Advertisement
ಕುಸಿತ ಆರಂಭಮಂಗಳೂರು ಟೈಲ್ ಫ್ಯಾಕ್ಟರಿ ಹತ್ತಿರ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ಮೂಲಕ ಚರ್ಚ್ ರೋಡ್‌ನಿಂದ ಕೋಡಿ ಭಾಗಕ್ಕೆ ಹೋಗಬಹುದು. ರಿಂಗ್ ರೋಡ್ ಮೂಲಕ ಮುಖ್ಯ ರಸ್ತೆಗೆ ಸಂಗಮ್‌ಗೆ ತಲುಪಬಹುದು. ಕಾಂಕ್ರಿಟ್ ಪಕ್ಕವಿರುವ ತೋಡಿಗೆ ಸ್ವಲ್ಪ ದೂರ ತಡೆಗೋಡೆ ಹಾಕಲಾಗಿದೆ. ಅನಂತರ ತಡೆ ಬೇಲಿ ಹಾಕಲಾಗಿದೆ. ತಡೆ ಬೇಲಿ ಬುಡದಲ್ಲಿ ಹಾಕಿದ ಮಣ್ಣು ಈಗ ಕುಸಿಯ ಲಾರಂಭಿಸಿದೆ. ತಡೆಬೇಲಿ ಅಪಾಯದಲ್ಲಿದೆ. ಕಾಂಕ್ರೀಟ್ ರಸ್ತೆಯೂ ಅಪಾಯದಲ್ಲಿದೆ.
ಇಲ್ಲಿ ಕಾಮಗಾರಿ ಬಳಿಕ ತೋಡಿಗೆ ಮಣ್ಣು ಹಾಕಲಾಗಿತ್ತು. ಮಣ್ಣಿನ ತೆರವು ಕಾರ್ಯ ನಡೆಯದೇ ಇದ್ದರೆ ದಿಢೀರ್ ಮಳೆ ಬಂತೆಂದರೆ ಈ ಭಾಗ ಮುಳುಗುವ ಸಾಧ್ಯತೆ ಇದೆ. ಎಲ್ಲಾ ಕಡೆಯ ನೀರು ಈ ಮೂಲಕ ಹೊಳೆ ಸೇರುತ್ತದೆ. ವಡೇರ ಹೋಬಳಿಯಿಂದ ಕುಂದಾಪುರ ಪೇಟೆ ಭಾಗಕ್ಕೆ, ಗಾಂಧಿ ಮೈದಾನ ಕಡೆಯಿಂದ, ಪೇಟೆಯ ಭಾಗದಿಂದ ಹರಿದು ಬರುವ ನೀರು ಸೇರುವುದು ಈ ವಾರ್ಡಿನ ಮೂಲಕ ಹರಿಯುವ ತೋಡಿನಲ್ಲಿ. ಇದಕ್ಕೊಂದು ಸಮರ್ಥವಾದ ತಡೆಗೋಡೆ ಕಟ್ಟಿ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲು ಪುರಸಭೆಗೆ ಅನುದಾನದ ಕೊರತೆ ಉಂಟಾಗಿದೆ. ಕೇವಲ ಸಣ್ಣ ತಡೆಗೋಡೆಯನ್ನಷ್ಟೇ ಕಟ್ಟಲಾಗಿದ್ದು, ಇದರಿಂದ ರಸ್ತೆ ಕೊರೆತದ ಭೀತಿ ಜನರಲ್ಲಿ ಆವರಿಸಿದೆ. ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಒದಗಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ ಎಂದು ಉದಯವಾಣಿ ಮೇ 29ರಂದು ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಮಣ್ಣು ತೆರವು ಮಾಡಿತ್ತು. ಬಿದ್ದ ಕಲ್ಲುಗಳು
ಕಾಂಕ್ರೀಟ್ ತಡೆಗೋಡೆ ಪಕ್ಕದಲ್ಲಿ ಕಲ್ಲಿನ ತಡೆಗೋಡೆ ಯೊಂದರ ರಚನೆ ಮಾಡಲಾಗಿದ್ದು ಅದು ಕಳಪೆಯಾಗಿದೆ ಎಂಬ ಆರೋಪವಿದೆ. ಅದರ ಕಲ್ಲುಗಳು ಈಗಲೇ ಕಿತ್ತು ಹೋಗುತ್ತಿವೆ. ಗೋಡೆಗೆ ಅಂಟಿಕೊಂಡಿರಬೇಕಿದ್ದ ಕಲ್ಲು ಗಳು ಈಗಾಗಲೇ ಬಿದ್ದು ತೋಡಿನಲ್ಲಿವೆ ಎಂದು ಆಗಲೇ ಪತ್ರಿಕೆ ಎಚ್ಚರಿಸಿತ್ತು. ಇದೀಗ ಅದರ ಪಕ್ಕದಲ್ಲೇ ಮಣ್ಣು ಕುಸಿತವಾಗಲಾರಂಭಿಸಿದೆ.
Related Articles
ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೆ$çಓವರ್ ಬಳಿ, ಶಾಸಿŒ ಸರ್ಕಲ್ ಬಳಿ ಭಾರೀ ಗಾತ್ರದ ಹೊಂಡಗಳಾಗಿವೆ. ಇವನ್ನು ಶುಕ್ರವಾರ ಪುರಸಭೆ ವತಿಯಿಂದ ಮುಚ್ಚುವ ಕಾರ್ಯ ನಡೆಯಿತು. ಇಲ್ಲಿ ಭಂಡಾರ್‌ಕಾರ್ಸ್ ಕಾಲೇಜಿಗೆ ಹೋಗುವ ಸಾವಿರಾರು ಮಕ್ಕಳು ಹಾದು ಹೋಗುತ್ತಾರೆ. ಮಳೆ ನೀರು ನಿಂತರೆ ವಾಹನಗಳ ಓಡಾಟದಿಂದ ಕೆಸರು ನೀರು ಎರಚುತ್ತದೆ. ಈ ಕುರಿತು ಗಮನ ಹರಿಸಿದ ಪುರಸಭೆ ಆಡಳಿತ ಗುಂಡಿ ಮುಚ್ಚಲು ಕ್ರಮ ಕೈಗೊಂಡಿದೆ. ಪುರಸಭೆ ಸದಸ್ಯ ಪ್ರಭಾಕರ್ ಮಾರ್ಗದರ್ಶನ ನೀಡಿದರು.
Advertisement
ಗಮನಕ್ಕೆ ತರಲಾಗಿದೆಮಣ್ಣು ಕುಸಿತವಾಗುತ್ತಿರುವ ಕುರಿತು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಮನಕ್ಕೆ ತರಲಾಗಿದೆ. ಸರಿಪಡಿಸುವ ಭರವಸೆ ನೀಡಿದ್ದಾರೆ.
-ವಿಜಯ್ ಎಸ್. ಪೂಜಾರಿ,
ಪುರಸಭೆ ಮಾಜಿ ಸದಸ್ಯರು -ಲಕ್ಷ್ಮೀ ಮಚ್ಚಿನ