Advertisement

ಕೋವಿಡ್ ಗೆ ಸಾಮಾಜಿಕ ಅಂತರವೇ ಮದ್ದು

01:04 PM Aug 01, 2020 | Suhan S |

ಹಿರೇಕೆರೂರು: ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಾದಾಪುರ ಗ್ರಾಮಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಇತ್ತೀಚೆಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.

Advertisement

ಈ ವೇಳೆ ಮಾತನಾಡಿದ ಕೃಷಿ ಸಚಿವರು, ಕೋವಿಡ್‌ನಿಂದಾಗಿ ಎಲ್ಲರಿಗೂ ಸಮಸ್ಯೆಯಾಗಿದೆ. ಕೊರೊನಾಕ್ಕೆ ಕಡಿವಾಣ ಬಿಳಬೇಕಾದರೆ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಮುಖ್ಯವಾಗಿದೆ. ಪ್ರತಿಯೊಬ್ಬರೂ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ಕೋವಿಡ್ ನಿಯಂತ್ರಣ ಮಾಡಬೇಕೆಂದು ಹೇಳಿದರು. ತಾಲೂಕಿನ ಜನರು ತೋರಿಸಿದ ಪ್ರೀತಿ-ವಿಶ್ವಾಸಕ್ಕೆ ಎಂದಿಗೂ ಚಿರರುಣಿಯಾಗಿದ್ದೇನೆ. ಗ್ರಾಮದ ಜನರ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು. ಗ್ರಾಮದ ಬಹುದಿನಗಳ ಕನಸಾದ ಕೆರೆ ತುಂಬಿಸುವ ಯೋಜನೆಯು ಮುಕ್ತಾಯ ಹಂತಕ್ಕೆ ಬಂದಿದ್ದು, ಶೀಘ್ರದಲ್ಲಿ ಕೆರೆ ತುಂಬಿಸುವ ಕೆಲಸ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಕೆ.ಗುರುಬಸವರಾಜ, ಎಪಿಎಂಸಿ ಅಧ್ಯಕ್ಷ ನಾರಾಯಣಪ್ಪ ಗೌರಕ್ಕನವರ, ತಾಪಂ ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ಸದಸ್ಯ ಚಂದ್ರಪ್ಪ ಸಾಸ್ವಿಹಳ್ಳಿ, ರೇಣಕಪ್ಪ ಭರಮಗೌಡ್ರ, ಮಂಜಣ್ಣ ಬೇವಿನಹಳ್ಳಿ, ಡಿ.ಸಿ.ಪಾಟೀಲ, ಮಹೇಂದ್ರ ಬಡಳ್ಳಿ, ಇಒ ಮೋಹನಕುಮಾರ, ಅಧಿಕಾರಿಗಳಾದ ಎಸ್‌ ವಿ.ಪುರಾಣಿಕ, ಬಿ.ಬಸವಣ್ಣೆಪ್ಪ, ವಿಷ್ಣುಕಾಂತ, ರಾಜೀವ್‌ ಮರಿಗೌಡ್ರ, ಪಿಎಸ್‌ಐ ಆರ್‌.ಆಶಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next