Advertisement

ನಾಳೆ ವರ್ಷದ ಮೊದಲ ಸೂರ್ಯಗ್ರಹಣ : ಅರುಣಾಚಲಪ್ರದೇಶ, ಲಡಾಖ್‌ನ ಕೆಲವು ಭಾಗಗಳಲ್ಲಿ ಮಾತ್ರ ಗೋಚರ

07:14 AM Jun 09, 2021 | Team Udayavani |

ಹೊಸದಿಲ್ಲಿ: ಗುರುವಾರ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದ್ದು, ಈ “ಬೆಳಗಿನ ಉಂಗುರ’ವು ಅರುಣಾಚಲಪ್ರದೇಶ ಮತ್ತು ಲಡಾಖ್‌ನ ಕೆಲವು ಭಾಗಗಳಲ್ಲಿ ಮಾತ್ರವೇ ಗೋಚರಿಸಲಿದೆ.

Advertisement

ಸೂರ್ಯಾಸ್ತಕ್ಕೂ ಮುನ್ನ 3-4 ನಿಮಿಷಗಳ ಕಾಲ ಮಾತ್ರ ಇದನ್ನು ವೀಕ್ಷಿಸಬಹುದು. ಉತ್ತರ ಅಮೆರಿಕ, ಯುರೋಪ್‌ ಮತ್ತು ಏಷ್ಯಾದ ಹಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.

ಭಾರತೀಯ ಕಾಲಮಾನದ ಪ್ರಕಾರ, ಬೆ.11.42ರ ವೇಳೆಗೆ ಗ್ರಹಣ ಆರಂಭವಾಗಿ, ಮಧ್ಯಾಹ್ನ 3.30ರಿಂದ ಬೆಳಕಿನ ಉಂಗುರ ಕಾಣಿಸಲಿದೆ. ಸಂಜೆ 4.52ರವರೆಗೂ ಇದ್ದು, 6.41ಕ್ಕೆ ಸಮಾಪ್ತಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next