Advertisement
*ಗೆಳತಿಯೊಬ್ಬಳು ತುಂಬಾ ದಿನಗಳ ನಂತರ ಸಿಕ್ಕಿದ್ದಳು. ಅದೂ ಇದು ಮಾತಾಡುತ್ತಾ, ವಿಷಯ ಕಾಲೇಜು ದಿನಗಳತ್ತ ಹೊರಳಿತು. ಹಳೆಯ ಗೆಳೆಯ/ಗೆಳತಿಯರ ಸಂಪರ್ಕ ನನಗೆ ಅಷ್ಟಾಗಿ ಇರಲಿಲ್ಲ. ಅವಳೇ ಎಲ್ಲರ ಬಗ್ಗೆ ಹೇಳುತ್ತಾ ಹೋದಳು. ಕ್ಲಾಸ್‌ಮೇಟ್‌ಗೆ ಮದುವೆಯಾಗಿದ್ದು, ಫ್ರೆಂಡೊಬ್ಬಳು ಆನ್‌ಸೈಟ್ ಅಂತ ಅಮೆರಿಕಕ್ಕೆ ಹೋಗಿರುವುದು, ಸೀನಿಯರ್‌ನ ಲೇಹ್ ಲಢಾಕ್ ಬೈಕ್ ಟ್ರಿಪ್…
Related Articles
Advertisement
ಮೇಲಿನ ಮೂರು ಘಟನೆಗಳು ಒಂದಕ್ಕೊಂದು ಸಂಬಂಧವಿಲ್ಲದ್ದು ಅನ್ನಿಸಿದರೂ, ಎಲ್ಲವೂ ಕೂಡ ಮೊಬೈಲ್‌ನ ಸುತ್ತವೇ ಸುತ್ತುತ್ತವೆ. ನಿತ್ಯ ಜೀವನದಲ್ಲಿ ನಾವೆಲ್ಲಾ ಸಾಮಾಜಿಕ ಜಾಲತಾಣಗಳಿಗೆ ಎಷ್ಟೊಂದು ದಾಸರಾಗಿದ್ದೇವೆ ಅನ್ನುವುದಕ್ಕೆ ಇವು ಕೆಲವು ಉದಾಹರಣೆಗಳು. ನನ್ನ ನಿದ್ರಾಹೀನತೆಗೆ ಅತಿಯಾದ ಮೊಬೈಲ್ ಬಳಕೆಯೇ ಕಾರಣ ಅಂತ ಡಾಕ್ಟರ್ ಹೇಳುವವರೆಗೆ, ನನಗೂ ನನ್ನ ಮೊಬೈಲ್ ಚಟದ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಎದ್ದಾಗ ಬ್ರಶ್‌ಗಿಂತ ಮೊದಲು ಮೊಬೈಲ್ ನನ್ನ ಕೈ ಸೇರುತ್ತಿತ್ತು. ತಿಂಡಿ ತಿನ್ನುವಾಗಲೂ ಮೊಬೈಲ್ ಬೇಕು. ರಾತ್ರಿ ನಿದ್ರೆ ಬರದಿದ್ದಾಗಲೂ ನಾನು ಶರಣಾಗುತ್ತಿದ್ದುದು ಮೊಬೈಲ್‌ಗೇ. ಈ ಚಟವೇ ನನ್ನ ನಿದ್ರಾಹೀನತೆಗೆ ಕಾರಣ ಅಂದರು ವೈದ್ಯರು. ಆಗ ನಾನು ಮೊದಲು ಮಾಡಿದ ಕೆಲಸವೇ, ಒಂದಷ್ಟು ಆ್ಯಪ್‌ಗ್ಳನ್ನು ಅನ್‌ಇನ್‌ಸ್ಟಾಲ್ ಮಾಡಿದ್ದು. ಹಿಂದೆ ವ್ಯಸನ ಎಂದರೆ ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಡ್ರಗ್ಸ್ ಮುಂತಾದವುಗಳು ನೆನಪಾಗುತ್ತಿದ್ದವು. ಆದರೆ, ಈಗ ಆ ಪಟ್ಟಿಗೆ ಸ್ಮಾರ್ಟ್ ಫೋನ್ ಕೂಡ ಸೇರಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಮೊಬೈಲ್ ಕೂಡ ವ್ಯಸನವಾಗಿ ಪರಿಣಮಿಸಿದೆ. ಮೊಬೈಲ್‌ನಿಂದ ಶ್ವಾಸಕೋಶ ಹರಿಯುವುದಿಲ್ಲ, ಕ್ಯಾನ್ಸರ್ ಬರುವುದಿಲ್ಲ, ಹಲ್ಲು ಹಳದಿಯಾಗಿ ನಿಮ್ಮ ಚಟದ ವಿಷಯ ಬೇರೆಯವರಿಗೆ ತಿಳಿಯುವುದೂ ಇಲ್ಲ. ಆದರೆ, ಮೊಬೈಲ್‌ಗೆ ಅತಿಯಾಗಿ ಅಡಿಕ್ಟ್ ಆಗುವುದರಿಂದ ವಿನಾಕಾರಣ ದ್ವೇಷ, ಅಸೂಯೆ, ಸಿಟ್ಟು, ಅಸಹನೆಯಂಥ ಗುಣಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಈ ಕಾರಣದಿಂದಲೇ ಮಾನಸಿಕ ನೆಮ್ಮದಿ ಕದಡಿ ಹೋಗುತ್ತದೆ. ಬೆಲೆ ಕಟ್ಟಲಾಗದಂಥ, ಮತ್ತೆಂದೂ ಸಿಗದಂಥ ಅತ್ಯಮೂಲ್ಯ ಸಮಯ ಕಳೆದು ಹೋಗುತ್ತದೆ. ಈ ವಾಸ್ತವವನ್ನು ಯುವಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಸ್ಮಾರ್ಟ್‌ಫೋನ್ ಜೊತೆ ಸರಸ, ಬಾಳಿಗಿಲ್ಲ ಹರುಷ ಎಂಬ ಸತ್ಯವನ್ನು ಅರಿತು, ಮೊಬೈಲ್ ವ್ಯಸನದಿಂದ ದೂರವುಳಿಯಬೇಕಿದೆ. ನೀವು ಸಾಮಾಜಿಕ ಜಾಲತಾಣ ವ್ಯಸನಿಗಳೇ?
ಹೀಗೆ ನಮ್ಮನ್ನು ಯಾರಾದರೂ ಪ್ರಶ್ನಿಸಿದರೆ, ಇಲ್ಲಪ್ಪಾ ಅಂತಲೇ ಹೇಳುತ್ತೇವೆ. ಯಾಕಂದ್ರೆ, ಸೋಶಿಯಲ್ ಮೀಡಿಯಾಗೆ ನಾವು ಎಷ್ಟರಮಟ್ಟಿಗೆ ಅಂಟಿಕೊಂಡಿದ್ದೇವೆ ಎಂಬುದು ನಮಗೇ ಗೊತ್ತಿಲ್ಲ. ಅದನ್ನು ಪತ್ತೆ ಹಚ್ಚಲು ಇಲ್ಲಿ ಕೆಲವು ಪ್ರಶ್ನೆಗಳಿಗೆ. ಹೌದು ಅಥವಾ ಇಲ್ಲ ಎಂದು ಉತ್ತರಿಸಿ. 1. ನೀವು ಐದಾರು ಅಥವಾ ಅದಕ್ಕಿಂತ ಹೆಚ್ಚು ಸಾಮಾಜಿಕ ಜಾಲತಾಣಗಳ ಸದಸ್ಯರಾಗಿದ್ದೀರಾ?
2. ಯಾವುದೇ ಸ್ಪಷ್ಟ ಗುರಿ, ಉದ್ದೇಶ ಇಲ್ಲದೆ ಸಾಮಾಜಿಕ ಜಾಲತಾಣಗಳನ್ನು ಆಗಾಗ ಜಾಲಾಡುತ್ತೀರಾ?
3. ಅಯ್ಯೋ, ನಾನು ಇಷ್ಟೊಂದು ಸಮಯವನ್ನು ಫೇಸ್‌ಬುಕ್/ ವಾಟ್ಸಾéಪ್‌ನಲ್ಲಿ ಕಳೆದುಬಿಟ್ಟೆನಾ ಅಂತ ನಿಮಗೆ ಆಶ್ಚರ್ಯವಾಗುತ್ತದಾ?
