Advertisement

ಜಗವೆ ನಮ್ಮದೆಂಬ ಬೆಸುಗೆ

03:25 PM Jul 08, 2021 | Team Udayavani |

ಜನರ ಭಾವನೆಗಳಿಗೆ ಸ್ಪಂದನೆಯಾಗಿ, ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಿ, ಮಾತುಕತೆಗಳ ಹರಟೆಯ ಜಾಗವಾಗಿ ವಿಶ್ವದೆಲ್ಲೆಡೆ ಪ್ರಚಲಿತವಾಗಿರುವುದೇ ಸಾಮಾಜಿಕ ಜಾಲತಾಣಗಳು.

Advertisement

ಅದೆಷ್ಟೋ ಬಾರಿ ಬೇಸರವಾದಾಗ, ಸಾಂತ್ವನ ಹೇಳುವ ಮನಸ್ಸು ಜತೆಯಿಲ್ಲದಿದ್ದಾಗ ಆಸರೆಯಾಗುವುದೇ ಈ ಸೋಶಿಯಲ್‌ ಮೀಡಿಯಾಗಳು. ನೀನು ಒಬ್ಬನಲ್ಲ ಜತೆಗೆ ಇಡೀ ವಿಶ್ವವೇ ಇದೆ ಎನ್ನುತ್ತದೆ ಫೇಸ್‌ಬುಕ್‌. ಅದ್ಭುತ ಚಿತ್ರಗಳ ಮೂಲಕ ಮುಖದಲ್ಲಿ ನಗು ತರಿಸುತ್ತದೆ ಇನ್‌ಸ್ಟಾಗ್ರಾಂ. ಖಾಲಿಯಿರುವ ತಲೆಗೆ ಹೊಸ ಹೊಸ ವಿಚಾರಗಳನ್ನು ತುಂಬುತ್ತದೆ ಟ್ವಿಟರ್‌. ನಾವೆಲ್ಲ ನಿನ್ನ ಜತೆಗಿದ್ದೇವೆ ಎನ್ನುವ ವ್ಯಾಟ್ಸ್‌ಆ್ಯಪ್‌ ಗೆಳೆಯರು. ಇದೀಗ ಇವೆಲ್ಲದರ ಜತೆ ನಾನು ಸೇರಿಕೊಳ್ಳುತ್ತೇನೆ ಎನ್ನುತ್ತಾ ಅಂಗೈಗೆ ಬಂದಿದೆ ಕ್ಲಬ್‌ಹೌಸ್‌.

ಇತ್ತೀಚೆಗೆ ಬಹಳಷ್ಟು ವೈರಲ್‌ ಆಗುತ್ತಿದೆ ಈ ಕ್ಲಬ್‌ಹೌಸ್‌. ಬೇರೆ ಬೇರೆ ರೀತಿಯ ವಿಚಾರ ಮಂಡನೆಗಳನ್ನು ಇಲ್ಲಿ ಕಾಣಬಹುದು. ಮಾತನಾಡಲು ವಿಷಯನೇ ಸಿಗಲ್ಲ ಅನ್ನುವವರಿಗೆ ಇಲ್ಲಿ ಸಾಕು ಸಾಕು ಅನ್ನುವಷ್ಟು ವಿಷಯಗಳು ಸಿಗ್ತವೆ.

