Advertisement

ಭೂಮಿ ತಂತ್ರಾಂಶದಿಂದ ರೈತರಿಗೆ ಸೊಸೈಟಿ ಸಾಲ: ಎಂಎನ್‌ಆರ್‌

12:35 AM Nov 19, 2019 | mahesh |

ಉಡುಪಿ: ಭೂಮಿ ತಂತ್ರಾಂಶವನ್ನು ಸಹಕಾರ ಸೊಸೈಟಿ ತಂತ್ರಾಂಶಗಳಿಗೆ ಅನು ಗುಣವಾಗಿ ಮಾರ್ಪಡಿಸಿ ಆ ಅಂಕಿ-ಅಂಶಗಳ ಆಧಾರದಲ್ಲಿ ಸ್ಥಳದಲ್ಲೇ ರೈತರಿಗೆ ಸಾಲ ನೀಡಲು ಬದ್ಧರಾಗಿದ್ದೇವೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ
ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ತಿಳಿಸಿದರು.

Advertisement

ರಾಜ್ಯ ಸಹಕಾರ ಮಹಾಮಂಡಳ, ಉಭಯ ಜಿಲ್ಲಾ ಸಹಕಾರಿ ಯೂನಿಯನ್‌, ವಿವಿಧ ಸಹಕಾರಿ ಸಂಸ್ಥೆಗಳ ಸಹಕಾರದಲ್ಲಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಅ.ಭಾ. ಸಹಕಾರ ಸಪ್ತಾಹದ ಸಮಾವೇಶದಲ್ಲಿ ಮೊಳಹಳ್ಳಿ ಶಿವರಾವ್‌ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

2020ರ ಜನವರಿ, ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯುವ ಸಮಾ ವೇಶದಲ್ಲಿ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸೀರೆ, ಸಮವಸ್ತ್ರ ಗಳನ್ನು ನೀಡಲಾಗುವುದು. ನಾವು ಸಾಲಮನ್ನಾ, ಬಡ್ಡಿಮನ್ನಾ, ಬೆಳೆ ವಿಮೆಯಂತಹ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಆದ್ಯತೆ ಕೊಡುತ್ತೇವೆ. ಆದರೆ ಸರಕಾರ ನಮ್ಮ ಸಂಕಷ್ಟಗಳಿಗೂ ಸ್ಪಂದಿಸಬೇಕು ಎಂದು ಹೇಳಿದರು.

ಇಬ್ಬಗೆ ನೀತಿಗೆ ಗಂಗಣ್ಣ ಖಂಡನೆ
“ಸಹಕಾರ’ ವಾರ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್‌. ಗಂಗಣ್ಣ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೊಂದು ನೀತಿ, ಸಹಕಾರ ಸಂಸ್ಥೆಗಳಿಗೆ ಇನ್ನೊಂದು ನೀತಿಯನ್ನು ನಾವು ಆಕ್ಷೇಪಿಸುತ್ತೇವೆ. ಸ್ವಂತ ಹಣದಿಂದ ಲಾಭ ಗಳಿಸಿ ಮುನ್ನಡೆಯುತ್ತಿರುವ ಪಟ್ಟಣ/ ಪತ್ತಿನ ಸಹಕಾರಿ ಸಂಸ್ಥೆಗಳು ಶೇ. 30 ತೆರಿಗೆ ಕಟ್ಟಬೇಕೆಂಬ ನೀತಿಯನ್ನು ನಾವು ಒಪ್ಪುವುದಿಲ್ಲ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸ್ವಾಗತಿಸಿ, ಸಿಇಒ ಪುರುಷೋತ್ತಮ ಎಸ್‌.ಪಿ. ವಂದಿಸಿದರು. ವಾಲ್‌ಸ್ಟನ್‌ ಶಂಕರಪುರ ಕಾರ್ಯಕ್ರಮ ನಿರ್ವಹಿಸಿದರು. ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಎಚ್‌.ಎಸ್‌. ನಾಗರಾಜಯ್ಯ ದಿಕ್ಸೂಚಿ ಭಾಷಣ ಮಾಡಿದರು.

Advertisement

ಜಿ.ಪಂ. ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು, ಜಿಲ್ಲಾ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶಪಾಲ್‌ ಸುವರ್ಣ, ಸ್ಕ್ಯಾಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ, ಬೆಂಗಳೂರು ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ಸುದರ್ಶನ ಜೈನ್‌, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ ಕೌಶಲ ಶೆಟ್ಟಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಬಿ.ಎಸ್‌. ಹರೀಶ್‌, ಎಸ್‌.ಎನ್‌. ಅರುಣ ಕುಮಾರ್‌, ಅಪರ ನಿಬಂಧಕಿ ನುಸ್ರತ್‌ ಮುವಾಹಿದ್‌ ಬೇಗಂ, ಉಪನಿಬಂಧಕರಾದ ಮಂಗಳೂರಿನ ಪ್ರವೀಣ್‌ ನಾಯಕ್‌, ಚಂದ್ರಪ್ರತಿಮಾ ಎಂ.ಜೆ., ನವೋದಯ ಗ್ರಾಮ ವಿಕಾಸ ಚಾರಿಟೆಬಲ್‌ ಟ್ರಸ್ಟ್‌ ಸಿಇಒ ಪೂರ್ಣಿಮಾ ಶೆಟ್ಟಿ, ಸಹಕಾರಿಗಳಾದ ಸರಳಾ ಕಾಂಚನ್‌, ಕೆ.ಕೆ. ಸರಳಾಯ, ಬೆಳಪು ದೇವಿಪ್ರಸಾದ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಗೋಪಿಕೃಷ್ಣ ರಾವ್‌, ಶಿವಕುಮಾರ ಗೌಡ ಪಾಟೀಲ್‌, ಪ್ರಕಾಶ್ಚಂದ್ರ ಶೆಟ್ಟಿ, ಅಶೋಕಕುಮಾರ ಬಲ್ಲಾಳ್‌ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮತ್ತೆ ಯಶಸ್ವಿನಿ: ರಘುಪತಿ ಭಟ್‌
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಘುಪತಿ ಭಟ್‌, ಸಹಕಾರಿ ಸಂಸ್ಥೆಗಳ ಮೂಲಕ ಯಶಸ್ವಿಯಾಗಿ ನಡೆಯುತ್ತಿದ್ದ ಯಶಸ್ವಿನಿ ಯೋಜನೆಯನ್ನು ಮತ್ತೆ ಆರಂಭಿಸಲಾಗುವುದು. ಫೆಬ್ರವರಿಯಲ್ಲಿ ಬಜೆಟ್‌ ಮಂಡನೆ ವೇಳೆ ಈ ಯೋಜನೆಯನ್ನು ಘೋಷಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ ಎಂದರು. ಸಹಕಾರಿ ಕಾನೂನು ಜಾರಿಗೆ ಬರುವ 400-500 ವರ್ಷಗಳ ಹಿಂದೆಯೇ ಮೀನುಗಾರರು ಈ ತಣ್ತೀದ ಆಧಾರದಲ್ಲಿ ಬದುಕು ಸವೆಸುತ್ತಿದ್ದ ಹಿರಿಮೆ ಕರಾವಳಿ ಜಿಲ್ಲೆಗೆ ಇದೆ ಎಂದವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next