Advertisement

ನಿಮ್ಗೆ ಲೈಕ್‌ ಆಗೋ ಕೆಲ್ಸ ಇದು…

06:00 AM Dec 25, 2018 | |

ಮೂರು ಹೊತ್ತೂ ಫೇಸ್‌ಬುಕ್‌, ಟ್ವಿಟರ್‌ನಲ್ಲೇ ಇರಿ¤àಯಲ್ಲಾ, ಅದರಿಂದ ಏನು ಸಿಗುತ್ತೆ ಅಂತ ಯಾರಾದರೂ ನಿಮ್ಮನ್ನ ಬಯ್ದರೆ, ಸಂಬಳ ಸಿಗುತ್ತೆ ಅಂತ ಧೈರ್ಯವಾಗಿ ಹೇಳಬಹುದು. ಯಾಕೆಂದರೆ, ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ ಅನ್ನೋದು ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ, ಬರೀ ಲೈಕ್‌, ಕಾಮೆಂಟ್‌ ಮಾಡುವುದಷ್ಟೇ ನಿಮ್ಮ ಕೆಲಸವಲ್ಲ…

Advertisement

“ಕೇವಲ ಪೇಜ್‌ಗಳನ್ನು ಬ್ರೌಸ್‌ ಮಾಡಿದರೆ ಸಾಕು. ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಲೈಕು ಕಾಮೆಂಟು ಹಾಕುತ್ತಿರುವುದೇ ಕೆಲಸ. ಇದರಿಂದ ಬಹಳ ಹಣ ಸಂಪಾದಿಸಬಹುದು ..’ ಎಂದೆಲ್ಲ ಯಾರಾದರೂ ಹೇಳಿದರೆ ಅವರನ್ನು ನಂಬಬೇಡಿ. ಅದು ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ನ ಸ್ಪಷ್ಟ ಚಿತ್ರಣವಲ್ಲ. ಹಾಗಾದರೆ, ಸೋಷಿಯಲ್‌ ಮೀಡಿಯಾ ಮಾರ್ಕೆಟರ್‌ನ ಕೆಲಸವೇನು? ಅವನು ಹೇಗೆ ಹಣ ಸಂಪಾದನೆ ಮಾಡುತ್ತಾನೆ ಎಂಬುದಕ್ಕೆ ಉತ್ತರ ಇಲ್ಲಿದೆ.

ಸೋಷಿಯಲ್‌ ಮೀಡಿಯಾ ಮಾರ್ಕೆಟರ್‌, ಬ್ರ್ಯಾಂಡ್‌ ಒಂದರ ಮುಖವಾಣಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸುತ್ತಾನೆ. ಅಂದರೆ, ಆತ ತನ್ನ ಬ್ರ್ಯಾಂಡ್‌ನ‌ ವಾಣಿಜ್ಯ- ವ್ಯವಹಾರದ ವೃದ್ಧಿಗಾಗಿ ಲಭ್ಯ ಇರುವ ಎಲ್ಲ ತಾಂತ್ರಿಕ ಸಾಧನೆಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಕಂಪನಿಯ ಇಮೇಜನ್ನು ಬೆಳೆಸುತ್ತಾನೆ. ಫೇಸ್‌ಬುಕ್‌, ಟ್ವಿಟರ್‌, ಲಿಂಕ್ಡ್ ಇನ್‌, ಪ್ರಿಂಟ್‌ರೆಸ್ಟ್‌, ಇನ್‌ಸ್ಟಗ್ರಾಮ್‌ ಮೊದಲಾದ ಜಾಲಾಧಾರಿತ ಪ್ಲಾಟ್‌ಫಾರಂಗಳಲ್ಲಿ ಕಂಪನಿಯ ಬ್ರಾಂಡ್‌ ಕಟ್ಟಿಕೊಡುವುದು ಅವನ ಕೆಲಸ.

