Advertisement

ಸೌರ ರಾಷ್ಟ್ರಗಳ ಕೂಟ

09:40 AM Mar 12, 2018 | Harsha Rao |

ಸೌರಶಕ್ತಿಯನ್ನು ಉತ್ತಮವಾಗಿ ಬಳಸಿಕೊಳ್ಳುವ ಉದ್ದೇಶದಿಂದ 121 ದೇಶಗಳನ್ನು ಒಗ್ಗೂಡಿಸಿದ ಪ್ರಧಾನಿ ನರೇಂದ್ರ ಮೋದಿ, ಒಕ್ಕೂಟದ ಮೊದಲ ಸಮ್ಮೇಳನವನ್ನು ಹೊಸದಿಲ್ಲಿಯಲ್ಲಿ ನಡೆಸಿದ್ದಾರೆ. 2015ರಲ್ಲಿ ಪ್ಯಾರಿಸ್‌ನಲ್ಲಿ ಪ್ರಸ್ತಾವವಾದ ಈ ಯೋಜನೆ ಈಗ ಕಾರ್ಯರೂಪಕ್ಕೆ ಬಂದಿದ್ದು, ಭಾರತಕ್ಕೆ ಫ್ರಾನ್ಸ್‌ ಕೂಡ ಹೆಗಲಾಗಿ ನಿಂತಿದೆ.

Advertisement

ಶುರುವಾಗಿದ್ದು ಹೇಗೆ?
ಮೊದಲ ಬಾರಿ ಪ್ರಸ್ತಾವವಾಗಿದ್ದು 2015ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಭಾರತ-ಆಫ್ರಿಕಾ ಸಮ್ಮೇಳನದಲ್ಲಿ ,
ಪ್ಯಾರಿಸ್‌ನ ವಿಶ್ವಸಂಸ್ಥೆ ಹವಾಮಾನ ವೈಪರೀತ್ಯ ಸಮ್ಮೇಳನದಲ್ಲಿ.

ಮೊದಲ ರೂಪ
ಈ ಕಲ್ಪನೆಗೆ ರೂಪ ಸಿಕ್ಕಿದ್ದು, 2016ರಲ್ಲಿ. ನವೆಂಬರ್‌ನಲ್ಲಿ ಮೊರಾಕ್ಕೋದಲ್ಲಿ ನಡೆದ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ರೂಪುರೇಷೆ ಸಿದ್ಧವಾಯಿತು. ಅಂದಿನಿಂದಲೂ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕಲು ಆರಂಭಿಸಿದವು

121 ರಾಷ್ಟ್ರಗಳ ವ್ಯಾಪ್ತಿ
ಈ ಒಕ್ಕೂಟದಲ್ಲಿ  ಸೇರ್ಪಡೆಗೊಳ್ಳಲು ಒಟ್ಟು 121 ರಾಷ್ಟ್ರಗಳನ್ನು ಗುರುತಿಸಲಾಗಿದ್ದು, ಈಗಾಗಲೇ 90 ದೇಶಗಳು ಸಹಿ ಹಾಕಿವೆ.

ಒಕ್ಕೂಟದ ಉದ್ದೇಶ
ಈ ಒಕ್ಕೂಟದ ಮೂಲ ಉದ್ದೇಶವೇ ಹಣಕಾಸು ಸೌಲಭ್ಯಕ್ಕೆ ಪ್ರೋತ್ಸಾಹ ನೀಡುವುದು. ಜತೆಗೆ ತಂತ್ರಜ್ಞಾನ ವರ್ಗಾವಣೆಗೆ ಅವಕಾಶ ನೀಡುವುದಾಗಿದೆ.

Advertisement

ಭಾರತದ ಗುರಿ
ಈ ಯೋಜನೆಯ ಅಡಿಯಲ್ಲಿ ಭಾರತ 2022ರ ವೇಳೆಗೆ 175 ಗಿಗಾವ್ಯಾಟ್‌ ಸೌರವಿದ್ಯುತ್‌ ಉತ್ಪಾದನೆಯ ಗುರಿ ಹಾಕಿಕೊಂಡಿದೆ.

