Advertisement

ಸೋದೆಯಲ್ಲಿ ಬೆಳಗುತ್ತಿದೆ ಸೋಲಾರ್‌ ದೀಪ

04:56 PM Mar 27, 2021 | Team Udayavani |

ಶಿರಸಿ: ರಾಜ್ಯದ ಆಧ್ಯಾತ್ಮಿಕ ಶಕ್ತಿ ಕೇಂದ್ರ ಸೋದೆ ವಾದಿರಾಜ ಮಠದಲ್ಲಿ ಈಗ ಉರಿಯುತ್ತಿರುವ ಬೆಳಕುಸೂರ್ಯನಿಗೇ ನೇರವಾಗಿ ಪ್ಲಗ್‌ ಹಾಕಿದವು. ಪ್ರತಿನಿತ್ಯಬೆಳಗುವ ಬೆಳಕು, ತಿರುಗುವ ಪಂಖ, ಪಂಪ್‌ಸೆಟ್‌,ಅಡುಗೆ ವಿಭಾಗ ಎಲ್ಲವೂ ಸೌರ ಶಕ್ತಿಯಿಂದಲೇ ನಡೆಯುತ್ತಿದೆ.

Advertisement

ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದ ಅಂಗ ಸಂಸ್ಥೆ ಆ್ಯಂಟ್ರಿಕ್ಸ್‌ ಕಾರ್ಪೋರೇಶನ್‌ ಇದರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ವಾದಿರಾಜರುಸಶರೀರಾಗಿ ವೃಂದಾವನಸ್ಥರಾದ ಪವಿತ್ರ ನೆಲೆಸೋದೆಯ ವಾದಿರಾಜ ಮಠದಲ್ಲಿ ಸೂರ್ಯ ತನ್ನಶಕ್ತಿಯನ್ನು ರಾತ್ರಿಯೂ ಬೆಳಗಿಸಲು ಕೊಡುತ್ತಿದ್ದಾನೆ!.ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್‌ವಿದ್ಯುತ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.ಸುಮಾರು 30 ಕಿವ್ಯಾಟ್‌ ಸಾಮರ್ಥ್ಯದ ಈ ಘಟಕದಹೆಸ್ಕಾಂ ನೆರವಿಲ್ಲದೇ ದೀಪ ಬೆಳಗಿಸಲು ನೆರವಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ಕೊಡುವಕ್ಷೇತ್ರವಾಗಿರುವ ವಾದಿರಾಜ ಮಠದಲ್ಲಿ ಈವರೆಗೆಭಕ್ತಾದಿಗಳ ಅನುಕೂಲಕ್ಕೆ ಹೆಸ್ಕಾಂನವಿದ್ಯುತ್‌ನ್ನು ಆಶ್ರಯಿಸಿಕೊಂಡಿದ್ದು ಅದರೊಂದಿಗೆಡೀಸಿಲ್‌ ಜನರೇಟರ್‌ ಕೂಡಾ ಬಳಕೆಯಲ್ಲಿದ್ದವು.ಇವೆಲ್ಲವೂ ಪರಿಸರದ ಮೇಲೆ ಪ್ರತಿಕೂಲಪರಿಣಾಮ ಬೀರುವ ಇಂಧನ ಮೂಲಗಳಾಗಿದ್ದುಆರ್ಥಿಕವಾಗಿಯೂ ಅಧಿಕ ವೆಚ್ಚದಾಯಕವಾಗಿದ್ದವು.ಈ ಮಧ್ಯೆ ಭಾರತ ಸರಕಾರವೂ ಸಹ ಇತ್ತೀಚಿನದಿನಗಳಲ್ಲಿ ಪರಿಸರ ಸಹ್ಯ ಪುನರ್ನವೀಕರಿಸಬಲ್ಲಇಂಧನ ಮೂಲಗಳಾದ ಸೌರಶಕ್ತಿ ಬಳಕೆಗೆ ಉತ್ತೇಜನನೀಡುತ್ತಿದ್ದು ಅದನ್ನು ಶ್ರೀಮಠದಲ್ಲಿ ಅಳವಡಿಸಬೇಕುಎನ್ನುವುದು ಸೋದೆ ಮಠದ ವಿಶ್ವವಲ್ಲಭತೀರ್ಥರ ಆಶಯವಾಗಿತ್ತು. ಇದಕ್ಕೆ ಪೂರಕವಾಗಿ ಇಸ್ರೋ ಸಂಸ್ಥೆ ವಿಜ್ಞಾನಿಗಳ ಸೂಕ್ತ ಮಾರ್ಗದರ್ಶನ ದೊರಕಿದೆ. ಶ್ರೀಗಳ ಸಂಕಲ್ಪಕ್ಕೆ ಇಸ್ರೋ ನೆರವಾಗಿದೆ ಎನ್ನುತ್ತಾರೆ ಸೋದೆಮಠದ ಆಡಳಿತಾಧಿಕಾರಿ ಮಾಣಿಕ್ಯ ಉಪಾಧ್ಯಾಯ. ಉತ್ಕೃಷ್ಟ ಗುಣಮಟ್ಟದ ಸೌರ ಫಲಕಗಳು,

ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಇನ್ವರ್ಟರ್‌ ಇತ್ಯಾದಿಗಳನ್ನು ಉಪಯೋಗಿಸಿ, ವೈಜ್ಞಾನಿಕವಾಗಿ ಶ್ರೀಮಠದ ವಿದ್ಯುತ್‌ ಬಳಕೆಯನ್ನು ಅಧ್ಯಯನ ಮಾಡಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಮಠದ ಎಲ್ಲಾ ರೀತಿಯ ವಿದ್ಯುತ್‌ ಬಳಕೆಯನ್ನು ಸಂಪೂರ್ಣವಾಗಿ ಸೋಲಾರ್‌ ಮೂಲಕವೇ ಪಡೆಯುವಷ್ಟು ವಿದ್ಯುತ್‌ ಅನ್ನು ಈ ಸೋಲಾರ್‌ ಘಟಕವೇ ಪೂರೈಸಲಿದೆ. ಈ ಮಧ್ಯೆ

ಶ್ರೀ ಮಠದಲ್ಲಿ ನಡೆಯುತ್ತಿರುವ ಸಾಂಪ್ರದಾಯಿಕ ಸೌದೆ ಆಧಾರಿತ ಅಡುಗೆಯಲ್ಲಿ ಸೌದೆಯ ಉಪಯೋಗವನ್ನು ಕಡಿಮೆ ಮಾಡುವ ಉದ್ದೇಶದಿಂದ ಅಳವಡಿಸಿರುವ 600ಲೀ. ಸಾಮರ್ಥ್ಯದ ಬಿಸಿನೀರಿನ ಘಟಕವನ್ನೂ ಸ್ಥಾಪಿಸಲಾಗಿದ್ದು ಅದು ಕೂಡಾ ಸೌದೆ ಬಳಸುವ ಮೂಲಕ ಪರಿಸರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಇಂತಹ ಪರಿಸರಕ್ಕೆ ಪೂರಕವಾದ, ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸ್ಥಾಪಿಸಲಾದ ಉದ್ಘಾಟನಾ ಸಮಾರಂಭವು ಮಾ.28 ರ ಸಂಜೆ 4.30ಕ್ಕೆ ಮಠದ ಆವರಣದಲ್ಲಿ ನಡೆಯಲಿದೆ. ಈ ಘಟಕದ ಉದ್ಘಾಟನೆಯನ್ನು ಸೋದೆ ಮಠಾಧಿಧೀಶ ವಿಶ್ವವಲ್ಲಭತೀರ್ಥ ಶ್ರೀ ಪಾದರು ನೆರವೇರಿಸಲಿದ್ದಾರೆ. ಇಸ್ರೋದ ಪ್ರಾಧ್ಯಾಪಕ ಡಾ| ಪಿ.ಜಿ. ದಿವಾಕರ್‌,ಸಮೂಹ ನಿರ್ದೇಶಕ ಭೀಮರಾಜಪ್ಪ, ಇಸ್ರೋದ ಪ್ರಮುಖ ಇಂಜಿನೀಯರ್‌ಗಳು ಹಾಗೂ ಆ್ಯಂಟ್ರಿಕ್ಸ್‌ ಕಾರ್ಪೋರೇಶನ್‌ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಬಹುಕಾಲದಿಂದಲೂ ಸೋಲಾರ್‌ ಬಳಕೆಯ ಕನಸಿತ್ತು. ಈಗ ಸೋಲಾರ್‌ ಶಕ್ತಿಯ ಅಳವಡಿಕೆ ಆಗಿದೆ. – ಶ್ರಿವಿಶ್ವವಲ್ಲಭತೀರ್ಥ ಶ್ರೀಪಾದರು, ಮಾಠಾಧೀಶ, ಸೋದೆ ಮಠ

Advertisement

ಇದೊಂದು ಪರಿಸರ ಕಾಳಜಿಯ ಕಾರ್ಯ. ಇಸ್ರೋ ಕೂಡ ಒಳ್ಳೆ ಕೆಲಸ ಮಾಡಿಕೊಟ್ಟಿದೆ. – ಮಾಣಿಕ್ಯ ಉಪಾಧ್ಯಾಯ, ಮಠದ ಮುಖ್ಯಸ್ಥರು

Advertisement

Udayavani is now on Telegram. Click here to join our channel and stay updated with the latest news.

Next