ಕೊಯಮತ್ತೂರು: ಮಣ್ಣು ಸಂರಕ್ಷಿಸಿ ಅಭಿಯಾನದಂಗವಾಗಿ 30,000 ಕಿ.ಮೀ. ಏಕಾಂಗಿ ಬೈಕ್ ಸಂಚಾರವನ್ನು ಈಶಾ ಫೌಂಡೇಶನ್‌ನ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಮಾ. 21ರಂದು ಇಂಗ್ಲಂಡ್‌ನಿಂದ ಆರಂಭಿಸಲಿದ್ದಾರೆ. ಅದಕ್ಕಾಗಿ ಅವರು ಮಾ. 5ರಂದು ಈಶಾ ಯೋಗ ಕೇಂದ್ರದಿಂದ ಇಂಗ್ಲಂಡ್‌ಗೆ ತೆರಳಿದರು.
ಈ ಬೈಕ್ ಸಂಚಾರವು ಒಟ್ಟು 100 ದಿನಗಳಲ್ಲಿ 27 ದೇಶಗಳನ್ನು ಕ್ರಮಿಸಲಿದೆ. 30,000 ದೂರದ ಬೈಕ್ ರ‍್ಯಾಲಿಯಲ್ಲಿ ಮಣ್ಣು ಸಂರಕ್ಷಣೆ ಕುರಿತು ಸದ್ಗುರು ವಿವಿಧೆಡೆ ಉಪನ್ಯಾಸ ನೀಡಲಿದ್ದಾರೆ ಹಾಗೂ ಮಣ್ಣು ಸಂರಕ್ಷಣೆಗೆ ಪೂರಕವಾಗಿ ನೀತಿ ರೂಪಿಸುವಂತೆ 27 ದೇಶಗಳ ನಾಯಕರನ್ನು ಆಗ್ರಹಿಸಲಿದ್ದಾರೆ.
ಜಗತ್ತಿನ 192 ದೇಶಗಳ ಕೃಷಿ ಭೂಮಿಯ ಮಣ್ಣಿನಲ್ಲಿ ಕನಿಷ್ಠ ಶೇ. 3-6ರಷ್ಟು ಸಾವಯವ ಅಂಶ ವಿರಬೇಕು. ಮುಂದಿನ ಜನಾಂಗದ ಹಿತದೃಷ್ಟಿಯನ್ನು ಗಮನಿಸಿ ಇದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಸದ್ಗುರು ಹೇಳಿದರು.
ಭಾರತದಿಂದ ನಿರ್ಗಮಿಸಿದ ಬಳಿಕ ಅವರ ಮೊದಲ ನಿಲುಗಡೆ ಇಂಗ್ಲಂಡ್‌ನಲ್ಲಿ ಆಗಿರಲಿದ್ದು, ಅಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಭಿಯಾನದ ಬಗ್ಗೆ ವಿವರಿಸಲಿದ್ದಾರೆ. ಬಳಿಕ ಕೆರೆಬಿಯನ್ ದ್ವೀಪಕ್ಕೆ ತೆರಳಲಿದ್ದು, ಅಲ್ಲಿ 9-11 ರಾಷ್ಟ್ರಗಳ ಜತೆಗೆ ಮಣ್ಣು ಸಂರಕ್ಷಣೆಗೆ ಸಂಬಂಧಿಸಿ ಒಡಂಬಡಿಕೆಗೆ ಸಹಿ ಹಾಕುವ ನಿರೀಕ್ಷೆ ಯಿದೆ ಎಂದು ಈಶಾ ಫೌಂಡೇಶನ್‌ನ ಪ್ರಕಟನೆ ತಿಳಿಸಿದೆ.