Advertisement
ನ್ಯೂಯಾರ್ಕ್: ಸಾಮಾಜಿಕ ಅಂತರ ನಿಯಮದಿಂದ ಆಗುವ ಲಾಭವೇನು? ಅದೇನು ಕೋವಿಡ್ವನ್ನು ಕಟ್ಟಿ ಹಾಕುತ್ತದೆಯೇ ಎಂದೆಲ್ಲಾ ಕೆಲವರು ಪ್ರಶ್ನಿಸುತ್ತಿದ್ದರು.
Related Articles
Advertisement
ಜೀವ ಉಳಿಸುತ್ತಿರುವ ಸಾಮಾಜಿಕ ಅಂತರವೈದ್ಯಕೀಯ ತಂತ್ರಜ್ಞಾನ ಸಂಸ್ಥೆಯೊಂದು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಅಮೆರಿಕವು 29 ರಾಜ್ಯಗಳಲ್ಲಿ ಹೇರಿರುವ ಲಾಕ್‌ಡೌನ್ ಹಾಗೂ ಸಾಮಾಜಿಕ ಅಂತರ ಪಾಲನೆ ನಿಯಮ ಫಲ ಕೊಡುತ್ತಿವೆ. ಸೋಂಕು ಹರಡುವ ವೇಗಕ್ಕೆ ಕೊಂಚ ಹಿನ್ನಡೆಯಾಗಿದ್ದು, ಜನರ ಜೀವ ಉಳಿಯುತ್ತಿದೆ ಎಂದಿದೆ. 24.8 ಕೋಟಿ ಜನರು ಪಾರು
ಅಮೆರಿಕ ಸರಕಾರ ಸೋಂಕು ನಿಯಂತ್ರಣ ಕ್ಕಾಗಿ ಜನರನ್ನು ಮನೆಯಲ್ಲಿಯೇ ಇರುವಂತೆ ಆದೇಶ ನೀಡಿತ್ತು. ಈ ವೇಳೆ ಅಲ್ಲಿನ ವೈದ್ಯಕೀಯ ಇಲಾಖೆ ಈ ನಿಯಮವನ್ನು ಜನರು ಉಲ್ಲಂಘಿಸುತ್ತಾರೆ. ಅವರನ್ನು ನಿಯಂತ್ರಿಸುವುದು ಕಷ್ಟ ಎಂದೂ ಅಭಿಫ್ರಾಯಿಸಿತ್ತು. ಆದರೆ ಈ ಅಭಿಪ್ರಾಯವನ್ನು ತಳ್ಳಿ ಹಾಕುವಂತಹ ಬೆಳವಣಿಗೆಗೆ ಅಮೆರಿಕ ಸಾಕ್ಷಿಯಾಗಿದ್ದು, 29 ರಾಜ್ಯಗಳ 24.8 ಕೋಟಿ ಜನರು ಮನೆಯಲ್ಲೇ ಇದ್ದಾರೆ. ಇದರಿಂದ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಸೋಂಕು ಪೀಡಿತರ ಸಂಖ್ಯೆಯಲ್ಲಿ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನುತ್ತಾರೆ ತಜ್ಞರು. ಕಿನ್ಸಾ ಹೆಲ್ತ್ ಆಸ್ಪತ್ರೆ ಸಿದ್ಧಪಡಿಸಿದ ಇಂಟರ್‌ನೆಟ್ ಸಂಪರ್ಕಿತ ಥರ್ಮಾಮೀಟರ್‌ಗಳು ಯಾವ ಪ್ರದೇಶದಲ್ಲಿ ಎಷ್ಟು ಸೋಂಕಿತರಿದ್ದಾರೆ, ಶಂಕಿತರಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಿದೆ. ಸೋಂಕು ನಿಯಂತ್ರಣಕ್ಕೆ ಇದರಿಂದ ಅನುಕೂಲವಾಗಲಿದೆ. ಇಲ್ಲಿ ಲಭ್ಯವಾಗುತ್ತಿರುವ ಅಂಕಿ-ಅಂಶವನ್ನು ಮತ್ತು ಸಾರ್ವಜನಿಕರ ದೇಹದ ತಾಪಮಾನ ಮಟ್ಟವನ್ನು ಕೇಂದ್ರೀಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದ್ದು, ಈ ಮಾಹಿತಿಯಿಂದ ಸೋಂಕಿತರನ್ನು ಮತ್ತು ಶಂಕಿತರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಭಾರತಕ್ಕೆ ಆಭಾರಿ ಎಂದ ಅಮೆರಿಕ
ನಾವು ತೋರಿದ ನಿರ್ಲಕ್ಷéದ ಪರಿಣಾಮ ಇಂದು ಅಮೆರಿಕದಲ್ಲಿ ಶ್ಮಶಾನ ಸದೃಶ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಆರು ವಾರದ ನವಜಾತ ಶಿಶುಗಳನ್ನು ಕಳೆದುಕೊಂಡಿದ್ದೇವೆ. ಆದರೆ ಈ ವಿಷಯದಲ್ಲಿ ಭಾರತ ಸರಕಾರ ಬೇಗ ಎಚ್ಚೆತ್ತುಕೊಂಡಿದ್ದು, ಲಾಕ್‌ಡೌನ್ ಆದೇಶ ಹೊರಡಿಸಿದ್ದು ಉತ್ತಮ ನಿರ್ಧಾರ ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಮ್ಮ ಪ್ರಜೆಗಳನ್ನು ಕರೆಸಿಕೊಳ್ಳುವಲ್ಲಿ ಭಾರತ ಸರಕಾರ ನೀಡುತ್ತಿರುವ ಸಹಕಾರಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ರಾಯಭಾರ ವ್ಯವಹಾರಗಳ ಪ್ರಿನ್ಸಿಪಲ್ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಇಯಾನ್ ಬ್ರೌನ್ಲಿ ತಿಳಿಸಿದ್ದಾರೆ.