Advertisement

ಸರ್ವರ ಪಾಲ್ಗೊಳ್ಳುವಿಕೆಯಿಂದ ಸಮಾಜ ಅಭಿವೃದ್ಧಿ: ಆನೆಗುಂದಿ ಶ್ರೀ

08:39 PM Jun 03, 2019 | Sriram |

ಕುಂಬಳೆ: ಹಣತೆಯಲ್ಲಿ ಉರಿಯುವ ದೀಪ ಪ್ರಕಾಶಮಾನವಾಗಿ ಎಲ್ಲರಿಗೂ ಬೆಳಕನ್ನು ನೀಡುವಲ್ಲಿ ಹೇಗೆ ಬತ್ತಿ,ಎಣ್ಣೆ ಮತ್ತು ಪ್ರಣತಿ ಎಲ್ಲವೂ ಸಮಾನವಾಗಿ ಮುಖ್ಯವೋ ಹಾಗೆಯೇ ಸಮಾಜದಲ್ಲಿ ಎಲ್ಲರ ಪಾಲ್ಗೊಳ್ಳುವುವಿಕೆ ಅತೀ ಮುಖ್ಯವಾಗಿದೆ. ಹಾಗಿದ್ದಲ್ಲಿ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾದ್ಯವೆಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.

Advertisement

ಪೂಜ್ಯರು ಪಡುಕುತ್ಯಾರಿನ ಆನೆಗುಂದಿ ಮಠದ ಶ್ರೀ ಸರಸ್ವತೀ ಸಭಾ ಭವನದಲ್ಲಿ ಜರಗಿದ ತಮ್ಮ  ನವಮ ವರುಷದ ಪಟ್ಟಾಭಿಷೇಕ ಮಹೋತ್ಸವದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಸಮಾಜದಲ್ಲಿ ಒಳ ಪಂಗಡಗಳು ಬೇಡ, ಒಳ್ಳೆಯ ಪಂಗಡಗಳು ಬೇಕು, ಭಿನ್ನಾಭಿಪ್ರಾಯಗಳಿದ್ದಲ್ಲಿ ಪರಸ್ಪರ ಚರ್ಚಿಸಿ ಬಗೆಹರಿಸಬೇಕಲ್ಲದೆ ಪ್ರತಿಷ್ಠೆ ತೋರಿಸಿಕೊಂಡರೆ ಅವನತಿಗೆ ಹಾದಿ ಎಂದರು. ಕೈಯ ಎಲ್ಲ ಬೆರಳುಗಳು ಸಮಾನವಿಲ್ಲ, ಸಮಾನ ವಿದ್ದರೂ ಪ್ರಯೋಜನಕ್ಕೆ ಬಾರದು ಹಾಗೆಯೇ ವೈಯುಕ್ತಿಕ ಅಭಿಪ್ರಾಯಗಳು ಬೇಕು, ಆದರೆ ವಿರೋಧ ಅಭಿಪ್ರಾಯಗಳು ಬೇಡ, ಎಲ್ಲ ಮನಸ್ಸುಗಳು ಸದುದ್ದೇಶಕ್ಕೆ ಒಂದಾಗಬೇಕೆಂದರು.

