Advertisement

ಪಾಪು ಧೀಮಂತ ಹೋರಾಟಗಾರ

06:21 PM Mar 19, 2020 | Naveen |

ಸೊಲ್ಲಾಪುರ: ಹೊರನಾಡು ಕನ್ನಡಿಗರಿಗೆ ಸಮಸ್ಯೆಗಳು ಬಂದಾಗ, ಪಾಪು ಅವರು ತಮ್ಮ ಹೋರಾಟದ ಮೂಲಕ ಮತ್ತು ನೇರ ದಿಟ್ಟ ಬರವಣಿಗೆ ಮೂಲಕ ಸರಕಾರಕ್ಕೆ ವಿಷಯ ತಲುಪಿಸಿ ಸಮಸ್ಯೆಗಳು ಬಗೆ ಹರಿಯುವಂತೆ ಮಾಡುತ್ತಿದ್ದರು. ಇಂತಹ ಧೀಮಂತ ಕನ್ನಡಪರ ಹೋರಾಟಗಾರನನ್ನು ನಾವೆಲ್ಲರೂ ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಕನ್ನಡಿಗರ ಮನ-ಮಂದಿರದಲ್ಲಿರುವ ದೇವರು ಎದ್ದು ಹೊದಂತಾಗಿದೆ ಎಂದು ಯುವ ಸಾಹಿತಿ ಗಿರೀಶ ಜಕಾಪುರೆ ಹೇಳಿದರು.

Advertisement

ಅಕ್ಕಲಕೋಟ ಪಟ್ಟಣದ ಗೆಸ್ಟ್‌ ಹೌಸ್‌ನಲ್ಲಿ ಆದರ್ಶ ಕನ್ನಡ ಬಳಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಹಿರಿಯ ಪತ್ರಕರ್ತ, ಸಾಹಿತಿ, ಹೋರಾಟಗಾರ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಇನ್ನು ನಮಗೆ ನೆನಪು ಮಾತ್ರ. ಅವರ ಅಗಲಿಕೆಯಿಂದ ಹೊರನಾಡು ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ರಾಷ್ಟ್ರಮಟ್ಟದಲ್ಲಿ ಹೊರನಾಡು ಕನ್ನಡಿಗರನ್ನು ಒಂದು ವೇದಿಕೆಯಡಿ ತರಲು ಶ್ರಮಿಸಿದ ಅವರ ಕಾರ್ಯ ಮರೆಯುವಂತಿಲ್ಲ. ಅವರು ಬಿತ್ತಿ ಹೊದ ಹೋರಾಟದ ಬೀಜಗಳು ವೃಕ್ಷವಾಗಿ ಬೆಳೆದು ನಾಡು, ನುಡಿಯನ್ನು ಪೋಷಿಸಬೇಕು ಎಂದರು.

ನಾಡಿನ ಒಳಗೂ-ಹೊರಗೂ ಕನ್ನಡ ಗಟ್ಟಿಯಾಗಿ ನಿಲ್ಲಬೇಕಾದರೇ ಪಾಪುವಿನಂತಹ ಇನ್ನೊಬ್ಬ ಹೋರಾಟಗಾರ ಹುಟ್ಟಬೇಕು. ಅಲ್ಲದೆ ಅಕ್ಕಲಕೋಟದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕೆಂಬುದು ಪಾಪು ಅವರ ಕೊನೆ ಆಸೆಯಾಗಿತ್ತು. ಸರಕಾರ ಈ ಬಗ್ಗೆ ಬೇಗ ನಿರ್ಣಯ ಕೈಗೊಂಡು ಅವರ ಅಂತಿಮ ಆಸೆ ಪೂರೈಸಿ ಅವರ ಆತ್ಮಕ್ಕೆ ಶಾಂತಿ ಲಭಿಸುವಂತೆ ಮಾಡಬೇಕು ಎಂದು ಹೇಳಿದರು.

ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕಜಾನ್‌ ಶೇಖ್‌ ಮಾತನಾಡಿ, ಕನ್ನಡ ಮಾತನಾಡಬೇಕಾದರೆ ಅಕ್ಕಲಕೋಟಗೆ ಬರಬೇಕು, ಬಂದವರು ಯಾರು ಹಾಗೆ ಹೋಗುವುದಿಲ್ಲ. ಕನ್ನಡದೊಂದಿಗೆ ಕನ್ನಡಿಗರಾಗಿ ಹೋಗುತ್ತಾರೆ. ಇಂತಹ ಅಕ್ಕಲಕೋಟೆಯಲ್ಲಿ ಮಹಾಮೇಳ ನಡೆಯುತ್ತಿರುವುದು ತುಂಬಾ ಸಂತೋಷ ಎಂದು ಪಾಪು ಹೇಳಿದ್ದರೆಂದು ಸ್ಮರಿಸಿದರು.

Advertisement

ಹಿರಿಯ ಸಾಹಿತಿ ಅ.ಬಾ. ಚಿಕ್ಕಮಣೂರ, ಶಿಕ್ಷಕರಾದ ವಿದ್ಯಾಧರ ಗುರವ, ಸಿದ್ರಾಮಯ್ಯ ಸ್ವಾಮಿ ಸಂತಾಪ ವ್ಯಕ್ತಪಡಿಸಿದರು. ನಾಡೋಜ ದಿವಂಗತ ಡಾ| ಪಾಟೀಲ ಪುಟ್ಟಪ್ಪನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆದರ್ಶ ಕನ್ನಡ ಬಳಗದ ರಾಜಶೇಖರ ಉಮರಾಣಿಕರ, ಮಹೇಶ ಮೇತ್ರಿ, ದಿನೇಶ ಥಂಬದ, ದಿನೇಶ ಚವ್ಹಾಣ, ಶರಣು ಕೋಳಿ, ಕಲ್ಲಪ್ಪ ಕುಟನೂರ, ಸಂಗಣ್ಣ ಫತಾಟೆ, ವಾಸುದೇವ ದೇಸಾಯಿ, ಶರದಚಂದ್ರ ಗಂಗೊಂಡಾ, ಗೌರಿಶಂಕರ ಕೊನಾಪುರೆ ಇದ್ದರು. ಶರಣಪ್ಪ ಫುಲಾರಿ ನಿರೂಪಿಸಿದರು. ಸಂತೋಷ ಪರಿಟ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next