ಸಮ್ಮೇಳನದ ವಿಶೇಷ
ರಾಷ್ಟ್ರಪತಿ ಭವನದ ಕನ್ವೆನÒನ್‌ ಸೆಂಟರ್‌ನಲ್ಲಿ ನಡೆದ ಈ ಸಮ್ಮೇಳನ ಕೆಲವು ವರ್ಷಗಳ ಹಿಂದೆ ಭಾರತ-ಆಫ್ರಿಕಾ ಸಮ್ಮೇಳನದ ರೀತಿಯಲ್ಲೇ ನಡೆದಿದೆ.

ಹಣಕಾಸು ಸೌಲಭ್ಯ
ಹಲವು ಬ್ಯಾಂಕ್‌ಗಳು ಈಗಾಗಲೇ ಹಣಕಾಸು ನೆರವು ಒದಗಿಸುವ ನಿಟ್ಟಿನಲ್ಲಿ ಉತ್ಸುಕವಾಗಿದ್ದು, ಬ್ರಿಕ್ಸ್‌, ಯುರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌, ಎಡಿಬಿ ಸಹಿತ ಹಲವು ಬ್ಯಾಂಕ್‌ಗಳ ಮುಖ್ಯಸ್ಥರು ಹಾಜರಾಗಿದ್ದಾರೆ.

ಪ್ರಮುಖ ದೇಶಗಳು
ಈ ಒಕ್ಕೂಟದಲ್ಲಿನ ಇತರ ಪ್ರಮುಖ ದೇಶಗಳೆಂದರೆ ಫ್ರಾನ್ಸ್‌, ಆಸ್ಟ್ರೇಲಿಯಾ, ಯುಎಇ, ನಿಗರ್‌, ಗಬೋನ್‌, ಸೀಶೆಲ್ಸ್‌, ಘಾನಾ, ರವಾಂಡಾ, ಫಿಜಿ, ಬಾಂಗ್ಲಾದೇಶ ಮತ್ತು ಶ್ರೀಲಂಕಾ.

24 ಯೋಜನೆಗಳ ಆರಂಭ
ಭಾರತ ಹಲವು ದೇಶಗಳಿಗೆ ತನ್ನ ತಂತ್ರಜ್ಞಾನವನ್ನು ಹಂಚಲಿದೆ. ಈ ಪೈಕಿ ತಾಂಜಾನಿಯಾ, ಟೋಗೋ, ಬೆನಿನ್‌, ಕಾಂಗೋ, ಚಾಡ್‌ ಮತ್ತು ಸೀಶೆಲ್ಸ್‌ ವಿನಂತಿ ಮಾಡಿವೆ. ಇದರ ಜತೆಗೆ ಈ ಸಮ್ಮೇಳನದಲ್ಲಿ 14 ದೇಶಗಳಲ್ಲಿ 24 ಯೋಜನೆಗಳೂ ಆರಂಭವಾಗಲಿವೆ.

ಮೊದಲ ಬಾರಿಗೆ ಒಕ್ಕೂಟದ ಕೇಂದ್ರ
ಭಾರತದಲ್ಲಿ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ ಒಕ್ಕೂಟದ ಕೇಂದ್ರ ಕಚೇರಿಯಿಲ್ಲ. ಇದೇ ಮೊದಲ ಬಾರಿಗೆ ಈ ಕನಸು ಐಎಸ್‌ಎ ಮೂಲಕ ಸಾಧ್ಯವಾಗುತ್ತಿದೆ. ಇದರ ಕೇಂದ್ರ ಕಚೇರಿ ಭಾರತದಲ್ಲಿ ಸ್ಥಾಪನೆಯಾಗಲಿದ್ದು, ಗುರ್‌ಗಾಂವ್‌ನಲ್ಲಿ ಇದಕ್ಕೆ ಪ್ರತ್ಯೇಕ ಭೂಮಿ ಕಾಯ್ದಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next