Advertisement

ಚವ್ಹಾಣ ಸಾಮಾಜಿಕ ಕಾರ್ಯ ಶ್ಲಾಘನೀಯ

09:40 AM Jul 07, 2017 | |

ಔರಾದ: ತಂದೆ-ತಾಯಿಯನ್ನು ಕಳೆದುಕೊಂಡು ರಸ್ತೆಯಲ್ಲಿ ಅಲೆಯುತ್ತಿದ್ದ ಹೆಣ್ಣು ಮಗುವಿಗೆ ಶಿಕ್ಷಣ ಹಾಗೂ ಕಂಕಣ ಭ್ಯಾಗ್ಯ
ಕಲ್ಪಿಸಿಕೊಟ್ಟಿರುವ ಶಾಸಕ ಪ್ರಭು ಚವ್ಹಾಣ ಅವರ ಕಾರ್ಯ ಶ್ಲಾಘನೀಯ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಪಟ್ಟಣದಲ್ಲಿ ಗುರುವಾರ ಪ್ರಭು ಎಂಟರ್‌ ಪ್ರೈಜಸ್‌ ಸಂಸ್ಥೆಯಿಂದ ನಡೆದ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ರಕ್ತದಾನ ಶಿಬಿರ ಮತ್ತು 2 ಲಕ್ಷ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು. ಸರ್ಕಾರದ ಕೆಲಸ, ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸುವುದು ಶಾಸಕರ ಕರ್ತವ್ಯವಾಗಿದೆ. ಆದರೆ ಶಾಸಕ ಪ್ರಭು ಚವ್ಹಾಣ ಅವರು ಸರ್ಕಾರಿ ಕೆಲಸದೊಂದಿಗೆ ತಮ್ಮ ತಾಲೂಕಿನಲ್ಲಿ ಸಾಮಾಜಿಕ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಪ್ರಭು ಚವ್ಹಾಣ ಅವರಿಗೆ ಕನ್ನಡ ಭಾಷೆ ಬಾರದೆ ಇದ್ದರೂ ಬಿಜೆಪಿ ಸರ್ಕಾರದ ಆಡಳಿತಾವ ಧಿಯಲ್ಲಿ ಅಂದಿನ ಮುಖ್ಯಮಂತ್ರಿ
ಬಿ.ಎಸ್‌. ಯಡಿಯೂರಪ್ಪ ಅವರಿಂದ ನೂರಾರು ಕೋಟಿ ಅನುದಾನವನ್ನು ತಾಲೂಕಿಗೆ ತಂದು ಉತ್ತಮ ಕಾರ್ಯಗಳನ್ನು
ಮಾಡಿದ್ದಾರೆ. ಇದೀಗ ಶಾಸಕರಿಗೆ ಉತ್ತಮ ಅಭಿವೃದ್ಧಿ ಮಾಡುವ ಹಂಬಲವಿದೆ. ಆದರೆ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಉತ್ತಮ
ಕೆಲಸಗಳಿಗೆ ಕತ್ತರಿ ಹಾಕಿ ಜನ ವಿರೋಧಿ  ಕೆಲಸ ಮಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕೈ ಪಕ್ಷಕ್ಕೆ ತಕ್ಕ ಪಾಠ ಕಲಿಸಿ
ಬಿಜೆಪಿಯನ್ನು ಅಧಿ ಕಾರಕ್ಕೆ ತರಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.

ಶಾಸಕ ಪ್ರಭು ಚವ್ಹಾಣ ಮಾತನಾಡಿ, ತಾಲೂಕಿನ ಜನರ ಸಮಸ್ಯೆಗಳನ್ನು ಸರಿಪಡಿಸುವುದರ ಜೊತೆಗೆ ಉತ್ತಮ ಆಡಳಿತ
ನೀಡುವುದೇ ನನ್ನ ಗುರಿಯಾಗಿದೆ. ತಾಲೂಕಿನ 4 ಲಕ್ಷ ಜನರ ಸೇವಕ ನಾನಾಗಿದ್ದೇನೆ ಎಂದರು. 9 ವರ್ಷಗಳಿಂದ ತಾಲೂಕಿನ
ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಸಿದ್ಧತಾ ಸಭೆಗಳ ಮೂಲಕ ಹಾಗೂ ಸನ್ಮಾನಿಸಿ ಪ್ರೋತ್ಸಾಹಿಸುವ
ಮೂಲ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ತಮಲೂರಿನ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ,
ಬಾಬುರಾವ್‌ ಮದಕಟ್ಟಿ, ದತ್ತು ತುಗಾಂವಕರ್‌, ಜಿಪಂ ಸದಸ್ಯ ಅನೀಲ ಗುಂಡಪ್ಪ, ಮಾರುತಿ ಚವ್ಹಾಣ, ಡಾ|ಕಲ್ಲಪ್ಪ ಉಪ್ಪೆ,
ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ ಪಾಟೀಲ, ಮುಖಂಡ ಪ್ರಕಾಶ ಅಲ್ಮಾಜೆ, ದೀಪಕ ಪಾಟೀಲ, ಕಿರಣ ಪಾಟೀಲ, ಶಿವರಾಜ
ಅಲ್ಮಾಜೆ, ಪ್ರತಿಭಾವಂತ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ ಇಲಾಖೆ ಅಧಿ ಕಾರಿಗಳು ಇದ್ದರು.

Advertisement

ಶೈಕ್ಷಣಿಕ ಫಲಿತಾಂಶ ಸುಧಾರಣೆ
ಸಮಾಜ ಸೇವೆಯ ಜೊತೆಗೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡಲು ಶಾಸಕ ಪ್ರಭು ಚವ್ಹಾಣ ಮಾಡುತ್ತಿರುವ ಕಾಯಕ
ಉತ್ತಮವಾಗಿದೆ. ಅವರ ನಿಸ್ವಾರ್ಥ ಸೇವೆಯಿಂದ ಶೇ.35ಕ್ಕೆ ಕುಸಿದಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಇದೀಗ ಶೇ.77 ಆಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ| ಬಸವಲಿಂಗ
ಪಟ್ಟದೇವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next