ಸಮಾರಂಭದಲ್ಲಿ ಪ್ರತಿಷ್ಠಾನದ ಹುಬ್ಬಳ್ಳಿ ವಲಯ ಸಮಿತಿ ಅಧ್ಯಕ್ಷ ವಿದ್ವಾನ್‌ವೇ|ಬ್ರ| ಶಂಕರ ಆಚಾರ್ಯ ಕಡ್ಲಾಸ್ಕರ್‌ ದಿಕ್ಸೂಚಿ ಭಾಷಣ ಮಾಡಿದರು.ಅತಿಥಿಗಳಾಗಿ ಪಡುಕುತ್ಯಾರಿನ ಅರಸರಾದ ಎಂ. ಜಿನೇಶ್‌ ಬಲ್ಲಾಳ್‌, ಪ್ರಮುಖರಾದ ಎಂ. ಸೋಮಶೇಖರ ಭಟ್‌, ಹರಿಶ್ಚಂದ್ರ ಎನ್‌. ಆಚಾರ್ಯ ಬೆಂಗಳೂರು, ಯು.ಕೆ.ಎಸ್‌. ಸೀತಾರಾಮ ಆಚಾರ್ಯ ಉಪ್ರಳ್ಳಿ, ಸುಧಾಕರ ಆಚಾರ್ಯ ತ್ರಾಸಿ ಭಾಗವಹಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಧರ ಆಚಾರ್ಯ ವಡೇರ ಹೋಬಳಿ ಬಾಕೂìರು ವಹಿಸಿದ್ದರು. ಸಂಸ್ಥಾನದ ಆಸ್ಥಾನ ವಿದ್ವಾಂಸ ಘನಪಾಠಿ ವಿದ್ವಾನ್‌ ಬಾಲಚಂದ್ರ ಭಟ್‌ ಚಂದುಕೂಡ್ಲು, ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್‌ ಆಚಾರ್ಯ ಕಾಸರಗೋಡು, ದ.ಕ. ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಕರಾವಳಿಯ ವಿಶ್ವಬ್ರಾಹ್ಮಣ ಕಾಳಿಕಾಂಬಾ ದೇವಸ್ಥಾನಗಳ ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ ಮಂಗಳೂರು, ಪುರೋಹಿತ್‌ ಜಯಕರ್‌ ಆಚಾರ್ಯ ಮೂಡಬಿದಿರ್ರೆ, ರತ್ನಾಕರ ಆಚಾರ್ಯ ಕಾರ್ಕಳ, ಮಧುಕರ ಚಂದ್ರಶೇಖರ ಆಚಾರ್ಯ ಗೋಕರ್ಣ, ಭಾಸ್ಕರ ಬಿ. ಆಚಾರ್ಯ ಭಟ್ಕಳ, ಶೇಖರ ಆಚಾರ್ಯ ಕಾಪು, ಸುಂದರ ಆಚಾರ್ಯ ಕೋಟೆಕಾರು, ಉಮೇಶ ಆಚಾರ್ಯ ಪೋಳ್ಯ ಬಂಗ್ರಮಂಜೇಶ್ವರ, ಸುಧಾಕರ ಆಚಾರ್ಯ ಎಡನೀರು ಆರಿಕ್ಕಾಡಿ ಕುಂಬಳೆ, ಪರಮೇಶ್ವರ ಆಚಾರ್ಯ ನೀರ್ಚಾಲು ಮಧೂರು, ಗುರು ಸೇವಾ ಪರಿಷತ್‌ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿಲ್ಪಿ ಸತೀಶ್‌ ಆಚಾರ್ಯ, ಗೋಶಾಲಾಟ್ರಸ್ಟ್‌ ಅಧ್ಯಕ್ಷ ಜಯಕರ ಆಚಾರ್ಯ ಕರಂಬಳ್ಳಿ, ಮಾಧ್ಯಮ ವಿಭಾಗ ಮುಖ್ಯಸ್ಥ ನಿವೃತ್ತ ಸುಭೇದಾರ್‌ ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಪಿ.ವಿ. ಗಂಗಾಧರ ಆಚಾರ್ಯ ಉಡುಪಿ, ಬಂಬ್ರಾಣ ಯಜ್ಞೆಶ ಆಚಾರ್ಯ ಶುಭಾಶಂಸನೆಗೈದರು. ಶ್ರೀ ನಾಗಧರ್ಮೇಂದ್ರ ಸ್ವಾಮಿ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ವೇದ ಘೋಷ ನಡೆಯಿತು. ಕಾಡಬೆಟ್ಟು ನಾಗರಾಜ ಆಚಾರ್ಯ ಸ್ವಾಗತಿಸಿದರು.ಸುರೇಶ ಆಚಾರ್ಯ ಕಾರ್ಕಳ ವಂದಿಸಿದರು. ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು, ನ್ಯಾ. ಕೆ.ಎಂ. ಗಂಗಾಧರ ಕೊಂಡೆವೂರು ನಿರೂಪಿಸಿದರು. ಲೋಕ ಕಲ್ಯಾಣಾರ್ಥ ಸಾಮೂಹಿಕ ಚಂಡಿಕಾ ಯಾಗ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿದವು.

ಸಮಾರಂಭದಲ್ಲಿ ಕೆ. ಕೇಶವ ಆಚಾರ್ಯ ಮಂಗಳೂರು ಅವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಎಂ. ಸೋಮಶೇಖರ ಭಟ್‌ ಉಡುಪಿ, ಮನೋಹರ್‌ ಎಸ್‌. ಶೆಟ್ಟಿ ಉಡುಪಿ,ಶಿಲ್ಪಿ ದಿನೇಶ್‌ ಆಚಾರ್ಯ ಪಡುಬಿದ್ರಿ, ಶಿಲ್ಪಿ ಕೆ. ಸುರೇಶ್‌ ಆಚಾರ್ಯ ಹೊಸಪೇಟೆ, ಬ್ರಹ್ಮಶ್ರೀ ವೀರರಾಘವ ಶರ್ಮಾ ತಾಡಿಚರ್ಲ, ಬ್ರಹ್ಮಶ್ರೀ ಪುರೋಹಿತ್‌ ಬಿ. ಕೇಶವ ಆಚಾರ್ಯಉಳಿಯತ್ತಡ್ಕ, ಮಧೂರು,ಬಂಟ್ವಾಳ ಜಯರಾಮ ಆಚಾರ್ಯ, ಕ್ಯಾಪ್ಟನ್‌ ಮೂಲ್ಕಿ ಗಣೇಶ್‌ ರಾವ್‌ ಅವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಹಾಗೂ ಡಾಕ್ಟರೇಟ್‌ ಪುರಸ್ಕೃತ ಡಾ. ಬಾಲಕೃಷ್ಣ ಬಿ.ಎಂ ಹೊಸಂಗಡಿ ಅವರಿಗೆ ಅಭಿನಂದನೆ ನೀಡಿ ಗೌರವಿಸಲಾಯಿತು. ಪಿಯುಸಿ ಮತ್ತು ಎಸೆಸೆಲ್ಸಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳಿಸಿದವರನ್ನು ಹಾಗೂ ವೈಯಕ್ತಿಕ ಸಾಧಕರನ್ನು ಮಠದ ವತಿಯಿಂದ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next