4. ಸೋಶಿಯಲ್ ಮೀಡಿಯಾ ಬಳಸುವುದಕ್ಕೆಂದೇ, ಸ್ನೇಹಿತರ/ ಕುಟುಂಬದವರ ಆಹ್ವಾನವನ್ನು ದೂರವಿಡುತ್ತೀರಾ?
5. ಹೋಂವರ್ಕ್/ ಅಡುಗೆ/ ಆಫೀಸ್ ಕೆಲಸವನ್ನು ನಿರ್ಲಕ್ಷಿಸಿ ಸಾಮಾಜಿಕ ತಾಣಗಳಲ್ಲಿ ಮುಳುಗಿ ಹೋಗಿದ್ದಿದೆಯಾ?
6. ಎಫಿº/ ಟ್ವಿಟರ್/ ವಾಟ್ಸಾéಪ್‌ನಲ್ಲಿ ಸಮಯ ಕಳೆಯಲೆಂದೇ ರಾತ್ರಿ ಲೇಟಾಗಿ ಮಲಗುವುದು ಅಥವಾ ಬೆಳಗ್ಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದೀರಾ?
7. ನೀವು ಎಷ್ಟು ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೆಯುತ್ತೀರಿ ಎಂಬುದನ್ನು ಸ್ನೇಹಿತರಿಂದ/ ಕುಟುಂಬದವರಿಂದ ಮುಚ್ಚಿಡುತ್ತೀರಾ?
8. ಜನರನ್ನು ಮುಖತಃ ಭೇಟಿಯಾಗುವುದಕ್ಕಿಂತ ಸಾಮಾಜಿಕ ತಾಣಗಳ ಮೂಲಕ ಮಾತಾಡುವುದನ್ನೇ ನೀವು ಬಯಸುತ್ತೀರಾ?
9. ನೀನು ತುಂಬಾ ಸಮಯವನ್ನು ಸೊಶಿಯಲ್ ಮೀಡಿಯಾದಲ್ಲೇ ಕಳೆಯುತ್ತೀಯಾ? ಅಂತ ಯಾರಾದರೂ ನಿಮಗೆ ಹೇಳಿದ್ದಾರಾ?
10. ಸಾಮಾಜಿಕ ಜಾಲತಾಣದ ಸಂಪರ್ಕ ಸಿಗದಿದ್ದಾಗ ಅಥವಾ ವೆಬ್‌ಸೈಟ್ ಡೌನ್ ಆದಾಗ ನಿಮಗೆ ಹತಾಶೆ, ಸಿಟ್ಟು ಬರುತ್ತದೆಯಾ?
1-4 ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾಗಿದ್ದರೆ, ನೀವು ಸಾಮಾಜಿಕ ಜಾಲತಾಣದ ವ್ಯಸನಕ್ಕೆ ಒಳಗಾಗಿಲ್ಲ ಎಂದು ಅರ್ಥ. ವಾಸ್ತವದ ಜಗತ್ತಿನಿಂದ ನೀವಿನ್ನೂ ಜಾಸ್ತಿ ವಿಮುಖರಾದಂತಿಲ್ಲ. 5-8 ಪ್ರಶ್ನೆಗಳಿಗೆ ನೀವು ಹೌದೆಂದು ತಲೆಯಾಡಿಸಿದ್ದರೆ, ಕೊಂಚ ಎಚ್ಚರ ವಹಿಸುವ ಅಗತ್ಯವಿದೆ. ಯಾವ್ಯಾವ ಸಾಮಾಜಿಕ ಜಾಲತಾಣಗಳನ್ನು ನೀವು ಬಳಸುತ್ತಿದ್ದೀರಿ, ಹೇಗೆ ಬಳಸುತ್ತಿದ್ದೀರಿ, ಅದಕ್ಕಾಗಿ ಎಷ್ಟು ಸಮಯವನ್ನು ಮೀಸಲಿಡುತ್ತೀರಿ ಎಂಬುದನ್ನು ಒಂದು ಕಡೆ ನೋಟ್ ಮಾಡಿಟ್ಟುಕೊಳ್ಳಿ. ಒಂದು ವಾರದಲ್ಲಿ ನೀವು ಎಷ್ಟು ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತೀರಿ ಎಂದು ಲೆಕ್ಕ ಹಾಕಿ. ಒಮ್ಮೆ ಅದರ ಕಡೆ ನಿಮ್ಮ ಗಮನ ಹರಿದರೆ, ದಿನದಿಂದ ದಿನಕ್ಕೆ ಆ ಸಮಯವನ್ನು ಕಡಿತಗೊಳಿಸುತ್ತಾ ಬರಬಹುದು. 8 ಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಹೌದು ಎನ್ನುವಿರಾದರೆ, ಸೋಶಿಯಲ್ ಮೀಡಿಯಾವನ್ನು ನೀವು ಜಾಸ್ತಿ ಬಳಸುತ್ತೀರಿ ಎನ್ನಬಹುದು. ದೈನದಿಂದ ಚಟುವಟಿಕೆಗಳ ಮೇಲೆ, ಸ್ನೇಹ ಸಂಬಂಧಗಳ ಮೇಲೆ ಅದು ಪರಿಣಾಮ ಬೀರುವ ಮುನ್ನ ಎಚ್ಚೆತ್ತುಕೊಳ್ಳಿ. ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಹೊಸ ಹವ್ಯಾಸ ಬೆಳೆಸಿಕೊಳ್ಳಿ. ನಿದ್ದೆ ಬರ್ತಿಲ್ಲ, ನಂಗೆ ನಿದ್ದೆ ಬರ್ತಿಲ್ಲ!
