Advertisement

ಸಾಮಾಜಿಕ ನಾಟಕಗಳಿಂದ ಸಮಾಜ ಪರಿವರ್ತನೆ: ನರಿಬೋಳ

09:58 AM Apr 01, 2022 | Team Udayavani |

ಜೇವರ್ಗಿ: ನಾಟಕದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯ, ನಾಟಕಗಳಿಂದ ಮನುಷ್ಯನ ಮನಸ್ಸು, ಸಮಾಜ ಪರಿವರ್ತನೆ ಆಗುತ್ತದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಬಸವ ಜಯಂತಿ, ಬಸವಕೇಂದ್ರ ಮಹಿಳಾ ಘಟಕದ 2ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರದುರ್ಗದ ಜಮುರಾ ಕಲಾಲೋಕ ಕಲಾವಿದರಿಂದ ನಡೆದ ‘ಸೋರುತಿಹುದು ಸಂಬಂಧ’ ಎನ್ನುವ ಹಾಸ್ಯ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕೋತ್ಸವಗಳು, ನಾಟಕ ತಂಡಗಳನ್ನು ಪ್ರೋತ್ಸಾಹಿಸುವುದರ ಜತೆಗೆ ನೈಜ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು,. ಸಮಾಜದಲ್ಲಿನ ಸಮಸ್ಯೆಗಳನ್ನು ನಾಟಕಗಳ ಮೂಲಕ ಜಗತ್ತಿಗೆ ಪರಿಚಯಿಸುವಂತ ಕೆಲಸವಾಗಬೇಕು. ಮಾನವ ತನ್ನ ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಂಸ್ಕಾರ, ಸಂಸ್ಕೃತಿ ನಾಶವಾಗುತ್ತದೆ. ನಾಟಕ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಮನೆ ಮಕ್ಕಳು ಸಂಸ್ಕೃತಿ, ಸಂಸ್ಕಾರದ ಭಾಗವಾಗಬೇಕು. ಆಗ ದೇಶದಲ್ಲಿ ಅಪರಾಧಗಳು ಕಡಿಮೆಯಾಗುತ್ತವೆ. ಅಪರಾಧ ಮಾಡುವವರ ದೃಷ್ಟಿಯನ್ನು ಬದಲಾಯಿಸಲು ಶರಣ, ಸಂತರ ವಚನಸಾಹಿತ್ಯ, ತತ್ವ, ನಾಟಕಗಳು ಸಹಕಾರಿಯಾಗುತ್ತವೆ. ಸರಳತೆ, ಆದರ್ಶ, ತತ್ವ, ಜೀವನ ಮೌಲ್ಯಗಳನ್ನು ನಾಟಕಗಳು ನಮಗೆ ಕಲಿಸುತ್ತವೆ ಎಂದು ಹೇಳಿದರು.

ಬಸವಕೇಂದ್ರ ತಾಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಕಾಂಗ್ರೆಸ್‌ ಮುಖಂಡ ರಾಜಶೇಖರ ಸೀರಿ, ಜೆಡಿಎಸ್‌ ಮುಖಂಡ ವಿಜಯಕುಮಾರ ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಬಸವಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ, ಷಣ್ಮುಖಪ್ಪ ಹಿರೇಗೌಡ, ಶಿವನಗೌಡ ಪಾಟೀಲ ಹಂಗರಗಿ, ಬಾಪುಗೌಡ ಬಿರಾಳ, ಮಹಾಂತಸಾಹು ಹರವಾಳ, ನೀಲಕಂಠ ಅವಂಟಿ, ಸಿದ್ಧು ಯಂಕಂಚಿ, ದಯಾನಂದ ಡೂಗನಕರ್‌, ಸದಾನಂದ ಪಾಟೀಲ, ಸುರೇಶ ಸಾಸಾಬಾಳ, ಆನಂದ ಮಹೇಂದ್ರಕರ್‌, ಮಲ್ಕಣಗೌಡ ಹೆಗ್ಗಿನಾಳ, ನಿಂಗಣ್ಣ ಹಳಿಮನಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಡಾ| ವಿಶ್ವನಾಥ ಬಂಗಾರಿ, ಮಲ್ಲನಗೌಡ ಪಾಟೀಲ ಕನ್ಯಾಕೋಳೂರ, ಮಲ್ಲಿಕಾರ್ಜುನ ದಂಡೂಲಕರ್‌, ಸಿದ್ದು ಮದರಿ, ರಾಮಣ್ಣ ತೊನ್ಸಳ್ಳಿಕರ್‌, ಅಖಂಡೆಪ್ಪ ಕಲ್ಲಾ, ಬಸವರಾಜ ಕಲ್ಲಾ ಹಾಗೂ ಇನ್ನಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next