Advertisement
ತಾನೇನು ಪದವೀಧರನಾಗದಿದ್ದರೂ, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಮಂತ್ರ ಎಂಬ ದೂರದೃಷ್ಟಿತ್ವ ವುಳ್ಳ ಚಿಂತಕರಾದರು. ಇದಕ್ಕೆ ಪೂರಕವಾಗಿ ಸಂಘಟನಾ ಶಕ್ತಿಯಿಂದ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಕಟುಸತ್ಯವನ್ನು ಅರಿತು, ಈ ಮೂಲಕ ಮಹಾನಗರದ ಸಮಾನ ಮನಸ್ಕ ಬಂಟರೊಡನೆ ಸಂಘಟಿತ ರಾಗಿ ಮುಂಬಯಿಯಲ್ಲಿ ಹಲವಾರು ವರ್ಷಗಳ ಕಾಲ ಹಗಲಿರುಳು ಒಗ್ಗೂಡಿ ಕನಸಿನ ಬಂಟರ ಭವನ ನಿರ್ಮಿಸಿದರು. ಈ ಸಾಂಘಿಕ ಮಹಾನ್ ಕಾರ್ಯದಲ್ಲಿ ಎಲೆಮರೆಯ ಕಾಯಿಯಂತೆ ತನ್ನನ್ನು ತಾನು ಸಮರ್ಪಿಸಿಕೊಂಡರು.
ಅಂದಿನ ಬಂಟರ ಸಂಘದ ಕಾರ್ಯಕಾರಿ ಸಮಿತಿಯು ವೈದ್ಯರು, ಎಂಜಿನಿಯರ್, ಕೈಗಾರಿಕೋದ್ಯಮಿಗಳು, ನ್ಯಾಯವಾದಿಗಳು, ಲೆಕ್ಕ ಪರಿಶೋಧಕರು, ಶಿಕ್ಷಣ ತಜ್ಞರು, ಹೊಟೇಲ್ ಉದ್ಯಮಿಗಳು, ವಾಗ್ಮಿಗಳು, ಸಮಾಜ ಪ್ರೇಮಿಗಳು ಹಾಗೂ ಸಮಾಜ ಪರ ಚಿಂತಕರ ಒಂದು ಚಾವ ಡಿಯಾಗಿತ್ತು. ಬಂಟ ರ ಭವನವೇ ಒಂದು ಮಂದಿರವಾಗಿತ್ತು, ಎಂ. ಡಿ. ಶೆಟ್ಟಿ ಅಧ್ಯಕ್ಷತೆ ಅವ ಧಿಯಲ್ಲಿ 2 ಐತಿಹಾಸಿಕ ಪರಿವರ್ತನೆಗಳಾದವು. ಅಂದಿನ ದಿನಗಳಲ್ಲಿ ಬಂಟ ಸಮಾಜದ ಬಾಂಧವರನ್ನು ಸಂಪರ್ಕಿಸಲು ಬಲು ಕಷ್ಟಕ ರವಾಗುತ್ತಿತ್ತು, ದೂರವಾಣಿ ಸಂಪರ್ಕವಾಗಲೀ ಖಾ ಸಗಿ ವಾಹನಗಳ ಅನು ಕೂಲತೆಗಳಾಗಲೀ ಬಹಳ ಕಡಿಮೆ ಜನರಲ್ಲಿತ್ತು. ಅಲ್ಲದೆ ಇಂದಿನ ದಿನದಲ್ಲಿರುವಂತೆ ಸುದ್ದಿ ಮಾಧ್ಯಮವಾಗಲೀ ಇಲ್ಲ ವೇ ಇಲ್ಲ. ಮಹಾ ನಗರದಲ್ಲಿ ಕನ್ನಡ ದಿನಪತ್ರಿಕೆಗಳು ಪ್ರಕಟ ವಾಗುತ್ತಿರಲಿಲ್ಲ. ಸಂಘ ಟನೆಗೆ ಪತ್ರಿಕೆ ಒಂದರ ಅಗತ್ಯವೆಂದು ಮನಗಂಡ ಬಂಟರ ಸಂಘವು “ಬಂಟರವಾಣಿ’ ಎಂಬ ಮುಖವಾಣಿ ಇರುವ ಪತ್ರಿಕೆ ಪ್ರಕಟಿಸಿತ್ತು. ಈ ಮೂಲಕ ಜನಸಂವಹನಕ್ಕಾಗಿ ಪತ್ರಿಕಾರಂಗವನ್ನು ಪ್ರವೇಶಿಸಿರುವುದು ವಿಶೇಷತೆಯಾಗಿದೆ. ಮಾತೃ ಪ್ರಧಾನ ಮೂಲ (ಅಳಿಯಕಟ್ಟು) ಬಂಟರದ್ದು ಆದರೂ ಅಂದು ಪುರುಷ ಪ್ರಧಾನ ಸಮಾಜವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಮಹಿಳೆಯರಿಂದ ಮಹಿಳಾ ಸಂಘವನ್ನು ಸ್ಥಾಪಿಸಿದರು. ಸಂಘವು ಡಾ| ಸುನೀತಾ ಎಂ. ಶೆಟ್ಟಿ ಮುಖಾಂತರ ಮಹಿಳೆಯರಿಂದಲೆ ಸಂಗ್ರಹಿಸಿದ ಹಣದಿಂದ ಆರ್ಥಿಕ ಬಡತನದಲ್ಲಿರುವ ವಿದ್ಯಾರ್ಥಿಗಳ ಶಾಲೆಗಳಿಗೆ ಭೇಟಿಕೊಟ್ಟು ಶಿಕ್ಷಣಕ್ಕಾಗಿ ಆರ್ಥಿಕ ರೂಪದಲ್ಲಿ ಪ್ರೋತ್ಸಾಹಿಸಿದರು. ಇಂದಿಗೂ ಮಹಿಳಾ ಸಂಘವು ಈ ಕಾರ್ಯಕ್ರಮ ಮುಂದುವರಿಸಿಕೊಂಡು ಬರುತ್ತಿರುವುದು ಅವಿಸ್ಮರಣೀಯ. ಒಟ್ಟಿನಲ್ಲಿ ಎಂ. ಡಿ. ಶೆಟ್ಟಿ ಅವರು ಸಂಸ್ಥೆಯಲ್ಲಿ ನಿರಂತರವಾಗಿ ಎಪ್ಪತ್ತಾರು ವರ್ಷಗಳ ಕಾಲ ತನ್ನನ್ನು ತಾನು ಸಮರ್ಪಿಸಿಕೊಂಡ ವ್ಯಕ್ತಿ ಬೇರೆ ಯಾರೂ ಇಲ್ಲವೆಂದರೆ ತಪ್ಪಾಗಲಾರದು.
ಬಂಟರ ಸಂಘ ಮುಂಬಯಿ ನಡೆಸಲ್ಪಡುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ನೂರಾರು ಬಂಟ ಬಡ ವಿದ್ಯಾರ್ಥಿಗಳು ಉಚಿತ ಶಿಕ್ಷಣದ ಅವಕಾಶ ಪಡೆಯುತ್ತಿದ್ದಾರೆ. ಸಂಘವು ಶಿಕ್ಷಣ ಸಂಸ್ಥೆಗಳ ಮೂಲಕ ಕೋಟ್ಯಂತರ ರೂ. ಆದಾಯ ಗಳಿಸಿದರೂ ಬಂಟರ ಸಂಘವು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಹಾಗೂ ಆರ್ಥಿಕ ಬಡತನದ ಜನರಿಗೆ ಆರೋಗ್ಯಕ್ಕಾಗಿ ಆರ್ಥಿಕ ನೆರವು ನೀಡುತ್ತಿದೆ. ಈ ಆರ್ಥಿಕ ಸಹಾಯ ದೊರೆಯಲು ಒಂದು ಭದ್ರಬುನಾದಿಯ ಯೋಜನೆ ಸ್ಥಾಪಿಸುವಲ್ಲಿ ಇವರು ಸಮಾಜದ ಹಲವಾರು ಜನರಲ್ಲಿ ಸದಾ ಮಂಚೂಣಿಯಲ್ಲಿರುವ ನಾಯಕ ಎಂ. ಡಿ. ಶೆಟ್ಟಿಯವರು.
