Advertisement
ನವದೆಹಲಿಯಲ್ಲಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ, ಹಾಗೆಯೇ ಕೋವಿಡ್-19 ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಇದು ಜನರ ದಾರಿತಪ್ಪಿಸುತ್ತಿದ್ದರಿಂದ ಆ ವೇಳೆಯಲ್ಲಿ ಹಲವು ಜನರ ಟ್ವಿಟ್ಟರ್, ಇನ್ ಸ್ಟಾಗ್ರಾಂ, ಫೇಸ್ ಬುಕ್ ಖಾತೆಗಳು ಬ್ಲಾಕ್ ಆಗಿದ್ದವು.
Advertisement
ಮಾತ್ರವಲ್ಲದೆ ನಿಮ್ಮ ಖಾತೆಯನ್ನು ಯಾರಾದರೂ ರಿಪೋರ್ಟ್ ಮಾಡಿದರೆ ಅಥವಾ ಆಯಾ ಸಂಸ್ಥೆಗಳ ಕಮ್ಯೂನಿಟಿ ನೀತಿಯನ್ನು ಉಲ್ಲಂಘಿಸಿದರೂ ಕೂಡ ನಿಷ್ಕ್ರೀಯಗೊಳಿಸುವ ಸಾಧ್ಯತೆಗಳಿವೆ. ಇತರರಿಗೆ ಬೆದರಿಕೆಯೊಡ್ಡುವುದು, ಅನುಮಾನಸ್ಪದವಾದ ಪೋಸ್ಟ್ ಗಳನ್ನು ಹಾಕುವುದು ಕೂಡ ಅಪರಾಧವಾಗಿದೆ. ಇದರ ಜೊತೆಗೆ ಸಮಗ್ರತೆ ಮತ್ತು ಸೌಹಾರ್ಧತೆಗೆ ಧಕ್ಕೆ ತಂದರೆ ಹಾಗೂ ನಕಲಿ ಖಾತೆಗಳನ್ನು ಹೊಂದಿರುವುದು ಕೂಡ ಕಾನೂನುಬಾಹಿರವಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ ಯಾವುದೇ ಸರ್ಕಾರಿ ಸಂಸ್ಥೆಗಳು ಅಥವಾ ನ್ಯಾಯಾಲಯಗಳು ಯಾವುದಾದರೂ ಪೋಸ್ಟ್ ಗಳನ್ನು ತೆಗೆದುಹಾಕಬೇಕೆಂದು ಸಾಮಾಜಿಕ ಜಾಲತಾಣಗಳಿಗೆ ಸೂಚನೆ ನೀಡಿದರೆ 36 ಗಂಟೆಯೊಳಗೆ ಅದನ್ನು ಕಾರ್ಯಗತಗೊಳಿಸಬೇಕಾಗುತ್ತದೆ.
ನಿಮ್ಮ ಅಕೌಂಟ್ ಬ್ಲಾಕ್ ಅದಾಕ್ಷಣ ಈ ಕ್ರಮ ಅನುಸರಿಸಿ
ಟ್ವಿಟ್ಟರ್: ಈ ಸಾಮಾಜಿಕ ಜಾಲತಾಣದ ಕುಂದುಕೊರತೆಗಳ ಪರಿಹಾರ ಅಧಿಕಾರಿಗೆ ಮನವಿ ಸಲ್ಲಿಸಬಹುದು. 2021ರ ಐಟಿ ಕಾಯ್ದೆಯ ಪ್ರಕಾರ ಯಾವುದೇ ಸಮಸ್ಯೆಗಳಿಗೂ ದೂರು ಬಂದ 24 ಗಂಟೆಯೊಳಗೆ ಸ್ಪಂದನೆ ನೀಡಬೇಕು .ಮಾತ್ರವಲ್ಲದೆ 15 ದಿನದೊಳಗೆ ಪರಿಹಾರ ಸೂಚಿಸಬೇಕು. ಇದರ ಹೊರತಾಗಿ ಟ್ವಿಟ್ಟರ್ ಹೆಲ್ಪ್ ಸೆಂಟರ್ ಅನ್ನು ಸಂಪರ್ಕಿಸಬಹುದು.
ಫೇಸ್ ಬುಕ್: ಇದು ಕೂಡ ಬಳಕೆದಾರರಿಗಾಗಿ ಕುಂದುಕೊರತೆ ಪರಿಹಾರ ಅಧಿಕಾರಿಗಳನ್ನು ನೇಮಿಸಿದ್ದು, ಇಲ್ಲಿಗೆ ನಿಮ್ಮ ಸಮಸ್ಯೆಯನ್ನು ಸಲ್ಲಿಸಬಹುದು. ಒಂದು ವೇಳೆ ಖಾತೆ ನಿಷ್ಕ್ರೀಯಗೊಂಡಿದ್ದರೇ ಫೇಸ್ ಬುಕ್ ಅಧಿಕೃತ ವೆಬ್ ಸೈಟ್ ಗೆ ತೆರಳಿ ದೂರು ಸಲ್ಲಿಸಬಹುದು. ಇಲ್ಲಿ ಇ-ಮೇಲ್, ಹೆಸರು ಸಹಿತ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ.
ಇನ್ ಸ್ಟಾಗ್ರಾಂ: ಅಕೌಂಟ್ ಬ್ಲಾಕ್ ಅಥವಾ ಯಾವುದಾದರೂ ಪೋಸ್ಟ್ ಗಳನ್ನು ತಡೆಹಿಡಿದಿದ್ದರೆ ಇಲ್ಲಿಯೂ ಕೂಡ ಹೆಲ್ಪ್ ಸೆಂಟರ್ ಅಯ್ಕೆಗಳಿದ್ದು, ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಯೂಟ್ಯೂಬ್: ಇಲ್ಲಿ ವೆಬ್ ಫಾರ್ಮ್ಸ್ ಎಂಬ ಅಯ್ಕೆಯಿದ್ದು ಇದರ ಮೂಲಕವೇ ಜನರು ತಮ್ಮ ಸಮಸ್ಯೆಗಳನ್ನು ದಾಖಲು ಮಾಡಬಹುದು. ಇದರ ಹೊರತಾಗಿ ಯೂಟ್ಯೂಬ್ ಒಡೆತನದ ಸಂಸ್ಥೆಯಾದ ಗೂಗಲ್ ನಲ್ಲಿ ಕುಂದುಕೊರತೆಗಳನ್ನು ದಾಖಲಿಸಬಹುದು.
ಯಾವ ರೀತಿಯಾಗಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದು ?
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಅರ್ ಟಿಐ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಖಾತೆ ಏತಕ್ಕಾಗಿ ಬ್ಲಾಕ್ ಆಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದರ ಜೊತೆಗೆ ಅಕೌಂಟ್ ಬ್ಲಾಕಿಂಗ್ ಮಾಡಿದ್ದನ್ನು ಪ್ರಶ್ನಿಸಿ ಆಯಾ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಕಳುಹಿಸುವ ಅವಕಾಶವಿದೆ.