Advertisement

ಸಮಾಜವು ನಿಮ್ಮೊಂದಿಗೆ ಇದೆ: ಚಂದ್ರಪ್ರಕಾಶ್‌ ಶೆಟ್ಟಿ

07:40 PM May 06, 2019 | mahesh |

ಬಂಟ್ವಾಳ: ವಾಹನ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ತುಂಬೆ ಬಾಳೆಹಿತ್ಲು ನಿವಾಸಿ ಗೋಪಾಲ ಕುಲಾಲ್‌ ಅವರಿಗೆ ತುಂಬೆ ವಲಯ ಕಾಂಗ್ರೆಸ್‌ ಆಶ್ರಯದಲ್ಲಿ 50 ಸಾವಿರ ರೂ. ಸಾಂತ್ವನ ನಿಧಿಯನ್ನು ಸಮರ್ಪಿಸಲಾಯಿತು.

Advertisement

ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ ಮಾತನಾಡಿ, ನಾವು ನೀಡುವ ಆರ್ಥಿಕ ಸಹಾಯ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಸಮಾಜವು ನಿಮ್ಮೊಂದಿಗೆ ಇದೆ ಎಂಬುದರ ದ್ರೋತಕವಾಗಿದೆ. ಯಾರಿಗೂ ದೈಹಿಕವಾಗಿ ಊನ ಬರಬಾರದು. ದುರ್ದೆವ್ಯದಿಂದ ಘಟನೆ ನಡೆದಿದೆ. ಬದುಕನ್ನು ಸವಾಲಾಗಿ ಸ್ವೀಕರಿಸಿ. ಆಧುನಿಕ ಯುಗದಲ್ಲಿ ಕಾಲು ಜೋಡಣೆ, ಎಲ್ಲರಂತೆ ಬದುಕು ಸಾಗಿಸಲು ಸಾಕಷ್ಟು ಅವಕಾಶ ಇದೆ. ಎಲ್ಲರಂತೆ ಮುಂದಿನ ಬದುಕು ಸಾಗಿಸಲು ಇನ್ನಷ್ಟು ನೆರವು-ಸಹಕಾರ ನೀಡುವುದಾಗಿ ಪ್ರಕಟಿಸಿದರು.

ಡಿಸಿಸಿ ಕಾರ್ಯದರ್ಶಿ ಮೋನಪ್ಪ ಮಜಿ, ಮುಡಿಪು ವಲಯ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಇಮ್ತಿಯಾಜ್‌ ತುಂಬೆ, ವಲಯ ಕಾಂಗ್ರೆಸ್‌ ತುಂಬೆ ಅಧ್ಯಕ್ಷ ಗಣೇಶ್‌ ಸಾಲ್ಯಾನ್‌, ಮುಡಿಪು ವಲಯ ಕಾಂಗ್ರೆಸ್‌ ಕಾರ್ಯದರ್ಶಿ ದೇವದಾಸ್‌ ಪರ್ಲಕ್ಕೆ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗೋಪಾಲಕೃಷ್ಣ ತುಂಬೆ, ಪಕ್ಷದ ಪ್ರಮುಖರಾದ ಪ್ರಕಾಶ್‌ ಶೆಟ್ಟಿ ಶ್ರೀಶೈಲ ತುಂಬೆ, ನಿಸಾರ್‌ ಅಹ್ಮದ್‌, ಮಹಾಬಲ ಮಜಿ, ಅಬ್ದುಲ್‌ ರಶೀದ್‌, ಜಗದೀಶ ಗಟ್ಟಿ ಪರ್ಲಕ್ಕೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next