Advertisement
ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಬೆಳ್ವೆ ಹಾಗೂ ಗೀತಾ ಎಚ್.ಎಸ್.ಎನ್. ಫೌಂಡೇಶನ್ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಅಮಾಸೆಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೋಟ್ ಪುಸ್ತಕ ಹಾಗೂ ಬ್ಯಾಗ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಿ, ಮಾತನಾಡಿದರು.
Related Articles
Advertisement
ಜಿ.ಪಂ. ಸದಸ್ಯೆ ಸುಪ್ರೀತಾ ಉದಯ ಕುಲಾಲ ಕಂಪ್ಯೂಟರ್ ಶಿಕ್ಷಕರ ಸಂಭಾವನೆ ಚೆಕ್‌ನ್ನು ಮತ್ತು ತಾ. ಪಂ. ಸದಸ್ಯೆ ಜ್ಯೋತಿ ಅವರು ಗೌರವ ಶಿಕ್ಷಕರ ಸಂಭಾವನೆ ಚೆಕ್ ವಿತರಣೆ ಮಾಡಿದರು.
ಅಮಾಸೆಬೈಲು ಗ್ರಾ. ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದರು.ಮುಖ್ಯ ಅಮಾಸೆಬೈಲು ಗ್ರಾ. ಪ. ಉಪಾಧ್ಯಕ್ಷ ಭೋಜರಾಜ ಪೂಜಾರಿ, ಸದಸ್ಯರಾದ ಕೃಷ್ಣ ಪೂಜಾರಿ ಕೊçಲಾಡಿ, ಕಸ್ತೂರಿ ಶೆಟ್ಟಿ, ಎಡಲಿನ್ ರೋಸಿ, ಅಮಾಸೆಬೈಲು ಪೊಲೀಸ್ ಠಾಣಾಧಿಕಾರಿ ಸೌಮ್ಯ ಜೆ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆರ್. ನವೀನಚಂದ್ರ ಶೆಟ್ಟಿ ರಟ್ಟಾಡಿ, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಅಮಾಸೆಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಅಮಾಸೆಬೈಲು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ತಿಮ್ಮಪ್ಪ, ಶಾಲೆಯ ಎಸ್‌ಡಿಎಂಸಿ ಆಧ್ಯಕ್ಷ ನರಸಿಂಹ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಅವರನ್ನು ಸಮ್ಮಾನಿಸಲಾತು. ಕಂಪ್ಯೂಟರ್ ಶಿಕ್ಷಕರ ಸಂಭಾವನೆ ಮತ್ತು ಗೌರವ ಶಿಕ್ಷಕರ ಸಂಭಾವನೆ ಚೆಕ್ ವಿತರಿಸಲಾಯಿತು.
ಶಾಲೆಯಲ್ಲಿ ಪ್ರತಿ ಶನಿವಾರ ಮಧ್ಯಾಹ್ನ ಯಕ್ಷಗಾನ ಹೆಜ್ಜೆ ತರಬೇತಿ ತರಗತಿ ಉದ್ಘಾಟನೆ ಜರಗಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಪಡೆದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಶಶಾಂಕ, ಸುಶ್ಮೀತಾ ಮತ್ತು ಮನೀಷ್ ಅವರನ್ನು ಸಮ್ಮಾನಿಸಲಾಯಿತು. ವಯೋನಿವೃತ್ತಿ ಹೊಂದಿದ ಕೆಳಾಸುಂಕ ಶಾಲೆಯ ಮುಖ್ಯ ಶಿಕ್ಷಕ ಪಟ್ಟಾಭಿರಾಮ ಭಟ್ ಅವರನ್ನು ಗೌರವಿಸಲಾಯಿತು. ಒಟ್ಟು 33 ಶಾಲೆಗಳ ವಿದ್ಯಾರ್ಥಿಗಳಿಗೆ ಸುಮಾರು 10 ಲಕ್ಷ ರೂ. ಮೊತ್ತದ ವೆಚ್ಚದಲ್ಲಿ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಹಾಗೂ ಲೇಖನ ಸಾಮಾಗ್ರಿಗಳ ವಿತರಣೆ ಮಾಡಲಾಯಿತು.
ಮುಖ್ಯ ಶಿಕ್ಷಕ ಶೇಖರ ಯು ಸ್ವಾಗತಿಸಿದರು. ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ ಎ. ಶಂಕರ ಐತಾಳ್ ಪ್ರಾಸ್ತವಿಸಿದರು. ಶಿಕ್ಷಕ ಕರುಣಾಕರ ಶಾಲೆಗಳ ಪಟ್ಟಿ ವಾಚಿಸಿದರು. ದೈಹಿಕ ಶಿ. ಶಿಕ್ಷಕ ರತ್ನಾಕರ ಎಚ್. ನಿರೂಪಿಸಿದರು. ಟ್ರಸ್ಟಿ ಮುಸ್ತಾಕ್ ಅಹ್ಮದ್ ವಂದಿಸಿದರು.