Advertisement

ಸಮಾಜ ಕಲ್ಯಾಣ ಮಂಡಳಿ ಸದಸ್ಯತ್ವ ಅನರ್ಹತೆಗೆ ದಾರಿ

10:00 AM Feb 12, 2018 | Harsha Rao |

ಹೊಸದಿಲ್ಲಿ: ಕೇಂದ್ರೀಯ ಸಮಾಜ ಕಲ್ಯಾಣ ಮಂಡಳಿ (ಸಿಎಸ್‌ಡಬ್ಲ್ಯುಬಿ)ಯ ಸದಸ್ಯರಾಗುವ ಸಂಸದರು ಸ್ಥಾನ ಕಳೆದುಕೊಳ್ಳಲಿದ್ದಾರೆಯೇ? ಕಾನೂನು ಮತ್ತು ನ್ಯಾಯ ಖಾತೆಗಾಗಿನ ಸಂಸತ್‌ನ ಸ್ಥಾಯೀ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಇಂತಹುದೊಂದು ಶಿಫಾರಸು ಮಾಡಿದೆ. ಲಾಭದಾಯಕ ಹುದ್ದೆಯ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಮಿತಿ ಸಿಎಸ್‌ಡಬ್ಲ್ಯುಬಿಯ ಸಾಮಾನ್ಯ ಮಂಡಳಿ ಸದಸ್ಯರಾಗುವ ಸಂಸದರು ತಮ್ಮ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ ಎಂದಿದೆ. ಬಿಜೆಪಿ ಸಂಸದ ಕಲ್‌ರಾಜ್‌ ಮಿಶ್ರಾ ನೇತೃತ್ವದ, ಲೋಕಸಭೆಯಿಂದ 15 ಮತ್ತು ರಾಜ್ಯಸಭೆಯಿಂದ 10 ಸಂಸದರನ್ನು ಹೊಂದಿರುವ ಸಮಿತಿ ಈ ವರದಿ ನೀಡಿದೆ. 

Advertisement

ಸಿಎಸ್‌ಡಬ್ಲ್ಯುಬಿ ನೋಂದಾಯಿತ ಲಾಭರಹಿತ ಸಂಸ್ಥೆಯಾಗಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಒಟ್ಟು 56 ಸದಸ್ಯರ ಪೈಕಿ ಇಬ್ಬರು ಸಂಸದರು ಲೋಕಸಭೆಯಿಂದ, ರಾಜ್ಯಸಭೆಯಿಂದ ಒಬ್ಬರನ್ನು ನೇಮಕ ಮಾಡಲಾಗುತ್ತದೆ. ಸದಸ್ಯತ್ವದ ಅವಧಿ ಮೂರು ವರ್ಷಗಳು. 

Advertisement

Udayavani is now on Telegram. Click here to join our channel and stay updated with the latest news.

Next