Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಲೆಗೆ ಕೋಲು ಕಟ್ಟಿಕೊಂಡ ಮಹಿಳೆ

07:02 PM May 16, 2020 | sudhir |

ಪ್ಯಾರಿಸ್‌: ಕೋವಿಡ್‌-19ಗೆ ಸದ್ಯ ಕಡಿವಾಣ ಹಾಕಲು ಇರುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಜನರು ಅಂತರ ಕಾಯ್ದುಕೊಳ್ಳಲು ಹೊಸ ಹೊಸ ತಂತ್ರ ಅನುಸರಿಸುತ್ತಿರುವುದು ಗಮನ ಸೆಳೆಯುತ್ತಿದೆ.

Advertisement

ಫ್ರಾನ್ಸ್ ನ ಮಹಿಳೆಯೊಬ್ಬಳು ತನ್ನ ತಲೆಗೆ ಅಡ್ಡವಾಗಿ 1 ಮೀ. ಉದ್ದದ ಕೋಲು ಕಟ್ಟಿಕೊಂಡು ತನ್ನ ಬಳಿ ಯಾರೂ ಬರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ತಾವು ಅಂತರ ಕಾಯ್ದುಕೊಳ್ಳಲು ಇಚ್ಚಿಸಿದರೂ ಇತರರು ತಮ್ಮ ಸಮೀಪ ಬರಬಹುದು ಅಥವಾ ನಮಗೆ ಅರಿವಿಲ್ಲದೆ ಇನ್ನೊಬ್ಬರ ಹತ್ತಿರ ತೆರಳಬಹುದು.

ಹಾಗಾಗಿ ಈ ಉಪಾಯವನ್ನು ಕಂಡುಕೊಂಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಆಕೆ ಪ್ಯಾರಿಸ್‌ ಬೀದಿಯಲ್ಲಿ ಓಡಾಡುವ ವಿಡಿಯೋವನ್ನು ಎಬಿಸಿ ನ್ಯೂಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದು, ಇದು ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next