Advertisement

ವದಂತಿಗಳಿಗೆ ಅಂತರ್ಜಾಲ ವೇದಿಕೆ!

01:30 PM May 29, 2017 | Karthik A |

ಹೊಸದಿಲ್ಲಿ: ಜಗತ್ತಿನ ಯಾವುದೇ ಘಟನೆ ಕುರಿತ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಜನರ ಅಂಗೈಯಲ್ಲಿಡುವ ಇಂಟರ್‌ನೆಟ್‌, ಸಾಮಾಜಿಕ ಮಾಧ್ಯಮಗಳು ಜನರ ಹಾದಿತಪ್ಪಿಸುತ್ತಿವೆ! ಇಂಥಧಿದೊಂದು ವಾದ ಬಲವಾಗಿ ಕೇಳಿಬರಲು ಕಾರಣ, ಇತ್ತೀಚಿನ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಸುಳ್ಳು ಸುದ್ದಿಗಳು.

Advertisement

ಮೊದಲು ಖ್ಯಾತ ಲೇಖಕಿ ಅರುಂಧತಿ ರಾಯ್‌ ಪಾಕಿಸ್ಥಾನದ ವೆಬ್‌ ಪೋರ್ಟಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ ಎಂಬ ವದಂತಿ ಹಬ್ಬುತ್ತದೆ. ಈ ವಿಷಯ ತಿಳಿದ ಹಿರಿಯ ನಟ ಪರೇಶ್‌ ರಾವಲ್‌ ಮರು ಯೋಚಿಸದೆ ‘ಕಲ್ಲೆಸೆತಗಾರರ ಬದಲು ಅರುಂಧತಿ ರಾಯ್‌ರನ್ನು ಜೀಪ್‌ಗೆ ಕಟ್ಟಿ’ ಎಂಬ ಸಲಹೆ ನೀಡಿ ಟ್ವೀಟ್‌ ಮಾಡುತ್ತಾರೆ. ಇದಕ್ಕೆ ಸಹಸ್ರಾರು ಪ್ರತಿಕ್ರಿಯೆ ಬರುತ್ತವೆ. ಈ ಮೂಲಕ ಖ್ಯಾತ ಲೇಖಕಿ ದೇಶ ವಿರೋಧಿ ಕಿರೀಟ ಧರಿಸುತ್ತಾರೆ! ಆದರೆ ಅರುಂಧತಿ ಹೇಳಿದ್ದೇನು ಎಂಬುದನ್ನು ಪರಿಶೀಲಿಸುವ ಗೋಜಿಗೆ ಯಾರೂ ಹೋಗುವುದಿಲ್ಲ.

ಇನ್ನೊಂದೆಡೆ ಕಾಶ್ಮೀರದಲ್ಲಿ ಬಸ್‌ ಪ್ರಪಾತಕ್ಕೆ ಬಿದ್ದು 40 ಮಕ್ಕಳು ಅಸುನೀಗಿದ್ದಾರೆ ಎಂಬ ಸುದ್ದಿ ಕೂಡ ಕಿಡಿಗೇಡಿಗಳು ಹರಡಿದ ವದಂತಿಗೆ ನಿದರ್ಶನ. ‘ಭಾರತದಲ್ಲಿ 20 ಕೋಟಿಗೂ ಅಧಿಕ ಮಂದಿ ವಾಟ್ಸ್‌ಆ್ಯಪ್‌ ಬಳಸುತ್ತಿದ್ದು, ಇವರ ಮೂಲಕ ವದಂತಿಗಳು ಕ್ಷಣಾರ್ಧದಲ್ಲೇ ಇಡೀ ದೇಶವನ್ನು ವ್ಯಾಪಿಸುತ್ತವೆ. ರೋಚಕವೆನಿಸುವ ಈ ವದಂತಿಗಳನ್ನು ಜನ ನಂಬಿ ಶೇರ್‌ ಮಾಡುತ್ತಾರೆ. ಇದರಿಂದ ಅವಾಂತರ ಸೃಷ್ಟಿಯಾಗುತ್ತವೆ. ಅಮಾಯಕರ ಪ್ರಾಣವೂ ಹೋಗುತ್ತದೆ’ ಎಂದಿದ್ದಾರೆ ಮುಂಬಯಿಯ ಮನಃಶಾಸ್ತ್ರಜ್ಞ ಡಾ| ಹರೀಶ್‌ ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next