Advertisement

ಶಾಲೆಯ ಮೇಲ್ಛಾವಣಿ ಮೇಲೆ ಸೋಲಾರ್‌ ಪಾಠ!

02:33 PM May 14, 2018 | Harsha Rao |

ಯಾಲೆ, ಪ್ರಿನ್ಸ್‌ಟನ್‌, ನಾರ್ತ್‌ವೆಸ್ಟ್‌, ಯೂನಿವರ್ಸಿಟಿ ಆಫ್ ಸ್ಯಾನ್‌ಡಿಯಾಗೋ, ಅರಿಜೋನಾ ಮೊದಲಾದ ವಿವಿಗಳು ರೂಫ್ಟಾಪ್‌ ಸೋಲಾರ್‌ನ್ನು ಅನುಸರಿಸಿವೆ. ಅಲ್ಲಿನ 3,700 ಕೆ-12 ಶಾಲೆಗಳು ಮೇಲಾ§ವಣಿಯ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದ್ದು ಈಗಾಗಲೇ 3.7 ಮಿಲಿಯನ್‌ ವಿದ್ಯಾರ್ಥಿಗಳು ಇದರ ಸಹಾಯದಿಂದ ಅಧ್ಯಯನ ಮಾಡುತ್ತಿದ್ದಾರೆ.

Advertisement

ಶಾಲೆಗಳಲ್ಲಿ ಪ್ರತ್ಯಕ್ಷವಾಗಿ ಹೇಳಿಕೊಡುವ ಪಾಠಕ್ಕಿಂತ ಅಲ್ಲಿನ ಶಿಕ್ಷಕರು ತಮ್ಮ ನಡತೆ, ಚಟುವಟಿಕೆಗಳಿಂದ ಮಾಡುವ ಬೋಧನೆ ಮಹತ್ವವಾದುದು. ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಸಾವಿರ ಸಲ ಪಾಠ ಮಾಡಿದರೂ ಆಗದ ಅರಿವು, ಶಾಲೆಯಲ್ಲಿ ಶಿಕ್ಷಕರಾದಿಯಾಗಿ ಸರ್ವರೂ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಂಡಿದ್ದರೆ ಸಿಗುತ್ತದೆ. ಸಮಯ ಪಾಲನೆಯಲ್ಲಿನ ಶಾಲೆಯ ಶಿಸ್ತು ವಿದ್ಯಾರ್ಥಿಗಳಲ್ಲಿ ಪ್ರತಿಫ‌ಲಿಸುತ್ತದೆ. ಸೋಲಾರ್‌ ರೂಫ್ಟಾಪ್‌ಗ್ಳ ವಿಚಾರದಲ್ಲೂ ಅಷ್ಟೇ. ಅಂಕಿಅಂಶಗಳು, ತರ್ಕದ ಮೂಲಕ ಬ್ಲಾಕ್‌ಬೋರ್ಡ್‌ ಮೇಲೆ ಮಾಡುವ ಪಾಠಕ್ಕಿಂತ ಶಾಲೆಯ ಕಟ್ಟಡದ ಮೇಲ್ಛಾವಣಿಯ ಮೇಲೆ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ ವಿದ್ಯುತ್‌ ಪಡೆಯುವುದರಿಂದ ಹೆಚ್ಚು ಸ್ಪುಟವಾಗಿ ಮಂಡಿಸಬಹುದು.