Related Articles
Advertisement
ಮನುಷ್ಯ ತನ್ನ ಬದುಕಿಗೆ ಹೊಸ ಅರ್ಥವನ್ನು ಕೊಡುವ ನಿಟ್ಟಿನಲ್ಲಿ ಸಮಾಜ ಮುಖೀಯಾಗಿ ತಾನು ಬದುಕಬೇಕು. ಆ ಬದುಕು ಎನೂ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿರಬೇಕು ಎಂಬ ಮೌಲ್ಯಧರಿತವಾದ ಅವರ ಚಿಂತನೆಗಳು ಇಂದಿನ ಜನಾಂಗಕ್ಕೆ, ಸಂಘಗಳಿಗೆ ಮಾದರಿ ಇಲ್ಲವೇ ಪ್ರೇರಣೆಯೆಂದರೆ ಖಂಡಿತಾ ಅತಿಶಯೋಕ್ತಿಯ ಮಾತಾಗದು. ಅವರಂತಹ ವ್ಯಕ್ತಿಗೆ ದೇವರು ನೂರು ಕಾಲ ಬದುಕಲು ಆರೋಗ್ಯಪೂರ್ಣ ಜೀವನವನ್ನು ದಯಪಾಲಿಸಲಿ ಈ ಮೂಲಕ ವಯೋವೃದ್ಧ, ಜ್ಞಾನ ವೃದ್ಧ, ಬುದ್ಧಿಜೀವಿಯ ಬದುಕಿನ ಪ್ರಯೋಜನ ಸಮಸ್ತ ಸಮಾಜಕ್ಕೆ ದೊರೆಯಲಿ ಎಂಬುವುದು ನಮ್ಮ ಆಶಯ.
ತನ್ನ ಸಮಾಜಮುಖೀ ನಡೆಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ, ಮೌಲ್ಯಧಾರಿತ ನಡೆಯಿಂದಾಗಿ ಹಲ ವಾರು ಅಡ್ಡಿ ಆತಂಕಗಳಿದ್ದರೂ ಅದನ್ನು ಅಷ್ಟೆ ನಿಷ್ಠುರವಾಗಿ ಎದುರಿಸಿದ ವ್ಯಕ್ತಿ. ತರುಣರಲ್ಲಿ ತರುಣರಾಗಿ, ಗೃಹಸ್ಥರಲ್ಲಿ ಗೃಹಸ್ಥನಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ರಾಜಕಾರಣಿಗಳ ಉನ್ನತ ಮಟ್ಟದ ಅಧಿಕಾರಿಗಳು, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೊಡನೆ ಅತೀ ಮಧುರ ಒಡನಾಟ ಸಂಬಂಧವನ್ನು ಹೊಂದಿರುವ ವ್ಯಕ್ತಿ. ಒಂದು ಹಂತದಲ್ಲಿ ಬಂಟ ಸಮಾಜದಲ್ಲಿ ಬಂಟರ ಸಂಘ ವಿಭಜನೆಗೊಂಡು ವಿಘಟನೆಗೊಂಡರೂ ಅದನ್ನು ಅಷ್ಟೇ ಚಾಕಚಕ್ಯತೆಯಿಂದ ಒಂದುಗೂಡಿಸಿದ ಅಪರೂಪದ ವ್ಯಕ್ತಿ, ಬಂಟ ನ್ಯಾಯ ಮಂಡಳಿಯ ಸ್ಥಾಪನೆಯ ಮೂಲಕ ಮನ ಭೇದವಿಲ್ಲವೆಂದು ಸಮಾಜಕ್ಕೆ ತೋರಿಸಿಕೊಟ್ಟ ಮುತ್ಸದ್ಧಿ. ಎಂ. ಡಿ. ಶೆಟ್ಟಿ.
ಉದಯ ಶೆಟ್ಟಿ ಶಿಮಂತೂರು