Advertisement

ಸಾಕ್ರೆಟಿಸನ ಜಗಳಗಂಟಿ ಪತ್ನಿ

10:45 AM Sep 13, 2019 | mahesh |

ಜಗತ್ತು ಕಂಡ ಶ್ರೇಷ್ಠ ತತ್ವಶಾಸ್ತ್ರಜ್ಞರಲ್ಲಿ ಸಾಕ್ರೆಟಿಸ್‌ ಕೂಡಾ ಒಬ್ಬರು. ಗ್ರೀಕ್‌- ರೋನ್‌ ಸಾಹಿತ್ಯಕ್ಕೆ ಆತನ ಕೊಡುಗೆ ಅಪಾರವಾದುದು. ಗ್ರೀಸ್‌ನಲ್ಲಿ ಜೀವಿಸಿದ್ದ ಆತ ಮನುಷ್ಯ ಜೀವನವನ್ನು ಬಹಳ ಸೂಕ್ಷ್ಮವಾಗಿ ಅಭ್ಯಸಿಸಿದಾತ. ಆತನ ಮಾತುಗಳು ಎಂದಿಗೂ ಪ್ರಸ್ತುತ. ಜಗತ್ತಿನ ಪ್ರಖ್ಯಾತ ವ್ಯಕ್ತಿಗಳೆಲ್ಲನೇಕರು ಅವನ್ನು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದಾರೆ. ಇಂತಿಪ್ಪ ಸಾಕ್ರೆಟಿಸ್‌ಗೆ ಒಬ್ಬಳು ಪತ್ನಿ ಇದ್ದಳು ಅವಳ ಹೆಸರು ಕ್ಸಾಂತಿಪ್‌. ಆಕೆ ಗಯ್ನಾಳಿ ಹೆಂಗಸು ಎಂದೇ ಹೆಸರಾಗಿದ್ದಾಳೆ.

Advertisement

ಸದಾ ತನ್ನ ಗಂಡನ ವಿರುದ್ಧ ಜಗಳ ಕಾಯುತ್ತಾ, ಅವನನ್ನು ಮೂದಲಿಸುತ್ತಾ ಇರುವುದೇ ಅವಳ ಸ್ವಭಾವವಾಗಿತ್ತು. ಅಚ್ಚರಿ ಎಂದರೆ ಸಮಾಜದ ಓರೆ ಕೋರೆಗಳನ್ನು ನಿಕೃಷ್ಟವಾಗಿ ಖಂಡತುಂಡವಾಗಿ ವಿರೋಧಿಸುತ್ತಿದ್ದ ಆತ ಎಂದೂ ತನ್ನ ಪತ್ನಿಯನ್ನು ವಿರೋಧಿಸಿದವನಲ್ಲ. ಅವಳು ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದರೂ ಸಹನೆಯಿಂದ ಕೇಳಿಸಿಕೊಂಡು ಸುಮ್ಮನಾಗಿಬಿಡುತ್ತಿದ್ದ. ಆ ಸಮಯದಲ್ಲಿ ಸಾಕ್ರೆಟಿಸ್‌ ಅನೇಕ ಶಿಷ್ಯಂದಿರಿಗೆ ಮನೆಯಲ್ಲೇ ಪಾಠ ಹೇಳುತ್ತಿದ್ದ. ಅವರಲ್ಲೊಬ್ಬನಾಗಿದ್ದ ಕ್ಸಿನೋಫೆನ್‌ಗೆ ಸಾಕ್ರೆಟಿಸ್‌ ಮತ್ತವನ ಪತ್ನಿಯ ನಡುವಿನ ಸಂಬಂಧ ಬಿಡಿಸಲಾರದ ಒಗಟಾಗಿ ತೋರಿತು.

ಆ ಕುರಿತು ಒಮ್ಮೆ ನೇರವಾಗಿ ಆತ ಸಾಕ್ರೆಟಿಸ್‌ನನ್ನೇ ಕೇಳಿಯೂಬಿಟ್ಟಿದ್ದ. ಇದಕ್ಕೆ ಸಾಕ್ರೆಟಿಸ್‌ ನೀಡಿದ ಉತ್ತರ ಹೀಗಿತ್ತು- “ನಾವು ಗಂಡಸರು, ಜೀವನದಲ್ಲಿ ಅತ್ಯುತ್ತಮ ಕುದುರೆ ಸವಾರರಾಗಬೇಕೆಂದು ಬಯಸುವವರು. ನಮ್ಮ ನಿಜವಾದ ಸಾಮರ್ಥ್ಯ ತಿಳಿದು ಬರುವುದು ಅಂಥ ಘಟವಾಣಿಯಂಥ, ಹಠಮಾರಿ ಕುದುರೆ ಹತ್ತಿದಾಗ ಮಾತ್ರ. ಆ ಕುದುರೆಯನ್ನು ಪಳಗಿಸಿದವನಿಗೆ ಜಗತ್ತಿನ ಎಂಥಾ ಹಠಮಾರಿ ಕುದುರೆಯನ್ನಾದರೂ ಪಳಗಿಸುವುದು ನೀರು ಕುಡಿದಷ್ಟೇ ಸಲೀಸು ಎಂಬ ಆತ್ಮವಿಶ್ವಾಸ ಬರುತ್ತದೆ. ಈಗ ನನ್ನದೂ ಗಂಡನಾಗಿ ಇದೇ ಮನಸ್ಥಿತಿ. ನನ್ನ ಪತ್ನಿಯನ್ನೇ ಸಂಭಾಳಿಸಿಕೊಂಡು ಹೋಗಬಲ್ಲೆನಾದರೆ ಜಗತ್ತಿನಲ್ಲಿ ಯಾವ ವ್ಯಕ್ತಿ ಜೊತೆಗಾದರೂ ಉತ್ತಮ ಸಂಬಂಧ ಹೊಂದಬಲ್ಲೆ, ಅದೆಂಥಾ ಸಮಸ್ಯೆಯನ್ನಾದರೂ ತಿಳಿಯಾಗಿಸಬಲ್ಲೆ ಎಂಬ ಆತ್ಮವಿಶ್ವಾಸ ನನಗೆ ಸಿಗುತ್ತಿದೆ.’

ಹವನ

Advertisement

Udayavani is now on Telegram. Click here to join our channel and stay updated with the latest news.

Next