ಲೈಕ್‌ ಒತ್ತೋದಷ್ಟೇ ಅಲ್ಲ… 
ಇತ್ತೀಚೆಗೆ ಕಂಪನಿಗಳು ಈ ಕೆಲಸಕ್ಕೆ ತೊಡಗಿಸಿದ ಹಣದ ಪ್ರತಿಫ‌ಲಿತ ಮೌಲ್ಯಮಾಪನ ಕುರಿತು  ಪ್ರಶ್ನಿಸುತ್ತಿರುವುದರಿಂದ, ಲೈಕ್‌ ಒತ್ತುವುದಷ್ಟೇ ಇಲ್ಲಿ ಕೆಲಸವಲ್ಲ. ಮೀಡಿಯಾ ಮ್ಯಾನೇಜರ್‌ ತನ್ನ ಮಾರ್ಕೆಟಿಂಗ್‌ ತಂತ್ರಗಳಿಂದ, ಕಂಪನಿಗೆ ಸೂಕ್ತ ಪ್ರತಿಫ‌ಲ ನೀಡುವುದರ ಹೊಣೆ ಹೊರಬೇಕಾಗುತ್ತದೆ. ಇಂದು 18-29ರ ವಯೋಮಾನದವರಲ್ಲಿ ಶೇ.90 ಜನ ಸೋಶಿಯಲ್‌ ಮೀಡಿಯಾ ಬಳಕೆದಾರರಾಗಿದ್ದಾರೆ. ಹಾಗಾಗಿ ಕಂಪನಿಗಳು ತಮ್ಮ ಮಾರ್ಕೆಟಿಂಗ್‌ ತಂತ್ರವನ್ನು ಸಾಮಾಜಿಕ ಜಾಲತಾಣದೊಂದಿಗೆ ಹೊಂದಿಸಲು ಮುಂದಾಗಿವೆ. ಹಾಗಾಗಿ, ಈ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಗಳೂ ಸೃಷ್ಟಿಯಾಗುತ್ತಿವೆ. ಸ್ಥಳೀಯ, ದೇಶಾದ್ಯಂತ ಅಲ್ಲದೆ ಜಾಗತಿಕ ಮಟ್ಟದಲ್ಲೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕ್ಷೇತ್ರ ಇದು.

ಯಾವ ಕೋರ್ಸ್‌ ಮಾಡಬೇಕು?
ನಿಮ್ಮ ಆಸಕ್ತಿ ಮತ್ತು ಬದ್ಧತೆಗೆ ಅನುಗುಣವಾಗಿ, ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ನ ಯಾವುದಾದರೊಂದು ವಿಭಾಗದಲ್ಲಿ ಪರಿಣತಿ ಪಡೆಯಬಹುದು. ಇದಕ್ಕಾಗಿ ಬಹಳಷ್ಟು ಆನ್‌ಲೈನ್‌ ಕೋರ್ಸುಗಳೂ ಇವೆ. ಕನಿಷ್ಠ 10-25 ಗಂಟೆಗಳ ಕಲಿಕಾ ಅವಧಿ ಇರುತ್ತದೆ. ಸೃಜನಾತ್ಮಕ ಬುದ್ಧಿ ಮತ್ತು ತಾರ್ಕಿಕ ಆಲೋಚನೆ ಎರಡನ್ನೂ ಮೇಳೈಸಿ ಕಲಿಯಬೇಕು. ಒಂದು ಕಂಪನಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿ, ಯಾವ ಮೀಡಿಯಾದಿಂದ, ಯಾವ ಬಗೆಯ ತಂತ್ರಗಳಿಂದ ಕಂಪನಿಯ ಬ್ರ್ಯಾಂಡ್‌ ಅಭಿವೃದ್ಧಿ ಪಡಿಸಬಹುದೆಂಬುದನ್ನು ಕಲಿಯುವುದು ಇಲ್ಲಿ ಮುಖ್ಯವಾಗುತ್ತದೆ. ಇದು ಅನುಭವದಿಂದ ಗಳಿಸುವಂಥ ಕ್ಷೇತ್ರ. ಜೊತೆಗೆ ಸೋಷಿಯಲ್‌ ಮೀಡಿಯಾದ ಟೂಲ್‌ಗ‌ಳಾದ ಹೂಟ್‌ ಸುವೇಟ್‌ (ಏಟಟಠಿsuಜಿಠಿಛಿ) ಟ್ಟಿàಕ್‌ಡೆಕ್‌, ಬಫ‌ರ್‌ಗಳನ್ನು ಬಳಸುವುದನ್ನು ಕಲಿಯಬೇಕು.