ಯುಎಸ್‌ ಉದಾಹರಣೆಗಳು…
ಮತ್ತೆ ನಾವು ಅಮೆರಿಕಾದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅಲ್ಲಿನ ಯಾಲೆ, ಪ್ರಿನ್ಸ್‌ಟನ್‌, ನಾರ್ತ್‌ವೆಸ್ಟ್‌, ಯೂನಿವರ್ಸಿಟಿ ಆಫ್ ಸ್ಯಾನ್‌ಡಿಯಾಗೋ, ಅರಿಜೋನಾ ಮೊದಲಾದ ವಿವಿಗಳು ರೂಫ್ಟಾಪ್‌ ಸೋಲಾರ್‌ನ್ನು ಅನುಸರಿಸಿವೆ. ಅಲ್ಲಿನ 3,700 ಕೆ-12 ಶಾಲೆಗಳು ಮೇಲಾ§ವಣಿಯ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದ್ದು ಈಗಾಗಲೇ 3.7 ಮಿಲಿಯನ್‌ ವಿದ್ಯಾರ್ಥಿಗಳು ಇದರ ಸಹಾಯದಿಂದ ಅಧ್ಯಯನ ಮಾಡುತ್ತಿದ್ದಾರೆ ಎಂದು ಸೋಲಾರ್‌ ಫೌಂಡೇಶನ್‌ ಸಂಸ್ಥೆ ವರದಿ ಮಾಡಿದೆ. ಅದರ ಅಂದಾಜಿನ ಪ್ರಕಾರ, 30 ವರ್ಷಗಳ ಒಪ್ಪಂದದ ಅನುಸಾರ ಶಾಲೆಯೊಂದಕ್ಕೆ ಒಂದು ಮಿಲಿಯನ್‌ ಡಾಲರ್‌ಗಳ ಕನಿಷ್ಠ ಲಾಭ ಖಚಿತ. ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯನ್ವಯ ಒಟ್ಟು 1,25,000 ಕೆ-12 ಶಾಲೆಗಳಲ್ಲಿ 70 ಸಾವಿರ ಶಾಲೆಗಳು ಸೋಲಾರ್‌ ರೂಫ್ಟಾಪ್‌ ಅಳವಡಿಸಿಕೊಳ್ಳಲಿಕ್ಕೆ ಸಾಧ್ಯ. ಅಲ್ಲಿ ಈಗಾಗಲೇ ಆ್ಯಪಲ್‌, ಫೇಸ್‌ಬುಕ್‌, ಗೂಗಲ್‌ನಂಥ ಸಂಸ್ಥೆಗಳು ಸೋಲಾರ್‌ಗೆ ಶರಣಾಗಿವೆ.

ದೇಶಗಳ ಕತೆಗಳೇ ಮಾದರಿಯಾಗಬೇಕೆ? ವಿಧಾನ ಪರಿಷತ್‌ನ ಮಂಗಳೂರು ಶಾಸಕ ಇವಾನ್‌ ಡಿಸೋಜಾ, ತಮ್ಮ ಶಾಸಕ ನಿಧಿಯ ಹಣದಿಂದ ದಕ್ಷಿಣ ಕನ್ನಡದ 50 ಶಾಲೆಗಳಿಗೆ 2.5 ಲಕ್ಷ ರೂ. ಬಂಡವಾಳದಲ್ಲಿ ಮೂರು ಕೆ.ಎ ಸಾಮರ್ಥ್ಯದ ರೂಫ್ಟಾಪ್‌ ಸೋಲಾರ್‌ ಪ್ಯಾನೆಲ್‌ ಅಳವಡಿಸುವ ಯೋಜನೆಗೆ ಕಳೆದ ವರ್ಷ ಚಾಲನೆ ನೀಡಿದ್ದರು. ಅವರ ಅಂದಾಜಿನ ಪ್ರಕಾರ, ಸರಾಸರಿ 12 ಯೂನಿಟ್‌ ವಿದ್ಯುತ್‌ ಉತ್ಪಾದನೆ ಆಗುವಾಗ ಮಾಸಿಕ ಮೂರು ಸಾವಿರ ರೂ.ಗೂ ಹೆಚ್ಚಿನ ಆದಾಯ ಸರ್ಕಾರಿ ಶಾಲೆಗೆ ಬರುತ್ತದೆ. ಯೋಜನೆ ಅಕ್ಷರಶಃ ಜಾರಿಗೊಂಡಿದ್ದರ ಬಗ್ಗೆ ಮಾಹಿತಿ ಇಲ್ಲ.

