Advertisement

ವಿಮಾನ ಹಾರಾಟಕ್ಕೆ ಇಬ್ಬನಿಯ ತೊಂದರೆ

11:50 AM Jan 15, 2018 | |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ದಟ್ಟ ಮಂಜು ಆವರಿಸಿದ್ದರಿಂದ
ಭಾನುವಾರ ಮುಂಜಾನೆ 4.44ರಿಂದ 8.25ರ ಅವಧಿಯಲ್ಲಿ 110ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.

Advertisement

ಭಾನುವಾರ ಬೆಳಗ್ಗೆ 5 ಗಂಟೆಗಳ ಅವಧಯಲ್ಲಿ 63 ವಿಮಾನಗಳ ನಿರ್ಗಮನ ಹಾಗೂ 54 ವಿಮಾನಗಳ ಆಗಮನ
ವಿಳಂಬವಾಗಿದೆ. ಇದರ ಪರಿಣಾಮ ಹೈದರಾಬಾದ್‌ ಹಾಗೂ ಚೆನ್ನೈ ನಿಲ್ದಾಣದ ತಲಾ 4 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗೆಯೇ ಮುಂಬೈ, ಕಲ್ಲಿಕೋಟೆ, ದೆಹಲಿ ಹಾಗೂ ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸ ಬೇಕಾಗಿದ್ದ 7 ವಿಮಾನ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಿಂದ ಹೈದರಾ ಬಾದ್‌, ದೆಹಲಿ, ಕಲ್ಲಿಕೋಟೆ,ಮುಂಬೈ, ಚೆನ್ನೈಗೆ ತೆರಳಬೇಕಾಗಿದ್ದ 8 ಇಂಡಿಗೋ ವಿಮಾನಗಳ ಹಾರಾಟರದ್ದು ಮಾಡಿದೆ. ಜತೆಗೆ ಒಂದು ವೇಳೆ ಸೋಮವಾರವೂ ಇದೇ ರೀತಿಯ ವಾತಾವರಣವಿದ್ದರೆ ಮತ್ತೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಬಹುದು ಎಂದು ಇಂಡಿಗೋ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಎದರಾಗಿತ್ತು. ಕಳೆದವರ್ಷ ಸುಮಾರು 102 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next