Advertisement
ನಗರದ ಜೆಸ್ಕಾಂ ಕಚೇರಿಯಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಸೌರ ಶಕ್ತಿ ಹಾಗೂ ವಿವಿಧ ವಿದ್ಯುತ್‌ಮೂಲಗಳಿಗೆ ಒತ್ತು ಕೊಡುವ ನಿಟ್ಟಿನಲ್ಲಿಹೊಸ ಮತ್ತು ನವೀಕರಿಸಬಹುದಾದ ಇಂಧನಸಚಿವಾಲಯ ಈ ಯೋಜನೆಯನ್ನು ಘೋಷಿಸಿದೆ.ಒಂದು ವಸತಿ ಗೃಹ ಅಥವಾ ವಸತಿ ಸಂಕೀರ್ಣದಮೇಲೆ ಒಂದು ಕಿಲೋ ವ್ಯಾಟ್‌ನಿಂದ 500 ಕಿಲೋವ್ಯಾಟ್ ವರೆಗೂ ಸೌರ ವಿದ್ಯುತ್ ಉತ್ಪಾದನೆಗೆಅವಕಾಶ ಇರುತ್ತದೆ ಎಂದರು.ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಘಟಕಕ್ಕೆ5,11,00ರೂ. ದರ ನಿಗದಿ ಮಾಡಲಾಗಿದೆ.
Related Articles
Advertisement
ಗ್ರಾಹಕರಿಗೆ ಉತ್ತಮ ಮತ್ತು ಗುಣಮಟ್ಟದವಿದ್ಯುತ್ ಪೂರೈಕೆ, 2024-25ನೇ ಸಾಲಿನ ವೇಳೆಗೆ”ಎಟಿ’ ಮತ್ತು “ಸಿ’ ನಷ್ಟ 12ರಿಂದ 15ರ ವರೆಗೆಕಡಿಮೆ ಮಾಡುವುದು ಮತ್ತು ಎಸಿಎಸ್, ಎಆರ್‌ಆರ್ ಅಂತರವನ್ನು ಶೂನ್ಯಕ್ಕೆ ಇಳಿಸುವುದು ಈಯೋಜನೆ ಮುಖ್ಯ ಉದ್ದೇಶಗಳಾಗಿವೆ ಎಂದರು.ಈ ನಿಟ್ಟಿನಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ,ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ ಮತ್ತುಮೇಲ್ದರ್ಜೆಗೇರಿಸುವುದು. ಅತಿ ಹೆಚ್ಚು ವಿದ್ಯುತ್‌ನಷ್ಟ ಇರುವ ಪ್ರದೇಶಗಳಲ್ಲಿ ಕೇಬಲ್ ಅಳವಡಿಕೆ.ಹಳೆಯ ಹಾಗೂ ಸವಕಳಿ ವಿದ್ಯುತ್ ವಾಹಕಗಳನ್ನುಬದಲಾವಣೆ ಮಾಡಲಾಗುತ್ತದೆ.
ಗುಣಮಟ್ಟದವಿದ್ಯುತ್ ಪೂರೈಕೆ ಹೆಚ್ಚುವರಿಯಾಗಿ 11 ಕೆ.ವಿ.ವಿದ್ಯುತ್ ಮಾರ್ಗಗಳ ಅಳವಡಿಕೆ ಕಾಮಗಾರಿಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.ಗ್ರಾಮೀಣ ಪ್ರದೇಶ ಮತ್ತು ಹೊಲ-ಗದ್ದೆಗಳಲ್ಲಿವಿದ್ಯುತ್ ಸ್ಪರ್ಶದಿಂದ ಆಸ್ತಿ ಮತ್ತು ಪ್ರಾಣ ಹಾನಿತಡೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಪ್ರತಿ μàಡರ್ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯಶುರು ಮಾಡಲಾಗಿದೆ. ಈಗಾಗಲೇ ಶೇ.60ರಷ್ಟುಸಮೀಕ್ಷೆ ಮುಗಿದಿದೆ. ಮನೆ ಮುಂದೆ ಹಾಯ್ದುಹೋಗುವ ಸರ್ವೀಸ್ ವೈರ್‌ಗಳಿಗೆ ಪ್ಲಾ Âಸ್ಟಿಕ್ ಪೈಪ್‌ಗಳನ್ನು ಹಾಕಲಾಗುತ್ತದೆ. ಇದಕ್ಕಾಗಿ ಟೆಂಡರ್‌ಕರೆಯಲಾಗಿದೆ. ಜತೆಗೆ ಎಲ್ಲೆಲ್ಲಿ ಕಬ್ಬಿಣದ ವಿದ್ಯುತ್‌ಕಂಬಗಳು ಇವೆ. ಅವುಗಳ ತೆರವಿಗೂ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು