Advertisement
ಯುವ ಸಮುದಾಯಕ್ಕೆ ಅದರಲ್ಲೂ ವೈದ್ಯರಿಗೆ ಮಾದರಿಯಾಗಬಲ್ಲ ಇವರ ಹೆಸರು ಡಾ| ಅವಿನ್ ಡಿ.ಪಿ. 2 ತಿಂಗಳಿಂದ ಕಡಬದ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ವಿಶೇಷ ಅನುಮತಿ ಪಡೆದು ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಅವಿನ್ ಸ್ನಾತಕೋತ್ತರ ಪದವಿಗಾಗಿ ಸರಕಾರಿ ಕೋಟಾದಡಿ ಸೀಟು ಪಡೆಯಲು ಪ್ರವೇಶ ಪರೀಕ್ಷೆ ಬರೆದಿದ್ದು, ಬಿಡುವಿನ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಡಾ| ಅವಿನ್ ಬಹಳ ಬಡತನದ ನಡುವೆ ಉನ್ನತ ಗುರಿ ಸಾಧನೆಯ ಹಠ ತೊಟ್ಟು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಹೆತ್ತವರ ಕನಸನ್ನು ನನಸು ಮಾಡಿದ್ದಾರೆ. ಕಡಬ ತಾಲೂಕಿನ ಎಡಮಂಗಲ ಗ್ರಾಮದ ಗ್ರಾಮದ ದೋಣಿಮನೆ ನಿವಾಸಿ, ರಿಕ್ಷಾ ಚಾಲಕ ದುಶ್ಯಂತ್ ಮತ್ತು ಬೀಡಿ ಕಾರ್ಮಿಕೆ ಪ್ರೇಮಾ ದಂಪತಿಯ ಹಿರಿಯ ಪುತ್ರ ಡಾ| ಅವಿನ್ ಡಿ.ಪಿ. ಒಂದರಿಂದ ಹತ್ತನೆಯ ತರಗತಿವರೆಗೆ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಅವಿನ್, ಎಸೆಸೆಲ್ಸಿಯಲ್ಲಿ ಶೇ.95 ಅಂಕ ಗಳಿಸಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಸೀಟು ಗಿಟ್ಟಿಸಿಕೊಂಡಿದ್ದರು. ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ 685 ರ್‍ಯಾಂಕ್ ಗಳಿಸಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು. ಈಗ ಎಂಬಿಬಿಎಸ್ ಮುಗಿಸಿ ಈಗ ಹೊಸದಿಲ್ಲಿಯ ಬಾತ್ರಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸರಕಾರಿ ಕೋಟಾದಡಿ ಜನರಲ್ ಸರ್ಜರಿ ವಿಭಾಗದಲ್ಲಿ ಸ್ನಾತಕೋತ್ತರ ಕಲಿಕೆಗೆ ಸಜ್ಜಾಗಿದ್ದಾರೆ.
Related Articles
ಸಲ್ಲಿಸುವ ಅವಕಾಶವನ್ನು ಬಳಸಿಕೊಂಡಿದ್ದೇನೆ.
– ಡಾ| ಅವಿನ್ ಡಿ.ಪಿ.
Advertisement