“ಶಕ್ತಿ’ ಸಚಿವರ ಶಾಲೆಗಳು ಸೋಲಾರ್‌!
ಆದರೆ ಯೂನಿಟ್‌ಗೆ 9.56 ರೂ.ನಂತೆ 25 ವರ್ಷಗಳ ಒಪ್ಪಂದ ಬೆಂಗಳೂರಿನ ಪ್ರಭಾವಿ ರಾಜಕಾರಣಿಗಳ ಖಾಸಗಿ ಶಾಲೆಗಳನ್ನು ಆಕರ್ಷಿಸಿವೆ. ಪಾವಗಡದಲ್ಲಿ ಆಡಳಿತ ನಡೆಸುವವರು ಬೃಹತ್‌ ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಗುತ್ತಿಗೆಯನ್ನು ಎರಡು ನಿಮಿಷಗಳ ಅವಧಿಯಲ್ಲಿ ಹಿಡಿದು ವಿಜೃಂಭಿಸಿದರೆ ಇದೇ ವ್ಯಕ್ತಿಗಳ ಶಾಲೆಗಳು ಕೂಡ ರೂಫ್ಟಾಪ್‌ ಸೋಲಾರ್‌ನಲ್ಲಿ ಬಂಡವಾಳ ಹೂಡಿವೆ. ಇಂತಹ ಯಶಸ್ಸುಗಳನ್ನು ಗಮನಿಸಿದ ಚಿಕ್ಕಮಗಳೂರಿನ ಅಜ್ಜಂಪುರದ ವಾಸ ಎಜುಕೇಷನ್‌ ಸೊಸೈಟಿ ನಡೆಸುವ ಶಿಕ್ಷಣ ಸಂಸ್ಥೆ ಕೂಡ ಸುಮಾರು ಒಂದೂಕಾಲು ವರ್ಷಗಳ ಹಿಂದೆ 18 ಲಕ್ಷ ರೂ. ವೆಚ್ಚದಲ್ಲಿ 20 ಕಿ.ವ್ಯಾ ಸಾಮರ್ಥ್ಯದ ಸೋಲಾರ್‌ ರೂಫ್ಟಾಪ್‌ ಅಳವಡಿಸಿಕೊಂಡಿದೆ.

Advertisement

ಸಫ‌ಲತೆಯ ಅನುಭವಿಯನ್ನೂ ಅದಕ್ಕೆ ಸಿಕ್ಕಿಲ್ಲ. ಬೆಂಗಳೂರಿನ ಪ್ರಭಾವಿ ಶಿಕ್ಷಣ ಸಂಸ್ಥೆಗಳ ಸೂರ್ಯ ಶಿಕಾರಿಯನ್ನು ಖುದ್ದಾಗಿಯೇ ಗಮನಿಸಿದ 25 ವರ್ಷಗಳನ್ನು ಕಂಡಂತಹ ವಾಸ ಎಜುಕೇಶನ್‌ ಸೊಸೈಟಿಯ ಆಡಳಿತ ಮಂಡಳಿ, ಸಮಾಜಕ್ಕೆ ಸಕಾರಾತ್ಮಕ ರೀತಿಯಲ್ಲಿ ಬೆಂಬಲವಾಗಿ ನಿಲ್ಲಬಲ್ಲ ಸೋಲಾರ್‌ ರೂಫ್ಟಾಪ್‌ ಅಳವಡಿಸಿಕೊಳ್ಳಲು ನಿರ್ಧರಿಸಿದರು. ಅಳವಡಿಕೆಗೆ ಬೇಕಾದ ಪಾವತಿಸಿದ್ದಾಯಿತು. ಯಾವ ಏಜೆನ್ಸಿಯವರು ಈ ಕೆಲಸ ವಹಿಸಿಕೊಂಡಿದ್ದಾರೆಂದೂ ತಿಳಿಸಲಾಯಿತು.  ಸರಕು ಸಲಕರಣೆಗಳು ಕೂಡ ಬಂದವು. ಆದರೆ ಸರ್ಕಾರದ ಕೆಂಪುಪಟ್ಟಿಗೆ ಅಕ್ಷರಶಃ ಸಂಸ್ಥೆ ಸಿಲುಕಿಕೊಂಡಿತು. 25 ವರ್ಷಗಳ ಒಪ್ಪಂದ ಆಗಿ ಚಾಲನೆ ಸಿಗುವಾಗ ವಿದ್ಯುತ್‌ ಯೂನಿಟ್‌ ದರ 6.51 ಪೈಸೆಗೆ ಇಳಿದಿತ್ತು. ಈ ನಡುವೆ ಉಪಕರಣಗಳಲ್ಲಿನ ಕೆಲ ದೋಷಗಳ ಕಾರಣದಿಂದ ಒಂದು ತಿಂಗಳಷ್ಟು ಕಾಲ ಉತ್ಪಾದನೆ ಕೂಡ ನಿಲುಗಡೆಗೊಂಡಿತು. ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ 540ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ, ಹಣ ಮಾಡುವ ಉದ್ಯಮವಾಗಿಸಿಕೊಳ್ಳದ ತಮ್ಮ ಶಿಕ್ಷಣ ಸಂಸ್ಥೆಯ ಸೋಲಾರ್‌ ಸರ್ಕಸ್‌ ಬಗ್ಗೆ ಸಂಸ್ಥೆಯ ಕಾರ್ಯದರ್ಶಿ ತ್ಯಾಗರಾಜ್‌ಗೆ ಬೇಸರವಿದೆ. ಆದರೆ ತಮ್ಮ ಸಂಸ್ಥೆ ಅರೆ ಗ್ರಾಮೀಣ ಭಾಗದಲ್ಲಿದ್ದೂ ಉಳಿದ ಸಂಸ್ಥೆಗಳಿಗೆ ಮಾದರಿಯಾಗಿರುವುದು ಅವರಿಗೆ ಸಮಾಧಾನದ ಅಂಶವೂ ಹೌದು.

