Advertisement

ಆತ್ಮಹತ್ಯೆಗೆ ಸಮಾಜ ಶರಣಾಗದು: ಜೇಟ್ಲಿ

02:15 AM Jan 22, 2019 | |

ಹೊಸದಿಲ್ಲಿ:ವಿಪಕ್ಷಗಳ ಮಹಾಮೈತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಹಾಗೂ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರೂ ಹರಿಹಾಯ್ದಿದ್ದಾರೆ.

Advertisement

ಮಹಾಘಟಬಂಧನ್‌ಗೆ ಮತ ಹಾಕುವ ಮೂಲಕ ಮಹತ್ವಾಕಾಂಕ್ಷಿ ಸಮಾಜವು ‘ಸಾಮೂಹಿಕ ಆತ್ಮಹತ್ಯೆ’ಗೆ ಶರಣಾಗುವುದಿಲ್ಲ ಎಂದು ಅಮೆರಿಕದಲ್ಲಿ ಆರೋಗ್ಯ ತಪಾಸಣೆಗೆಂದು ತೆರಳಿರುವ ಸಚಿವ ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ‘ಅಜೆಂಡಾ ಫಾರ್‌ 2019 ಮೋದಿ ವರ್ಸಸ್‌ ಚಾವೋಸ್‌’ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 1971ರ ಪರಿಸ್ಥಿತಿಗೂ, ಈಗಿನ ಸ್ಥಿತಿಗೂ ವ್ಯತ್ಯಾಸವಿದೆ. ಈ ಬಾರಿಯದ್ದು ಮೋದಿ ವರ್ಸಸ್‌ ದೀರ್ಘ‌ಕಾಲ ಉಳಿಯದಂಥ ಮೈತ್ರಿಯ ನಡುವಿನ ಸಮರ. ಇದನ್ನು ಮೋದಿ ವರ್ಸಸ್‌ ಅವ್ಯವಸ್ಥೆ ಎಂದೂ ಬಣ್ಣಿಸಬಹುದು. ದೇಶದ ಜನರಿಗೆ ಪ್ರಧಾನಿ ಮೋದಿ ಅವರ ಆಡಳಿತದ ಬಗ್ಗೆ ತೃಪ್ತಿಯಿದೆ. ಅವರು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಇದರಿಂದ ಭೀತಿಗೊಂಡ ಪ್ರತಿಪಕ್ಷಗಳು ಈಗ ಒಂದಾಗಿ ಮೋದಿ ಅವರ ವಿರುದ್ಧ ಸೆಣಸಲು ಹೊರಟಿವೆ ಎಂದೂ ಜೇಟ್ಲಿ ಹೇಳಿದ್ದಾರೆ.

ಸರಕಾರಕ್ಕೆ ಯಾವುದೇ ಸವಾಲಿಲ್ಲ: ಈ ಲೋಕಸಭೆ ಚುನಾವಣೆ ವೇಳೆ ಸರಕಾರಕ್ಕೆ ಯಾವ ಸವಾಲೂ ಎದುರಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ನಾವು ಬಲಿಷ್ಠ ಮತ್ತು ಜನಪ್ರಿಯ ನಾಯಕತ್ವವನ್ನು ಹೊಂದಿದ್ದೇವೆ. ಅಲ್ಲದೆ, ಜನಸಾಮಾನ್ಯನಿಗೆ ನಮ್ಮಲ್ಲಿ ವಿಶ್ವಾಸವಿದೆ. ಇದನ್ನು ನೋಡಿ ವಿಪಕ್ಷಗಳೇ ಹೆದರಿವೆ ಎಂದು ಸಿಂಗ್‌ ಹೇಳಿದ್ದಾರೆ. ಇದೇ ವೇಳೆ, ದೇಶವು ಹೊಸ ಪ್ರಧಾನಿಯನ್ನು ನೋಡಲ ಬಯಸಿದೆ. ಬಿಜೆಪಿಯಲ್ಲಿ ಬೇರೆ ಪ್ರಧಾನಿ ಅಭ್ಯರ್ಥಿಯಿದ್ದರೆ, ಹೆಸರು ಘೋಷಿಸಲಿ ಎಂದು ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಸವಾಲು ಹಾಕಿದ್ದಾರೆ. ಇದೇ ವೇಳೆ, ಮಿತ್ರಪಕ್ಷ ಶಿವಸೇನೆ ಕೂಡ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದು, ‘ವಿಪಕ್ಷಗಳು ಒಂದಾಗುತ್ತಿದ್ದಂತೆ ಪ್ರಧಾನಿ ಮೋದಿಯವರಿಗೆ ನಡುಕ ಶುರುವಾಗಿ ದ್ದೇಕೆ? ಮೋದಿಯವರು ತಮ್ಮ ಸರಕಾರ ಅಜರಾಮರವಾಗಿರುತ್ತದೆ ಎಂದು ಭ್ರಮಿಸುವುದನ್ನು ನಿಲ್ಲಿಸಲಿ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next