Advertisement

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

06:48 PM Jul 18, 2024 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ಇನ್ನು ಒಂದು ತಿಂಗಳೂ ಉಳಿದಿಲ್ಲ, ಈ ಬಾರಿ ಐತಿಹಾಸಿಕ ದೆಹಲಿಯ ಕೆಂಪು ಕೋಟೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬಿಗಿ ಭದ್ರತೆಯೊಂದಿಗೆ ಸಂಭ್ರಮಾಚರಣೆ ನಡೆಸಲಾಗುತ್ತದೆ.

Advertisement

ದೆಹಲಿ ಪೊಲೀಸರು ಭದ್ರತೆ ಕೈಗೊಳ್ಳಲು ಸಜ್ಜಾಗಿದ್ದು, ಸ್ನೈಪರ್‌ಗಳು(Snipers), ಸ್ಪಾಟರ್‌ಗಳನ್ನು ನಿಯೋಜಿಸಲಾಗುತ್ತಿದ್ದು, ಎಫ್‌ಆರ್ ಸಿಸಿಟಿವಿ ಕೆಮೆರಾಗಳನ್ನು(FR cameras) ಪರಿಶೀಲಿಸಲು ಅಪ್ಲಿಕೇಶನ್ ಬಳಸಿ ಸಮಾರಂಭದಲ್ಲಿ ಭಾಗಿಯಾಗುವ ಜನರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯು ಈ ಬಾರಿ ಸ್ನೈಪರ್‌ಗಳ ಪಾತ್ರವನ್ನು ನಿರ್ಣಾಯಕವಾಗಿಸಿದೆ. ಬಿಗಿ ಭದ್ರತೆಗೆ ಒತ್ತು ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸಂಜಯ್ ಅರೋರಾ ತಿಳಿಸಿದ್ದಾರೆ.

G20 ಶೃಂಗಸಭೆಯ ಸಮಯದಲ್ಲಿ ವಿದೇಶಿ ಗಣ್ಯರನ್ನು ರಕ್ಷಣೆಗೆ ನೇಮಿಸಿದ ಡ್ರಾಗುನೋವ್ SVD ರೈಫಲ್‌ಗಳೊಂದಿಗೆ ಸ್ನೈಪರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸಿದ್ದಾರೆ. ರೈಫಲ್‌ಗಳು 800 ಮೀಟರ್‌ಗಿಂತಲೂ ಹೆಚ್ಚು ಪ್ರಾಯೋಗಿಕ ನಿಖರತೆಯ ವ್ಯಾಪ್ತಿ ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ನಿರ್ಮಿತ ರೈಫಲ್‌ಗಳನ್ನು ನಿರ್ವಹಿಸಲು ತರಬೇತಿ ಪಡೆದ ಮಾರ್ಕ್ಸ್‌ಮನ್‌ಗಳನ್ನು ಕೆಂಪು ಕೋಟೆಯಲ್ಲಿ ನಿಯೋಜಿಸಲಾಗುತ್ತಿದೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಯೋಧರನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Advertisement

ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಈಗಾಗಲೇ ಸ್ಪಾಟರ್‌ಗಳು, ಫೇಸ್ ರೆಕಗ್ನಿಷನ್ ಸಿಸ್ಟಮ್ (FRS) ಸಿಸಿಟಿವಿ ಕೆಮೆರಾಗಳು ಮತ್ತು ಡ್ರೋನ್‌ಗಳ ಬಳಕೆಯನ್ನು ವ್ಯವಸ್ಥೆ ಮಾಡುವ ಯೋಜನೆ ಜಾರಿಯಲ್ಲಿದೆ. ಎಫ್‌ಆರ್‌ಎಸ್ ಅಳವಡಿಸಿರುವ ಕೆಮೆರಾಗಳು ದೆಹಲಿಯಲ್ಲಿ ನಾಲ್ಕೈದು ವರ್ಷಗಳಿಂದ ಬಳಕೆಯಲ್ಲಿದ್ದು, ಈ ವರ್ಷ ಅವುಗಳ ಸಂಖ್ಯೆಯನ್ನು 1,000 ಕ್ಕೆ ಹೆಚ್ಚಿಸಲಾಗುತ್ತಿದೆ. ಸ್ಥಳದ ಸುತ್ತಮುತ್ತಲಿನ ನಿವಾಸಿಗಳು ಸೇರಿದಂತೆ ಜನರ ಪರಿಶೀಲನೆಗಾಗಿ ಈ ವರ್ಷ ನೂತನ ಭದ್ರತಾ ವೈಶಿಷ್ಟ್ಯವನ್ನು ಅಪ್ಲಿಕೇಶನ್‌ನ ರೂಪದಲ್ಲಿ ಸೇರಿಸಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ ಎಂ.ಕೆ. ಮೀನಾ ತಿಳಿಸಿದ್ದಾರೆ.

ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸ್ಥಳದ ಸುತ್ತಮುತ್ತಲಿನ ಜನರು, ಕೆಲಸಗಾರರು ಮತ್ತು ಅಂಗಡಿಯವರನ್ನು ಪರಿಶೀಲಿಸಲು ‘ಇ-ಪರಿಕ್ಷಣ್ ‘ ಎಂಬ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮೀನಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next