Advertisement
ಉದ್ಯೋಗಾವಕಾಶಕ್ಕೆ ಉತ್ತೇಜನ, ನವೋದ್ಯಮಕ್ಕೆ ಪ್ರೋತ್ಸಾಹ ಹಾಗೂ ಸ್ವ-ಉದ್ಯೋಗ ಸ್ಥಾಪನೆಗೆ ಅಗತ್ಯವಾದ ಆತ್ಮವಿಶ್ವಾಸ ವರ್ಧನೆಗೆ ಮೃದು ಕೌಶಲ್ಯ ತರಬೇತಿ ನೀಡಲಾಗುತ್ತದೆ. ವರ್ಬಲ್ ಮತ್ತು ನಾನ್ ವರ್ಬಲ್ ಸಂವಹನ, ವರದಿ ಬರೆಯುವುದು, ಪವರ್ ಪಾಯಿಂಟ್ ಪ್ರಸ್ತುತಿ, ರೆಸ್ಯೂಮ್ ಬರೆಯುವುದರ ಕುರಿತು ಈ ಯೋಜನೆಯಡಿ ಕಾರ್ಯಾಗಾರ ನಡೆಸಲಾಗುತ್ತದೆ.
Related Articles
Advertisement
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೃದು ಕೌಶಲ್ಯ ವೃದ್ಧಿಗಾಗಿ ಬಿಡುಗಡೆ ಮಾಡಿದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಬಾರದೆಂಬ ಎಚ್ಚರಿಕೆಯನ್ನೂ ನೀಡಿದೆ. ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 33 ಸರ್ಕಾರಿ ಪದವಿ ಕಾಲೇಜು, ಮೈಸೂರಿ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 26 ಸರ್ಕಾರಿ ಪದವಿ ಕಾಲೇಜು,
ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 9 ಸರ್ಕಾರಿ ಪದವಿ ಕಾಲೇಜು, ಮಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 14 ಸರ್ಕಾರಿ ಪದವಿ ಕಾಲೇಜು ಹಾಗೂ ಧಾರವಾಡ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 37 ಸರ್ಕಾರಿ ಪದವಿ ಕಾಲೇಜಿನ ಒಟ್ಟು 8560 ಪರಿಶಿಷ್ಟ ಜಾತಿ, 2328 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.
ಇದಕ್ಕಾಗಿ ಎಸ್‌ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೃದು ಕೌಶಲ್ಯ ವೃದ್ಧಿಗಾಗಿ 847865 ರೂ. ಹಾಗೂ ಪರಿಶಿಷ್ಟ ಪಂಡಗದ ವಿದ್ಯಾರ್ಥಿಗಳ ಮೃದು ಕೌಶಲ್ಯ ಕಾರ್ಯಕ್ರಮಕ್ಕಾಗಿ ಟಿಎಸ್‌ಪಿ ಯೋಜನೆಯಡಿ 397981 ರೂ. ಸೇರಿ ಒಟ್ಟು 1245846 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಬಳಸಿಕೊಂಡು ಮೃದು ಕೌಶಲ್ಯವನ್ನು ಉತ್ತಮ ರೀತಿಯಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೀಡಲು ನಿರ್ದೇಶಿಸಿದೆ.