Advertisement
– ಒಣ ಸಾಬೂನನ್ನು ಕಾಲು- ಕೈಗೆ ಉಜ್ಜಿದರೆ ಸೊಳ್ಳೆಗಳು ಹತ್ತಿರ ಬರುವುದಿಲ್ಲ– ಕಪಾಟಿನ ಡ್ರಾವರ್‌ಗೆ ಸಾಬೂನು ಹಚ್ಚಿದರೆ ಬಾಗಿಲು ತೆರೆಯಲು ಸುಲಭ.
– ಬ್ಯಾಗಿನ ಜಿಪ್ ತೆಗೆಯಲು ಆಗದಿದ್ದರೆ, ಜಿಪ್ ಮೇಲೆ ಸಾಬೂನು ಹಚ್ಚಿ.
-ಸಣ್ಣ ಅಳತೆಯ ಉಂಗುರ, ಬಳೆ ಹಾಕಬೇಕಾದಾಗ ಕೈಯನ್ನು ಸಾಬೂನಿನ ನೊರೆಯಲ್ಲಿ ಅದ್ದಿ.
-ದಾರವನ್ನು ಸಾಬೂನಿಗೆ ಉಜ್ಜಿದರೆ, ಸೂಜಿಯೊಳಗೆ ದಾರ ಪೋಣಿಸಲು ಕಷ್ಟವೇ ಆಗುವುದಿಲ್ಲ.
-ಕಿಟಕಿಗೆ ಪೇಂಟ್ ಮಾಡುವಾಗ, ಸಾಬೂನನ್ನು ಕಿಟಕಿ ಫ್ರೆಮ್‌ಗೆ ಹಚ್ಚಿದರೆ, ಹೊರಗಡೆ ತಾಗಿದ ಬಣ್ಣವನ್ನು ಸುಲಭವಾಗಿ ಒರೆಸಬಹುದು.
-ಗೋಡೆ ಮೇಲಿನ ವಾಲ್ ಪೇಪರ್ ಅನ್ನು ತೆಗೆಯುವಾಗ, ಸೋಪಿನ ನೊರೆ ಹಚ್ಚಿದರೆ ಸುಲಭವಾಗಿ ತೆಗೆಯಬಹುದು.
-ಹೊಸ ಶೂ, ಚಪ್ಪಲಿ ಖರೀದಿಸಿದಾಗ ಅದರೊಳಗೆ ಸೋಪನ್ನು ಹಚ್ಚಿದರೆ ಚಪ್ಪಲಿ ಹಾಕುವಾಗ ನೋವಾಗುವುದಿಲ್ಲ.
-ಸ್ನಾನದ ಮನೆಯ ಕನ್ನಡಿಗೆ ಸಾಬೂನು ಹಚ್ಚಿ ತೊಳೆದು, ನಂತರ ಒಣಬಟ್ಟೆಯಿಂದ ಒರೆಸಿದರೆ ಗಾಜಿನ ಮೇಲಿನ ಕಲೆ ಮಾಯವಾಗುತ್ತದೆ.
– ಮನೆಯಲ್ಲಿ ಇರುವೆ, ಜಿರಳೆ, ಇಲಿಗಳು ಓಡಾಡುವ ಜಾಗದಲ್ಲಿ ಸಾಬೂನಿನ ತುಣುಕುಗಳನ್ನು ಇಟ್ಟರೆ, ಸಮಸ್ಯೆಗೆ ಪರಿಹಾರ ಸಿಗುತ್ತದೆ.
-ಕುರ್ಚಿ, ಮೇಜಿನ ಕಾಲನ್ನು ನಾಯಿಗಳು ಕಚ್ಚುವುದನ್ನು ತಡೆಯಲು, ಕಾಲುಗಳಿಗೆ ಸಾಬೂನು ಹಚ್ಚಿ.
– ಮನೆಯ ಬೀಗ ತೆಗೆಯಲು ಕಷ್ಟವಾಗುತ್ತಿದ್ದರೆ, ಕೀಲಿಕೈಗೆ ಸಾಬೂನು ಉಜ್ಜಿ.
-ಗಾಜಿನ ವಸ್ತು ಒಡೆದು ನೆಲದ ಮೇಲೆ ಬಿದ್ದಿದ್ದರೆ, ಸಾಬೂನನ್ನು ನೀರಿನಲ್ಲಿ ಹಾಕಿ ನೆಲದ ಮೇಲೆ ಆಚೀಚೆ ಆಡಿಸಿದರೆ ಗಾಜಿನ ತುಣುಕುಗಳು ಸಾಬೂನಿಗೆ ಅಂಟಿಕೊಳ್ಳುತ್ತವೆ.
-ಕನ್ನಡಕದ ಗಾಜನ್ನು ಸೋಪು ನೀರಿನಲ್ಲಿ ತೊಳೆದರೆ, ಫಳಫಳ ಹೊಳೆಯುತ್ತದೆ.