Advertisement

Covid: ಈವರೆಗೆ 312 ಮಂದಿಗೆ ಜೆಎನ್‌.1

12:23 AM Jan 03, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಈವರೆಗೆ ಕೊರೊನಾ ಸೋಂಕಿನ ಉಪತಳಿ ಜೆಎನ್‌.1ನ ಒಟ್ಟಾರೆ 312 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಶೇ.47ರಷ್ಟು ಅಂದರೆ 147 ಪ್ರಕರಣಗಳು ಕೇರಳದಲ್ಲೇ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಉಪತಳಿ ದೃಢಪಟ್ಟಿವೆ.

Advertisement

ಅತೀ ಹೆಚ್ಚು ಸೋಂಕಿತರ ಪೈಕಿ 2ನೇ ಸ್ಥಾನದಲ್ಲಿ ಗೋವಾ(51) ಇದ್ದರೆ, ಗುಜರಾತ್‌(34) ಮೂರನೇ ಸ್ಥಾನದಲ್ಲಿದೆ. ಇದೇ ವೇಳೆ, ದೇಶಾದ್ಯಂತ ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳಲ್ಲಿ 573 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕರ್ನಾಟಕ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next