Advertisement

ಸಮುದಾಯ ಸಂಸ್ಥೆಗಳಿಂದ ಸಮಾಜದ ಉನ್ನತಿ: ಆರ್‌. ಎಂ. ಭಂಡಾರಿ

01:35 PM Sep 10, 2019 | Suhan S |

ಮುಂಬಯಿ, ಸೆ. 9: ಸ್ವಸಮಾಜದ ಸರ್ವೋನ್ನತಿಗೆ ಸಮುದಾಯದ ಸಂಸ್ಥೆಗಳೆ ಬೆನ್ನೆಲುಬು ಇದ್ದಂತೆ. ಇಂತಹ ಸಂಸ್ಥೆಗಳು ಬೆಳೆದು ಮುನ್ನಡೆದಾಗ ಪ್ರತಿ ಸಮಾಜವೂ ಸ್ವಯಂ ಆಗಿ ಸದೃಢಗೊಳ್ಳುವುದು. ಇದರಿಂದ ಸ್ವಜಾತೀಯ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳು ಜೀವಂತವಾಗಿ ಉಳಿಯಬಲ್ಲವು. ಆರೋಗ್ಯ ನಿಧಿ ಮತ್ತು ವಿದ್ಯಾ ನಿಧಿಯ ಸಲುವಾಗಿ ಧನ ಸಂಗ್ರಹಣಾ ಕೆಲಸ ಅಭಿವೃದ್ಧಿಯಲ್ಲಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯ ನಿಧಿಯನ್ನು ಸಂಗ್ರಹಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಶೀಘ್ರವೇ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ನಮ್ಮ ಸಮಿತಿಯ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದು, ಸಮಿತಿಯ ಸದಸ್ಯರು ಭಂಡಾರಿ ಸಮಾಜದವರ ಬಳಿ ಬಂದು ಧನ ಸಂಗ್ರಹಿಸಲಿದ್ದು, ಎಲ್ಲರೂ ಸಹಕಾರ ನೀಡಬೇಕು ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್‌. ಎಂ. ಭಂಡಾರಿ ತಿಳಿಸಿದರು.

Advertisement

ಸೆ. 8ರಂದು ಸಂಜೆ ಮುಲುಂಡ್‌ ಪಶ್ಚಿಮದ ಕುಛ್ ದೇಯಾ ಸಾರಸ್ವತ್‌ ಬ್ರಾಹ್ಮಿಣ್‌ ಮಹಾಸ್ಥಾನ ಟ್ರಸ್ಟ್‌ನ ಸಭಾಗೃಹದಲ್ಲಿ ನಡೆದ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ 66ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಕಾರ್ಯಯೋಜನೆಗಳ ಸದುಪಯೋಗ ವನ್ನು ಸಮಾಜ ಬಾಂಧವರು ಪಡೆದುಕೊಳ್ಳುವಂತೆ ವಿನಂತಿಸಿದರು.

ಸೇವಾ ಸಮಿತಿಯ ಉಪಾಧ್ಯಕ್ಷ‌ ಪ್ರಭಾಕರ್‌ ಪಿ. ಭಂಡಾರಿ ಥಾಣೆ, ಗೌರವ ಕೋಶಾಧಿಕಾರಿ ಕರುಣಾಕರ ಎಸ್‌. ಭಂಡಾರಿ, ಮಹಿಳಾ ವಿಭಾಗಾ ಧ್ಯಕ್ಷೆ ಶಾಲಿನಿ ಆರ್‌. ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ ಎ. ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ. ಭಂಡಾರಿ, ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್‌. ಭಂಡಾರಿ ಉಪಸ್ಥಿತರಿದ್ದು, ಕುಲದೇವರಾದ ಕಚ್ಚಾರು ಶ್ರೀ ನಾಗೇಶ್ವರ ದೇವರನ್ನು ಸ್ತುತಿಸಿ ದೀಪ ಪ್ರಜ್ವಲಿಸಿ ಸಭೆಗೆ ಚಾಲನೆ ನೀಡಿದರು.

ಸಭೆಯಲ್ಲಿ ಜತೆ ಕೋಶಾಧಿಕಾರಿ ಪ್ರಕಾಶ್‌ ಭಂಡಾರಿ ಮತ್ತು ಸುಭಾಷ್‌ ಭಂಡಾರಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ಆರ್‌. ಭಂಡಾರಿ, ಜಯಶೀಲ ಯು. ಭಂಡಾರಿ, ಕೇಶವ ಟಿ. ಭಂಡಾರಿ, ರಾಕೇಶ್‌ ಎಸ್‌. ಭಂಡಾರಿ, ಜಯ ಪಿ. ಭಂಡಾರಿ, ವಿಶ್ವನಾಥ್‌ ಬಿ. ಭಂಡಾರಿ, ರುಕ್ಮಯ ಭಂಡಾರಿ, ಸಂತೋಷ್‌ ಭಂಡಾರಿ, ಕರುಣಾಕರ ಭಂಡಾರಿ, ಪ್ರಕಾಶ್‌ ಎಸ್‌. ಭಂಡಾರಿ, ಮಾಜಿ ಅಧ್ಯಕ್ಷ ನ್ಯಾಯವಾದಿ ಸುಂದರ್‌ ಜಿ. ಭಂಡಾರಿ, ಬಾಲಕೃಷ್ಣ ಪಿ. ಭಂಡಾರಿ, ಮಹಿಳಾವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲಲಿತಾ ವಿ. ಭಂಡಾರಿ ಸೇರಿದಂತೆ ಅನೇಕ ಸದಸ್ಯರು, ಭಂಡಾರಿ ಬಂಧುಗಳು ಉಪಸ್ಥಿತರಿದ್ದರು.

ಗತವರ್ಷದಲ್ಲಿ ಅಗಲಿದ ಸರ್ವ ಭಂಡಾರಿ ಬಾಂಧವರು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭಿಕರ ಪರವಾಗಿ ವಿನೋದ್‌ ಭಂಡಾರಿ ಡೊಂಬಿವಲಿ, ವಿಜಯಾನಂದ ಭಂಡಾರಿ, ಪ್ರಕಾಶ್‌ ಭಂಡಾರಿ ಡೊಂಬಿವಲಿ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ ಸೂಚನೆಗಳನ್ನು ನೀಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ್‌ ಡಿ. ಭಂಡಾರಿ ಸ್ವಾಗತಿಸಿ, ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ, ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಜತೆ ಕಾರ್ಯದರ್ಶಿ ರಂಜಿತ್‌ ಎಸ್‌. ಭಂಡಾರಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಶಾಲಿನಿ ರಮೇಶ್‌ ಭಂಡಾರಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಪುರುಷೋತ್ತಮ ಜಿ. ಭಂಡಾರಿ ವಂದಿಸಿದರು.

Advertisement

 

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next