ಕುಂಬಳೆ: ಕಲೆಯ ಆರಾಧನೆ ಯಿಂದ ಸಮಾಜ ಸಮೃದ್ಧಗೊಳ್ಳುತ್ತದೆ. ಕಲೆಯ ಪೋಷಣೆಯೂ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗುವುದೆಂದು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ನುಡಿದರು.
ಹೊಸಬೆಟ್ಟು ಕುಲಾಲ ಸಮಾಜ ಮಂದಿರ ದಲ್ಲಿ ನಡೆದ ಸೃಷ್ಟಿ ಕಲಾ ಭೂಮಿ ಬೆಂಗಳೂರು ಸಂಸ್ಥೆಯ ಕಾಸರಗೋಡು ಘಟಕವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಪೂಜ್ಯರು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸ್ವಾಮೀಜಿ ಯವರು ವಿದ್ಯಾನಿಧಿ ಯೋಜನೆಯಂಗವಾಗಿ ಮಂಜೇಶ್ವರ ಆಸುಪಾಸಿನ ಶಾಲೆಗಳ 100 ಮಂದಿ ಬಡ ಮಕ್ಕಳಿಗೆ ಪುಸ್ತಕ, ಬ್ಯಾಗ್, ಕೊಡೆ, ಹಾಗೂ ಪರಿಕರಗಳನ್ನು ವಿತರಿಸಿದರು.
ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೆ„ವದ ಪಾತ್ರಿ ರಾಜ ಬೆಳ್ಚಪ್ಪಾಡ ಅಧ್ಯಕ್ಷತೆ ವಹಿಸಿದರು. ತುಳುನಾಡ ಬೊಳ್ಳಿ ಅಬ್ದುಲ್ಲ ಮಾದುಮೂಲೆ ಮತ್ತು ರಾಜ ಬೆಳ್ಚಪ್ಪಾಡ ಅವರು ಸƒಷ್ಟಿ ಕಲಾ ಭೂಮಿಯ ಲಾಂಛನವನ್ನು ಬಿಡುಗಡೆ ಗೊಳಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ಡಾ| ವಿನೋದ್ ಕುಮಾರ್ ಶೆಟ್ಟಿ, ಸಲಾಂ ವರ್ಕಾಡಿ, ರಾಜೇಶ್ ಶೆಟ್ಟಿ ಕುತ್ಯಾರ್, ಕಾಂತರಾಜ್ ಎಂ.ಜೆ., ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಕರ್ನೂರು ಮೋಹನ್ ರೈ, ಪುರುಷೋತ್ತಮ ಚೆಂಡ್ಲ, ನಾಗರಾಜ್ ಆಚಾರ್ಯ, ಶ್ರೀಧರ್ ಶೆಟ್ಟಿ, ಭಾಸ್ಕರ್ ಬಂಗೇರ ಕುವೈಟ್, ಆಶಾ ಶೆಟ್ಟಿ ಅತ್ತಾವರ್, ವಿಜಯ ನಾಯರ್, ಆಯಿಷಾ ಪೆರ್ಲ ಎಸ್.ಆರ್. ಬಂಡಿಮಾರ್, ನ್ಯಾ. ನವೀನ್ ರಾಜ್ ಕೆ. ಜೆ., ಉಪಸ್ಥಿತರಿದ್ದು ಶುಭ ಹಾರೈಸಿದರು. ಸೃಷ್ಟಿ ಕಲಾ ಭೂಮಿಯ ಲಾಂಛನವನ್ನು ರಚಿಸಿದ ಕಲಾವಿದ ಸಂತೋಷ್ ಆಚಾರ್ಯ ದಂಪತಿಯನ್ನು ಹಾಗೂ ತುಳುನಾಡª ಬೊಳ್ಳಿ ಅಬ್ದುಲ್ಲ ಮಾದುಮೂಲೆಯವರನ್ನು ಗೌರವಿಸಲಾಯಿತು. ಸƒಷ್ಟಿ ಕಲಾ ಭೂಮಿಯ ಸಂಸ್ಥಾಪಕ ಸಂಕಬೆ„ಲ್ ಮಂಜುನಾಥ ಅಡಪ್ಪ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಎಚ್.ಕೆ. ನಯನಾಡ್ ಕಾರ್ಯಕ್ರಮ ನಿರೂಪಿಸಿದರು.
ರತನ್ ಕುಮಾರ್ ಹೊಸಂಗಡಿ ವಿದ್ಯಾರ್ಥಿಗಳ ವಿವರಗಳನ್ನು ವಾಚಿಸಿದರು. ವರ್ಷಿತಾ ಶೆಟ್ಟಿ ಬೆಜ್ಜಂಗಳ ವಂದಿಸಿದರು. ಕಮಲಾಕ್ಷ ದುರ್ಗಿಪಳ್ಳ, ಸನತ್ ರಾಜ್ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೊಳಿಕೆ ಜನಪದ ಕಲಾ ತಂಡ ಕನ್ಯಪಾಡಿ ಕಾಸರಗೋಡು ಇವರಿಂದ ಸಾಂಸ್ಕೃತಿಕ ಸಂಭ್ರಮ ತುಳುನಾಡ ಪಾಡªನ ಮೇಳ ನಡೆಯಿತು.