Advertisement
ಕುಂದಾಪುರ, ಬೈಂದೂರು, ಕೊಲ್ಲೂರು ಪ್ರದೇಶದಲ್ಲಿ ಮಳೆ ಕಡಿಮೆಯಿದ್ದರೂ, ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗು ತ್ತಿರುವುದರಿಂದ ಮನೆಗಳಿಗೆ ನುಗ್ಗಿದ ನೀರು ಹಾಗೆಯೇ ಇದ್ದು, ನದಿಗಳು, ಜಲಾವೃತಗೊಂಡ ಕೃಷಿ ಪ್ರದೇಶಗಳು, ರಸ್ತೆಗಳಲ್ಲಿಯೇ ಹರಿಯುತ್ತಿರುವ ನೀರಿನ ಪ್ರಮಾಣ ಏರುತ್ತಲೇ ಇದೆ.
ಚಿಕ್ಕಳ್ಳಿ, ಬಡಾಕೆರೆ ಭಾಗದ ಬಾವುಟಿ ಕಡು ಪ್ರದೇಶ, ನಾಡದ ಕೆಲವು ಮನೆಗಳು, ನಾವುಂದ ಕುದ್ರು ಪ್ರದೇಶದ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರಿನ ಪ್ರಮಾಣ ಬುಧವಾರವೂ ಕಡಿಮೆಯಾಗದ ಕಾರಣ, ಮನೆಯಲ್ಲಿದ್ದವರೆಲ್ಲ ಹೊರಗೆ ಬರಲಾಗದೇ ಮನೆಯೊಳಗೆ ಇದ್ದರು. ಕೆಲವರು ತುರ್ತು ಕೆಲಸಕ್ಕಾಗಿ ಮನೆಯಿಂದ ದೋಣಿ ಮೂಲಕ ಬಂದು, ಪೇಟೆ ಕಡೆಗೆ ಸಂಚರಿಸುತ್ತಿದ್ದುದು ಕಂಡು ಬಂತು.
Related Articles
ಬಡಾಕೆರೆ ಗ್ರಾಮದ ಬಾವುಟಿ ಕಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಳಿ – ಮಳೆಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕಳೆದ 3 ದಿನದಿಂದ ಈ ಭಾಗಗಳಲ್ಲಿ ಕರೆಂಟಿಲ್ಲ. ಮೊಬಲ್ ಸ್ವಿಚ್ ಆಫ್ ಆಗಿದೆ. ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಯಾರಿಗಾದರೂ ಕರೆ ಮಾಡಬೇಕಾಗಬಹುದು ಎನ್ನುವ ಕಾರಣಕ್ಕೆ ನಾನು ದೋಣಿಯ ಮೂಲಕ ಪೇಟೆಗೆ ಬಂದು ಚಾರ್ಜ್ ಮಾಡಲು ಹೋಗುತ್ತಿರುವುದಾಗಿ ಬಾವುಟಿ ಕಡು ನಿವಾಸಿ ವಿಲ್ಫೆಡ್ ಹೇಳಿಕೊಂಡಿದ್ದಾರೆ.
Advertisement
ರಸ್ತೆ ಸಂಚಾರವೂ ಸ್ಥಗಿತಮರವಂತೆಯಿಂದ ಪಡುಕೋಣೆಗೆ ಹೋಗುವ ರಸ್ತೆಯೇ ಹೊಳೆಯಂತೆ ತುಂಬಿ ಹರಿಯುತ್ತಿರು ವುದರಿಂದ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅದಾಗಿಯೂ ಕೆಲವರೂ ಕಷ್ಟಪಟ್ಟು ತೆರಳು ತ್ತಿದ್ದಾರೆ. ನಾವುಂದದಿಂದ ಬಡಾಕೆರೆ, ನಾಡ ಕಡೆಗೆ ಸಂಚರಿಸುವ ಮಾರ್ಗದಲ್ಲಿಯೂ ನೀರು ತುಂಬಿ ಹರಿಯುತ್ತಿರುವುದರಿಂದ ಈ ಮಾರ್ಗದಲ್ಲಿಯೂ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆ ಕೊಂಚ ಇಳಿಮುಖ
