀನು ಸರ್ಕಾರ ಜಾನುವಾರಗಳ ಮೇವಿಗಾಗಿ ದನಗಳ ಮುಪ್ಪತ್ತು ಎಂದುಕಾಯ್ದಿರಿಸಿದೆ. ಈ ಜಮೀನಿನಲ್ಲಿ ಸೋಮೇಶ್ವರಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ದನಕರುಗಳನ್ನು ಮೇಯಿಸುತ್ತಿದ್ದರು.ಆದರೆ ಈಗ ಏಕಾಏಕಿ ಖಾಸಗಿ ಕಂಪನಿಯವರು ಸೋಲಾರ್‌ ಪ್ಲಾಂಟ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನಾವುಅನೇಕ ಬಾರಿ ತಹಶೀಲ್ದಾರ್‌ಗೆ ಲಿಖೀತವಾಗಿದೂರು ನೀಡಿದರೂ ಸಹ ತಹಶೀಲ್ದಾರ್‌ ಈಬಗ್ಗೆ ಬಗ್ಗೆ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಡೀಸಿ ಗಮನಕ್ಕೂ ತಂದರೂ ಪ್ರಯೋಜನೆ ಆಗಲಿಲ್ಲ: ಸುಮಾರು ಒಂದು ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿಗಳ ಸಂಬಂಧಿಕರು ಸೋಲಾರ್‌ ಪ್ಲಾಂಟ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಜಮೀನನ್ನು ಉಳಿಸಿ ನಮಗೆ ಜಾನುವಾರುಗಳ ಮೇವಿಗಾಗಿ ಕಾಯ್ದಿರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಅರ್ಜಿ ನೀಡಿದರೂ ಸಹ ಪ್ರಯೋಜನೆ ಆಗುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ದ ಎಸಿಬಿಗೆ ದೂರು ನೀಡುತ್ತೇವೆ. ಅಲ್ಲೂ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಮೀನು ನೆಲಸಮ: ಈ ಹಿಂದೆ ಸೋಮೇಶ್ವರ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರುಸರ್ಕಾರಿ ಜಮೀನಿನಲ್ಲಿ ಉಳಿಮೆ ಮಾಡಿ  ಕೊಳ್ಳುತ್ತಿದ್ದು, ಉಳುಮೆ ಮಾಡಿದ ಜಮೀನಿಗಾಗಿಅರ್ಜಿ ಸಲ್ಲಿಸಿ, ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಹಾಗೂಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ.ಈಗ ಏಕಾಏಕಿ ಖಾಸಗಿ ವ್ಯಕ್ತಿಗಳು ಬಂದು ನನ್ನ ಜಮೀನನ್ನು ನೆಲಸಮ ಮಾಡಿ ಸೋಲಾರ್‌ ಪ್ಲಾಂಟ್‌ ಹಾಕಲು ಮುಂದಾಗುತ್ತಿದ್ದಾರೆ. ಇದು ನಮ್ಮ ಜಮೀನು ಇದರ ಎಲ್ಲಾ ದಾಖಲೆಗಳು ಇವೆ ಎಂದು ತಿಳಿಸಿದರೆ ಇದುನಿಮ್ಮದಲ್ಲ, ಏನ್‌ ಮಾಡ್ತಿರೋ ಮಾಡ್ಕೊ ಹೋಗಿ ಎಂದು ಹೆದರಿಸುತ್ತಿದ್ದಾರೆ ಎಂದುರೈತರು ತಮ್ಮ ನೋವನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Advertisement

 

-ವೆಂಕಟೇಶ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next