Advertisement
ವಿಧಾನಸೌಧದಲ್ಲಿ ಬೆಳಗ್ಗೆ 11.30ರವರೆಗೆ ಅಧಿಕಾರಿಗಳು, ನೌಕರರು ಮತ್ತು ಸಿಬಂದಿ ಸಂಖ್ಯೆ ವಿರಳವಾಗಿತ್ತು. ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕಚೇರಿ ಸಹಿತ ಬಹುತೇಕ ಸಚಿವರ ಕಚೇರಿಗೆ ಬೀಗ ಹಾಕಲಾಗಿತ್ತು. ಸಚಿವರ ಕಚೇರಿಗೆ ಹೊಂದಿಕೊಂಡ ಆಪ್ತ ಸಹಾಯಕರ ಕಚೇರಿಯಲ್ಲೂ ನೌಕರರ ಸಂಖ್ಯೆ ವಿರಳವಾಗಿತ್ತು. ವಿಧಾನಸೌಧದ ಆವರಣ, ಕಾರಿಡಾರ್‌ಗಳಲ್ಲೂ ಸಾರ್ವಜನಿಕರ ಓಡಾಟ ವಿರಳವಾಗಿತ್ತು. ನೌಕರರು ಮತ್ತು ಸಿಬಂದಿ ವಿರಳವಾಗಿದ್ದರಿಂದ ವಿಧಾನಸೌಧದ ಕಾರಿಡಾರ್‌ಗಳು ಭಣಗುಡುತ್ತಿದ್ದವು.
ಬೆಳಗ್ಗೆ 11.30ರ ಬಳಿಕವಷ್ಟೇ ನೌಕರರು, ಸಿಬಂದಿ ಕಚೇರಿಗಳತ್ತ ಬರಲಾರಂಭಿಸಿದರು. ಬಳಿಕ ಸಿಬಂದಿ ಕಚೇರಿಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಸಚಿವರ ಕೊಠಡಿಗಳಲ್ಲಿ ಕುರ್ಚಿ, ಮೇಜುಗಳನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಂಡುಬಂತು. ಕೆಲವು ಕಚೇರಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕವಷ್ಟೇ ನೌಕರರು ಮತ್ತು ಅಧಿಕಾರಿಗಳು ಕೆಲಸ ಆರಂಭಿಸಿದರು. ಕಂದಾಯ ಸಚಿವ ಆರ್. ಅಶೋಕ್ ಅವರ ಕೊಠಡಿಯನ್ನು ಸಿಬಂದಿ ಸಂಪೂರ್ಣವಾಗಿ ಸ್ವತ್ಛಗೊಳಿಸಿದರು. ಬಳಿಕ ಇಡೀ ಕೊಠಡಿಗೆ ಸಾಂಬ್ರಾಣಿ ಧೂಪ ಹಾಕಿ ಕಿಟಕಿ ಬಾಗಿಲುಗಳನ್ನು ಕೆಲವು ಹೊತ್ತು ಮುಚ್ಚಲಾಗಿತ್ತು. ಕ್ರಮೇಣ ಇತರ ಸಚಿವ ಕೊಠಡಿಗಳ ಬೀಗಗಳನ್ನು ತೆರೆಯಲಾಯಿತು. ಮಧ್ಯಾಹ್ನ 12.30ರ ಹೊತ್ತಿಗೆ ಬಹುತೇಕ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಆರಂಭವಾದವು.
ನಿರಂತರ ಸಭೆ
ಮುಖ್ಯಮಂತ್ರಿ ಟಿ.ಎಂ. ವಿಜಯ ಭಾಸ್ಕರ್ ಅವರು ಗುರುವಾರವೂ ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಬೆಳಗ್ಗೆ 10.30ಕ್ಕೆ ಆಯ್ದ ಅಧಿಕಾರಿಗಳೊಂದಿಗೆ ತಮ್ಮ ಕಚೇರಿಯಲ್ಲೇ ಸಭೆ ನಡೆಸಿದ ಅವರು ಬಳಿಕ ಮಧ್ಯಾಹ್ನ 12 ಹೊತ್ತಿಗೆ ಸಮಿತಿ ಕೊಠಡಿಯಲ್ಲಿ ಮತ್ತೂಂದು ಸಭೆಯಲ್ಲಿ ನಿರತರಾಗಿದ್ದರು.