Advertisement
ಮಹಾಲಿಂಗಪುರ: ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಪಟ್ಟಣದ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು, ಯುವಕ ಸಂಘದ ಕಾರ್ಯಕರ್ತರು ಕಡುಬಡವರಿಗೆ, ಕೊರೊನಾ ವಾರಿಯರ್ಗೆ, ಪೌರ ಕಾರ್ಮಿಕರಿಗೆ, ಲಾರಿ ಚಾಲಕರಿಗೆ ಊಟ- ಉಪಹಾರ, ಚಹಾ ವಿತರಿಸುವುದರ ಜತೆಗೆ ಮಾಸ್ಕ್, ಸ್ಯಾನಿಟೈಸರ್ ನೀಡುವ ಹಲವರ ಸಂಕಷ್ಟಕ್ಕೆ ನೆರವಾಗಿದ್ದಾರೆ.
Related Articles
Advertisement
ಬಸವನಗರ-ವಿದ್ಯಾನಗರದ ಪ್ರತಿ ಮನೆಗೆ ನೀರಿನ ಡಬ್ಬಿ, ಕಸದ ಸಂಗ್ರಹಣೆಯ ಬಕೆಟ್, ಕಡು ಬಡವರಿಗೆ ಆಹಾರ ಕಿಟ್ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಮಯದಲ್ಲಿ ಬಡವರು- ನಿರ್ಗತಿಕರ ಸೇವೆ ಮಾಡುವುದು ಸೌಭಾಗ್ಯ ಎನ್ನುತ್ತಾರೆ ಸಮಾಜ ಸೇವಕ ಚನಬಸು ಹುರಕಡ್ಲಿ. ಕರ್ತವ್ಯದ ಜತೆ ಸೇವಾಕಾರ್ಯ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ, ಠಾಣಾಧಿಕಾರಿ ಜಿ.ಎಸ್. ಉಪ್ಪಾರ, ಸರಕಾರಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ಗೋಣಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಾಗೃತಿ ಮೂಡಿಸುವುದು, ತಿಳಿವಳಿಕೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಠಾಣಾಧಿಕಾರಿ ಜಿ.ಎಸ್.ಉಪ್ಪಾರ ಪೊಲೀಸ್ ಇಲಾಖೆ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಮಹಾಲಿಂಗೇಶ್ವರ ಗೋಶಾಲೆಗೆ ಮೇವು ಪೂರೈಸಿದ್ದಾರೆ. ಪಟ್ಟಣದ ನಾಲ್ಕು ಕೋವಿಡ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ಊಟ-ಉಪಹಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಸೇವಾನಿರತ ನಾಯಕರು: ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಹಾಗೂ ಅಭಿಮಾನಿ ಬಳಗದವರು ಸಹ ಕೆಂಗೇರಿಮಡ್ಡಿಯಲ್ಲಿನ ಬಡವರಿಗೆ ತರಕಾರಿ ಕಿಟ್, ಪೊಲೀಸರಿಗೆ ಮಾಸ್ಕ್ ವಿತರಿಸಿದ್ದಾರೆ.
ರಬಕವಿಯ ಡಾ| ಪದ್ಮಜೀತ್ ನಾಡಗೌಡ ಅವರು ಕೋವಿಡ್ ಸೆಂಟರ್ ರೋಗಿಗಳಿಗೆ ನಿರಂತರ ಊಟದ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್ ಯುವ ಕಾರ್ಯಕರ್ತ ಸೂರಜ್ ಅವಟಿ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಬಿಜೆಪಿ ಮುಖಂಡ ಚನ್ನಪ್ಪ ಪಟ್ಟಣಶೆಟ್ಟಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಗ್ರಾಪಂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸುತ್ತಿದ್ದಾರೆ.