ನಾವೆಲ್ಲ ಗೆಳೆಯರು ಕ್ಲಬ್‌ಹೌಸ್‌ ಆ್ಯಪ್‌ ಬಗ್ಗೆ ಮಾತಾಡಿ ಕೊಳ್ಳುತ್ತ ಇನ್‌ಸ್ಟಾಲ್‌ ಮಾಡಿಕೊಂಡೆವು. ಸಹಜವಾಗಿ ಜನ ಎಲ್ಲೇ ಹೋದರೂ  ನಾವು, ನಮ್ಮವರು, ನಮ್ಮ ಭಾಷೆ, ನಮ್ಮ ಊರು, ನಮ್ಮ ದೇಶ ಹೀಗೆಯೆ ಹುಡುಕುತ್ತಾರೆ. ಹೌದು ಎಲ್ಲಿ ನಮ್ಮ ಜನ ಎನ್ನುವವರು ಇರುತ್ತಾರೆಯೇ ಅಲ್ಲಿ ನಾವು ಬೇಗನೆ ಬೆರತು ಹೋಗುತ್ತೇವೆ. ಕ್ಲಬ್‌ಹೌಸ್‌ನಲ್ಲೂ ಹಾಗೆಯೇ ಆಯಿತು. ನಾವು ಮೊದಲು ಸೇರಿಕೊಂಡ¨ªೆ ನಮ್ಮ ಮಂಗಳೂರಿನವರ ಜತೆ. ಅಬ್ಬಾ! ಎರಡೇ ದಿನಗಳಲ್ಲಿ ಮಂಗಳೂರಿನ ಮೂಲೆ ಮೂಲೆಯ ವಿಚಾರಗಳು ಚರ್ಚೆಗೆ ಬಂದವು. ಮಂಗಳೂರಿನ ತಿಂಡಿ ಗೋಳಿಬಜೆಗೆ ಇಂಟರ್‌ ನ್ಯಾಶನಲ್‌ ಲೆವಲ್‌ನಲ್ಲಿ ಬ್ರ್ಯಾಂಡ್‌ ಪಟ್ಟ ಕೊಡುವ ತಮಾಷೆಯ ಮಾತುಕತೆಯಂತೂ ಚಾಟ್‌ ರೂಮ್‌ನಲ್ಲಿದ್ದ ಎಲ್ಲರೂ ಎದ್ದು ಬಿದ್ದು ನಗುವಂತೆ ಮಾಡಿತ್ತು. ಇಲ್ಲಿ ಅದೆಷ್ಟೋ ಮಂದಿಯ ಮುಖ ಪರಿಚಯವೇ ಇಲ್ಲದೆ ಬರೀ ಧ್ವನಿಯ ಮೂಲಕವೇ ಇವರೆಲ್ಲ ನಮ್ಮವರೆಂಬ ಭಾವನೆಗೆ ದಾರಿಯಾಯಿತು ಈ ಕ್ಲಬ್‌ಹೌಸ್‌. ಇನ್ನು ಜಗದೆಲ್ಲೆಡೆಯ ಮೇಧಾವಿಗಳ ಮಾತನ್ನು ಮನೆಯಲ್ಲೇ ಕೂತು ಆಲಿಸಲು ಇದು ಒಂದು ವೇದಿಕೆ. ಅದೆಷ್ಟೋ ಪ್ರಗತಿಪರ ವಿಚಾರಗಳ ಮಾತುಕತೆಯಲ್ಲಿ ನಾವೂ ಭಾಗಿಯಾಗುವ ಅವಕಾಶ ಇಲ್ಲಿದೆ. ಹೀಗೆ ಲಾಕ್‌ಡೌನ್‌ನಲ್ಲಿ ಜಡ ಹಿಡಿದಿದ್ದ ಮನಸ್ಸುಗಳನ್ನು ಮತ್ತೆ ರಿಫ್ರೆಶ್‌ ಮಾಡುತ್ತಿದೆ. ಇಂತಹ ಸೋಶಿಯಲ್‌ ಮೀಡಿಯಾಗಳು. ನಮನ್ನು ಬಹಳ ಬೇಗನೆ ಹೊರ ಜಗತ್ತಿನೊಡನೆ ನಂಟು ಬೆಳೆಸುವಂತೆ ಮಾಡುವ ಇಲ್ಲಿ ಎಲ್ಲವೂ ಒಳ್ಳೆಯದೇ ಇದೆ ಎಂದಲ್ಲ. ಸ್ವತಃ ಮನುಷ್ಯನಲ್ಲೇ ಒಳಿತು ಕೆಡುಕುಗಳೆಂಬ  ಎರಡೂ ಗುಣಗಳಿರುವಾಗ ಅವನು ಆಪರೇಟ್‌ ಮಾಡುವ ಸೋಶಿಯಲ್‌ ಮೀಡಿಯಾದಲ್ಲಿ ಇರುವು ದಿಲ್ಲವೆ?ಅದನ್ನು ಯಾವ ರೀತಿ ಬಳಸುತ್ತಿದ್ದೇವೆ ಎಂಬುದರ ಮೇಲೆ ಒಳಿತು- ಕೆಡುಕು ಇದೆ.

 

Advertisement

 ನಳಿನಿ ಎಸ್‌. ಸುವರ್ಣ ಮುಂಡ್ಲಿ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next