Advertisement

ಬೆರಳೆಣಿಕೆ ಜನ: ಸಾಮಾಜಿಕ ಅಂತರ

06:12 PM Mar 27, 2020 | Suhan S |

ತಾವರಗೇರಾ: ಪಟ್ಟಣದಲ್ಲಿ ಗುರುವಾರ ಬೆಳಗ್ಗೆಯಿಂದಲೇ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಜನ ತಿರುಗಾಡುವುದು ಕಂಡುಬಂತು. ಕೆಲವರು ಪಟ್ಟಣದಲ್ಲಿನ ಗಿಡಮರದ ನೆರಳಿಗೆ ಮಲಗಿರುವುದು ಸಾಮಾನ್ಯವಾಗಿತ್ತು.

Advertisement

ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರ ಧಾನ್ಯಗಳನ್ನು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಆದರೆ ಕೆಲ ನ್ಯಾಯಬೆಲೆ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಸಾಮಗ್ರಿ ತೆಗೆದುಕೊಳ್ಳುವುದು ಕಂಡು ಬಂದರೆ, ಮತ್ತೂಂದು ನ್ಯಾಯಬೆಲೆ ಅಂಗಡಿ ಮುಂದೆ ಒಬ್ಬರ ಮೆಲೊಬ್ಬರು ಬಿದ್ದು ಆಹಾರಧಾನ್ಯ ತೆಗೆದುಕೊಳ್ಳುವುದು ಕಂಡು ಬಂತು. ಅಂತಹ ಪರಿಸ್ಥಿತಿಯಲ್ಲಿ ನ್ಯಾಯ ಬೆಲೆ ಅಂಗಡಿಯವರು ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.

ಪೊಲೀಸರ ಜಾಥಾ ಬಂದ ಕೂಡಲೇ ಬಜಾರದೊಳಗಿನ ಮಳಿಗೆಗಳ ಮುಂದೆ ಖಾಲಿ ಕುಳಿತು ಹರಟೆ ಹೊಡೆಯುತ್ತಿದ್ದ 8-10 ಜನರು ಓಡಿ ಹೋಗುವುದು, ಜಾಥಾ ಮುಂದೆ ಹೋದ ತಕ್ಷಣ ಪುನಃ ಕಟ್ಟೆಯ ಮೇಲೆ ತಮ್ಮ ಹರಟೆ ಮುಂದುವರಿಸಿದ್ದು ಕಂಡು ಬಂದಿತು. ಹೀಗೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ, ಕೋವಿಡ್ 19 ವೈರಸ್‌ ಬರುವ ಸಾಧ್ಯತೆಗಳಿವೆ. ಇದರ ಬಗ್ಗೆ ಜನರು ಜಾಗೃತಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next