Advertisement

ಸೋಷಿಯಲ್‌ ಮೀಡಿಯಾ ಸ್ಟ್ರಾಟೆಜಿ
ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌ನಲ್ಲಿ ಪಳಗಲು ಮೀಡಿಯಾ ಸ್ಟ್ರಾಟೆಜಿ ಮಾಡಬೇಕು ಅಂದರೆ ಉತ್ತಮ ತಯಾರಿ ನಡೆಸುವುದು ಅಗತ್ಯ. ಅವುಗಳಲ್ಲಿ ಮುಖ್ಯವಾದವು- ಸೋಷಿಯಲ್‌ ಮೀಡಿಯಾ ಆಡಿಟ್‌ ಮತ್ತು ಪ್ರತಿಸ್ಪರ್ಧಿಗಳ ಅಧ್ಯಯನ. ಮಾರ್ಕೆಟ್‌ನ ವಿಸ್ತಾರಕ್ಕಾಗಿ ಸೋಷಿಯಲ್‌ ಮೀಡಿಯಾದ ಹೊಂದಿಸುವಿಕೆ (ಅlಜಿಜ್ಞಞಛಿnಠಿ), ಸರಿಯಾದ ಕಂಟೆಂಟ್‌ ಅಭಿವೃದ್ಧಿ, ಯಾವ ನಿರ್ದಿಷ್ಟ ಉದ್ದೇಶಕ್ಕೆ ಯಾವ ಮೀಡಿಯಾ ಉತ್ತಮವೆಂಬ ತಿಳಿವಳಿಕೆ, ಕಂಟೆಂಟ್‌ಗಳ ನಿರ್ವಹಣೆ ಮತ್ತು ಅವುಗಳ ಸಮರ್ಪಕ ಬಳಕೆ ಇಲ್ಲಿ ಬಹಳ ಮುಖ್ಯ. ಕಂಪನಿಯ ಧ್ಯೇಯೋದ್ದೇಶಗಳನ್ನು ಪ್ರತಿಫ‌ಲಿಸುವಲ್ಲಿ, ಸೋಷಿಯಲ್‌ ಮೀಡಿಯಾದ ಯಶಸ್ಸಿನಲ್ಲಿ ಕಂಟೆಂಟ್‌ ಬಹು ಮುಖ್ಯ ಪಾತ್ರ ವಹಿಸುತ್ತದೆ.

