Advertisement

ಸೊಸೈಟಿಗಳ ಸಮಸ್ಯೆ ಇತ್ಯರ್ಥಕ್ಕೆ ಮನವಿ

11:27 AM Jun 12, 2022 | Team Udayavani |

ಆಳಂದ: ಸರ್ಕಾರಗಳು ಕೈಗೊಂಡ ಸಾಲಮನ್ನಾ ಫಲಾನುಭವಿಗಳಿಗೆ ಅನ್ವಯಿಸುವುಂತೆ ಕ್ರಮ ಸೇರಿದಂತೆ ಸೊಸೈಟಿಗಳ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಡಿಸಿಸಿ ಬ್ಯಾಂಕ್‌ ನೂತನ ಎಂಡಿ ಶರಣಬಸಪ್ಪ ಬೆಣ್ಣೂರ ಅವರಿಗೆ ಮಾದನಹಿಪ್ಪರಗಾ ಸೊಸೈಟಿ ಸಂಘದ ಅಧ್ಯಕ್ಷ ಲಿಂಗರಾಜ ಪಾಟೀಲ ಝಳಕಿ ನೇತೃತ್ವದ ನಿಯೋಗವು ಭೇಟಿ ಮಾಡಿ ಮನವಿ ಮಾಡಿದೆ.

Advertisement

ಈ ಕುರಿತು ನೂತನ ಎಂಡಿ ಶರಣಬಸಪ್ಪ ಬೆಣ್ಣೂರ ಅವರಿಗೆ ಸನ್ಮಾನಿಸಿ ಗೌರವಿಸಿದ ನಿಯೋಗದ ಮುಖಂಡ ಲಿಂಗರಾಜ ಪಾಟೀಲ ಅವರು, ರೈತರಿಗೆ ಅನುಕೂಲವಾಗುವ ಹೊಸ ಯೋಜನೆಗಳನ್ನು ಕೈಗೊಳ್ಳಬೇಕು. ಮಾದನಹಿಪ್ಪರಗಾ ಸೊಸೈಟಿಗೆ ರಸಗೊಬ್ಬರ ವಿತರಣೆ ಅನುಮತಿ ನೀಡಬೇಕು. ಸರ್ಕಾರ ಕೈಗೊಂಡ ಸಾಲಮನ್ನಾ ಯೋಜನೆ ಅನೇಕ ಫಲಾನುಭವಿಗಳ ಸಾಲಮನ್ನಾವಾಗಿಲ್ಲ. ಇಂಥ ಫಲಾನುಭವಿಗಳಿಗೆ ಶೀಘ್ರವೇ ಸಾಲಮನ್ನಾ ಮಂಜೂರಾತಿ ನೀಡಲು ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆ ಈಡೇರಿಕೆಗೆ ಮನವಿ ಮಾಡಿದರು.

ನಿಯೋಗದ ಅಹವಾಲು ಆಲಿಸಿದ ಬೆಣ್ಣೂರ ಅವರು, ಸೊಸೈಟಿಗಳ ಬೇಡಿಕೆ ಕುರಿತು ವಾರದಲ್ಲಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾದನಹಿಪ್ಪರಗಾ ಸೊಸೈಟಿ ಕಾರ್ಯದರ್ಶಿ ಶಿವಾನಂದ ಪಾಟೀಲ, ಮಲ್ಲಿನಾಥ ಘಂಟೆ, ಭೋಗೇಶ ಭೊರಳ್ಳಿ ಹಾಗೂ ಆಳಂದ ತಾಲೂಕಿನ ಅನೇಕ ಸೊಸೈಟಿಗಳ ಕಾರ್ಯದರ್ಶಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next