Advertisement

ಸೌರಶಕ್ತಿ ಚಾಲಿತ ಸೈಕಲ್ ಅನ್ವೇಷಣೆ

12:45 AM Jul 26, 2019 | sudhir |

ಕುಂದಾಪುರ: ಪರ್ಯಾಯ ಮೂಲಗಳಿಂದ ಯಾಂತ್ರಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶಕ್ತಿಯನ್ನು ಉತ್ಪಾದಿಸಿ ಬಳಸುವ ಪರ್ವ ಕಾಲವಿದು. ಯುವ ಮನಸ್ಸುಗಳು ಪ್ರಾಯೋಗಿಕವಾಗಿ ಏನಾದರೊಂದು ಹೊಸತನ್ನು ಮಾಡುವ ಉತ್ಸುಕತೆಯಲ್ಲಿರುವುದು ಸಹಜ.

Advertisement

ಅನೇಕ ಅತ್ಯಾಧುನಿಕ ಸಂಪರ್ಕ ಸಾಧನಗಳು ಅವರ ಆಸಕ್ತಿಯನ್ನು ಪೋಷಿಸಿ ಬೆಳೆಸುವ ವಿವಿಧ ಮಾದರಿಗಳನ್ನು ಅವರ ಮುಂದಿಡುತ್ತವೆ. ಈ ನಿಟ್ಟಿನಲ್ಲಿ ಪ್ರಕೃತಿದತ್ತ ಸೌರಶಕ್ತಿ ಚಾಲಿತ ಸೈಕಲ್ ಕುಂದಾಪುರದ ಆರ್‌.ಎನ್‌. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಶ್ರೀಶ ಶೆಟ್ಟಿ ನಿರ್ಮಾಣ ಮಾಡಿದ್ದಾರೆೆ.

ಅತ್ಯಂತ ಹುರುಪಿನಿಂದ ಪ್ರಾತ್ಯಕ್ಷಿಕೆಯನ್ನೂ ಮಾಡಿ ವಿವರಿಸುವ ಶ್ರೀಶನ ಈ ಯಶಸ್ವಿ ಕಾರ್ಯವನ್ನು ಕಾಲೇಜಿನ ಪ್ರಾಂಶುಪಾಲರು ಮತ್ತು ಬೋಧಕ-ಬೋಧಕೇತರ ವೃಂದದವರೂ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next