ವೃತ್ತಿ ಪ್ರಗತಿ ಹೇಗೆ?
ಇಂಥದ್ದೇ ವೇಗದಲ್ಲಿ ಈ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತೀರೆಂದು ಹೇಳಲಾಗದು. ಇಲ್ಲಿ ಕಾಲಾಧಾರಿತ (ಟೈಮ್‌ ಬೌಂಡ್‌) ಬಡ್ತಿ ಇಲ್ಲ. ಕೌಶಲ್ಯಾಧಾರಿತ ಬಡ್ತಿ ಮಾತ್ರ. ಜೊತೆಗೆ ಅನೇಕ ಒಳ ವಿಭಾಗಗಳೂ ಇವೆ. ಕಮ್ಯುನಿಟಿ ಮ್ಯಾನೇಜರ್‌, ಕಂಟೆಂಟ್‌ ಮಾರ್ಕೆಟರ್‌, ಮೀಡಿಯಾ ಕೋ ಆರ್ಡಿನೇಟರ್‌ ಮೊದಲಾದ ಹುದ್ದೆಗಳಲ್ಲಿ ಬೆಳವಣಿಗೆ ಕಾಣಬಹುದು. ಆರಂಭದಲ್ಲಿ ಕಲಾ ಸಹಾಯಕರಾಗಿ ಸೇರಿ ಕ್ರಮೇಣ ಕ್ರಿಯೇಟಿವ್‌ ಡೈರೆಕ್ಟರ್‌, ಮಾರ್ಕೆಟಿಂಗ್‌ ಅನಾಲಿಸ್ಟ್‌, ಡಿಜಿಟಲ್‌ ಮಾರ್ಕೆಟಿಂಗ್‌ ಸ್ಟ್ರಾಟೆಜಿಸ್ಟ್‌, ಬ್ರಾಂಡ್‌ ಮ್ಯಾನೇಜರ್‌, ಚೀಫ್ ಮಾರ್ಕೆಟಿಂಗ್‌ ಮ್ಯಾನೇಜರ್‌ ಹುದ್ದೆಯನ್ನು ಅಲಂಕರಿಸಬಹುದು. ಮಾಸಿಕ 10- 15 ಸಾವಿರ ರೂ. ಸಂಬಳದಿಂದ ಆರಂಭಿಸಿ ಲಕ್ಷಗಳನ್ನೂ ದಾಟುವ ವೃತ್ತಿ ಇದು.

ಒಟ್ಟಿನಲ್ಲಿ ಪದಗಳ ಹಂಗಿಲ್ಲದೆಯೇ ಸಾಕಷ್ಟು ಬುದ್ಧಿ, ಕಲಾ ನೈಪುಣ್ಯ, ಅಂಕಿ-ಅಂಶಗಳ ವಿಶ್ಲೇಷಣೆಯ ಅರಿವು ಹೊಂದಿ ಸೋಷಿಯಲ್‌ ಮೀಡಿಯಾಗಳಲ್ಲಿ ಆಸಕ್ತಿ ಉಳ್ಳವರು ಸೇವೆ ಸಲ್ಲಿಸಬಹುದಾದ ಕ್ಷೇತ್ರ ಇದು. ಕಂಪನಿಯ ಸೇವೆಯ ಜೊತೆಗೆ ಇದೊಂದು ಸಾರ್ವಜನಿಕ ಸೇವೆಯೂ ಹೌದು. ಆನ್‌ಲೈನ್‌ ಕಮ್ಯುನಿಟಿಗೆ ಮಾಹಿತಿ ನೀಡುವುದರ ಜೊತೆಗೆ, ಕಂಪನಿಯ ಬೆಳವಣಿಗೆಗೆ ಅವಕಾಶ ನೀಡುವುದೇ ಇಲ್ಲಿಯ ಕೆಲಸ. ಆದರೆ, ಇಂದಿನ ಎಲ್ಲ ಕ್ಷೇತ್ರಗಳಂತೆ ಇದೂ ಕ್ಷಣ ಕ್ಷಣಕ್ಕೂ ಬದಲಾಗುವ, ಏರುಪೇರಾಗುವ ಕ್ಷೇತ್ರ. ಮೀಡಿಯಾದ ಪ್ರತಿ ನಡೆಯನ್ನು, ಸೆಳೆತವನ್ನು, ಪ್ರತಿ ಸೆಕೆಂಡೂ ಗಮನಿಸುತ್ತಾ ಅದನ್ನು ತನ್ನ ಹಾಗೂ ಕಂಪನಿಯ ಅನುಕೂಲಕ್ಕಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಹೊಂದಿರುವವರು ಮಾತ್ರ ಇಲ್ಲಿ ಯಶಸ್ಸು ಕಾಣಬಲ್ಲರು.

– ರಘು ವಿ.

Advertisement

Udayavani is now on Telegram. Click here to join our channel and stay updated with the latest news.

Next