ಸೋಲಾರ್‌ ಸಾಂಕ್ರಾಮಿಕ!
ಅದೃಷ್ಟಕ್ಕೆ ಈಗಾಗಲೇ ದೆಹಲಿ, ಚೆನ್ನೈ, ಜಾರ್ಖಂಡ್‌ ಮೊದಲಾದೆಡೆ ಶಾಲೆಗಳ ಚಾವಣಿ ಮೇಲೆ ಸೋಲಾರ್‌ ಪ್ಯಾನೆಲ್‌ ಕುಳಿತಿವೆ. ಮುಖ್ಯವಾಗಿ, ಹಗಲು ವೇಳೆಯಲ್ಲಿ ಮಾತ್ರ ಶಾಲೆಗಳು ನಡೆಯುವ ಕಾರಣ, ಬಳಸಿ, ಹೆಚ್ಚಾದ ವಿದ್ಯುತ್‌ ಅನ್ನು ಗ್ರಿಡ್‌ಗೆ ಕೊಡಬಹುದು. ತಂತ್ರಜಾnನದ ನೆರವಿನಿಂದ ಶಾಲಾವಧಿಯಲ್ಲಿ ವಿದ್ಯುತ್‌ ನಿಲುಗಡೆಯ ಸಮಸ್ಯೆಯಿಂದಲೂ ಬಚಾವಾಗಬಹುದು. ನೋಯಿಡಾ ಜಿಲ್ಲೆಯಲ್ಲಿ ಎಲ್ಲ ಶಾಲೆಗಳೂ ಕಡ್ಡಾಯವಾಗಿ ಸೋಲಾರ್‌ ರೂಫ್ಟಾಪ್‌ ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆ ಆದೇಶಿಸಿದೆ. ಇಂತಹ ಪ್ರಭಾವಯುತ ಕ್ರಮ ವರ್ಷದ 300 ದಿನ ಗರಿಷ್ಠ ಸೂರ್ಯ ಪ್ರಕಾಶ ಪಡೆಯುವ ಕರ್ನಾಟಕಕ್ಕೆ ಹೆಚ್ಚು ಅಗತ್ಯ

ಮಾಹಿತಿಗೆ 9880476632

– ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next