ಕುಂದಾಪುರ, ಬೈಂದೂರು ತಾಲೂಕಿನ ಎಲ್ಲೆಡೆ ಬುಧವಾರ ದಿನವಿಡೀ ಮಳೆ ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಈ ಮೊದಲೇ ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ತುಂಬಿ ಹರಿಯುತ್ತಿರುವ ನದಿಗಳು
ಮಳೆ ಕಡಿಮೆಯಿದ್ದರೂ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಾರಾಹಿ, ಸೌಪರ್ಣಿಕಾ, ಚಕ್ರಾ, ಕುಬಾj, ಸುಮನಾವತಿ ನದಿಗಳು ತುಂಬಿ ಹರಿಯುತ್ತಿದೆ. ಕೆಲವೆಡೆಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಜಾನುವಾರು
ಶೆಡ್ ರಚನೆಗೆ ಸೂಚನೆ
ಜಾನುವಾರುಗಳನ್ನು ಸ್ಥಳಾಂತರ ಮಾಡಲು ಕಷ್ಟವಾಗುವುದರಿಂದ ತಾತ್ಕಲಿಕವಾಗಿ ಶೆಡ್ ನಿರ್ಮಿಸಿ, ಜಾನುವಾರುಗಳನ್ನು ಕಟ್ಟಲು ಪಶು ವೈದ್ಯಕೀಯ ಇಲಾಖೆ ಜತೆಗೂಡಿ ಮೇವು ಒದಗಿಸಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಪಿಡಿಒ ಮತ್ತು ಗ್ರಾಮ ಕರಣಿಕರ ತಂಡ ಮಾಡಲಾಗಿದ್ದು, ತುರ್ತು ಸ್ಥಳಾಂತರ ಹೊಣೆ ವಹಿಸಲಾಗಿದೆ. ಶಾಲೆಗಳ ಬೀಗದ ಕೀ ಅನ್ನು ಇಟ್ಟುಕೊಳ್ಳಲಾಗಿದೆ. ಗಂಜಿ ಕೇಂದ್ರಗಳನ್ನು ತೆರೆಯಲು ಈ ಹಿಂದೆಯೇ ಜಾಗ ಗುರುತಿಸಲಾಗಿದೆ.
– ಡಾ| ಎಸ್. ಎಸ್. ಮಧುಕೇಶ್ವರ್, ಕುಂದಾಪುರ ಎಸಿ ಮಳೆ ಹಾನಿ ವಿವರ
ಮಂಗಳವಾರ ಸುರಿದ ಭಾರೀ ಮಳೆಗೆ ಕುಂದಾಪುರ, ಬೈಂದೂರು ಭಾಗದ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಹಕ್ಲಾಡಿಯ ಆಯುಬ್ ಸಾಹೇಬ್ ಮನೆ, ಜಯಲಕ್ಷ್ಮಿಹಟ್ಟಿ, ಕಾವ್ರಾಡಿ ಶಶಿಕಲಾ ಮನೆ, ತಲ್ಲೂರಿನ ಪಾರ್ವತಿ ದೇವಾಡಿಗ ಅವರ ಮನೆಗೆ ಮರ ಬಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಯಡಾಡಿ – ಮತ್ಯಾಡಿಯ ನಾಗರಾಜ ಆಚಾರಿ, ಬಾಬುರಾಯ ಆಚಾರಿ, ಕೃಷ್ಣಯ್ಯ ಆಚಾರಿ, ಮೋಹಿನಿ ಶೆಡ್ತಿ, ಸೀತಾರಾಮ ಆಚಾರಿ, ಹೆಸ್ಕತ್ತೂರಿನಲ್ಲಿ ಭೋಜು ಕುಲಾಲ್, ಬೇಬಿ ಕುಲಾಲ್ತಿ, ಮಮತಾ ಮೊಗವೀರ, ಹೆರಿಯಣ್ಣ ಶೆಟ್ಟಿ, ಮಾಲು ಮೊಗವೀರ, ಪದ್ಮ ಶೆಡ್ತಿ, ಶ್ರೀಕಾಂತ್ ಶೆಟ್ಟಿ ಅವರ ಮನೆಗೆ ನೀರು ನುಗ್ಗಿ ಹಾನಿಯಾಗಿದೆ. ಕೊರವಡಿ ಶಾಲೆಯ ಸಭಾಗೃಹದ ಮಾಡಿಗೆ ಹಾನಿ ಯಾಗಿದೆ. ಗೋಪಾಡಿಯ ಎಂ.ಎ. ಸಿದ್ದಕಿ ಕಾರಿಗೆ ಮರ ಬಿದ್ದು, ಕಾರು ಜಖಂ ಗೊಂಡಿದೆ.