ನಮ್ಮ ಮೆದುಳು ನೀಲಿ ಬೆಳಕನ್ನು ಹಗಲು ಎಂದೂ, ಕೆಂಪು/ ಕೇಸರಿ ಬೆಳಕನ್ನು ರಾತ್ರಿಯೆಂದೂ ಪರಿಗಣಿಸುತ್ತದೆ. ಮೆದುಳಿನಲ್ಲಿರುವ ಪೀನಿಯಲ್ ಗ್ಲ್ಯಾಂಡ್ ರಾತ್ರಿ ವೇಳೆ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ. ಅದು ನಮಗೆ ನಿದ್ರೆ ಬರಿಸುವ ಹಾರ್ಮೋನ್. ನೀವು ರಾತ್ರಿ ಮೊಬೈಲ್‌ನ ನೀಲಿ ಬೆಳಕನ್ನು ಜಾಸ್ತಿ ಹೊತ್ತು ದಿಟ್ಟಿಸಿದಾಗ, ಮೆದುಳಿಗೆ ಇದು ಹಗಲು ಎಂಬ ಸೂಚನೆ ಹೋಗುತ್ತದೆ. ಆಗ ಅದು ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸಿಬಿಡುತ್ತದೆ. ಅದರಿಂದ ನೀವು ನಿದ್ರೆಯಿಲ್ಲದೆ ಹೊರಳಾಡುವಂತಾಗುತ್ತದೆ ಅನ್ನುತ್ತವೆ ಸಂಶೋಧನೆಗಳು. 2013ರಲ್ಲಿ 13 ಜನರ ಮೇಲೆ ಈ ಪ್ರಯೋಗ ಮಾಡಲಾಗಿತ್ತು. ರಾತ್ರಿ ಹೊತ್ತು ಸತತ 2 ಗಂಟೆ ಐ ಪ್ಯಾಡ್ ಬಳಸಲು ಹೇಳಿ, ಅವರ ಮೆಲಟೋನಿನ್ ಉತ್ಪಾದನಾ ಮಟ್ಟವನ್ನು ಪರೀಕ್ಷಿಸಲಾಯಿತು. ಕೇಸರಿ ಗಾಗಲ್ಸ್ (ಕನ್ನಡಕ) ಧರಿಸಿ ಐ ಪ್ಯಾಡ್ ಬಳಸಿದಾಗ ಮೆದುಳು ಜಾಸ್ತಿ ಮೆಲಟೋನಿನ್ ಅನ್ನು ಉತ್ಪಾದಿಸಿತ್ತು. ನೀಲಿ ಗಾಗಲ್ಸ್ ಧರಿಸಿ ಹಾಗೂ ಗಾಗಲ್ಸ್ ಧರಿಸದೆಯೇ ಐ ಪ್ಯಾಡ್ ಬಳಸಿದಾಗ ಮೆಲಟೋನಿನ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗಿತ್ತಂತೆ. ಮಲಗುವ ಮುನ್ನ ಮೊಬೈಲ್ ಬಳಸಬೇಡಿ ಅಂತ ಹೇಳುವುದು ಅದಕ್ಕೇ! ಪ್ರಿಯಾಂಕ