Advertisement

‘ಸ್ನೇಹಿತ’ನ ಗಾನ ಬಜಾನ

12:05 PM Oct 10, 2021 | Team Udayavani |

“ಸ್ನೇಹಿತ’- ಹೀಗೊಂದು ಚಿತ್ರ ಸದ್ದಿಲ್ಲದೇ ಆರಂಭವಾಗಿದ್ದು, ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಸಂಗೀತ್‌ ಸಾಗರ್‌ ಈ ಚಿತ್ರದ ನಿರ್ದೇಶಕರು. ಜೊತೆಗೆ ಸಂಗೀತ ಹಾಗೂ ಸಾಹಿತ್ಯ ಕೂಡಾ ಇವರದ್ದೇ.

Advertisement

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಂಗೀತ್‌ ಸಾಗರ್‌, “ಸ್ನೇಹಿತ, ಸ್ನೇಹದ ಮಹತ್ವ ಸಾರುವ ಚಿತ್ರ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವಂತ ಪರಿಶುದ್ಧ ಮನೋರಂಜನಾತ್ಮಕ ಚಿತ್ರವನ್ನು ನಿರ್ದೇಶಿಸಿರುವ ತೃಪ್ತಿ ಇದೆ. ಈಗ ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ’ ಎಂದರು.

ಇದನ್ನೂ ಓದಿ:ಸಖತ್‌ ಸಾಂಗ್‌ ರಿಲೀಸ್‌: ‘ಪ್ರೇಮಕ್ಕೆ ಕಣ್ಣಿಲ್ಲಾ’ ಎಂದ ಗೋಲ್ಡನ್ ಸ್ಟಾರ್

ಧನುಶ್‌ ಈ ಚಿತ್ರದ ನಾಯಕ. “ನನಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಸ್ನೇಹಿತ ಎಂದರೆ ಏನು ಎಂದು ನಾನು ಹೇಳುವುದಕ್ಕಿಂತ, ಸ್ವಲ್ಪ ದಿನದಲ್ಲೇ ನಮ್ಮ ಚಿತ್ರ ತೆರೆಗೆ ಬರಲಿದ್ದು, ಅದರಲ್ಲಿ ಎಲ್ಲವೂ ತಿಳಿಯಲಿದೆ. ಇಲ್ಲಿ ಸ್ನೇಹ, ಪ್ರೀತಿ, ಆಕ್ಷನ್‌ , ಉತ್ತಮ ಕಥೆ ಹಾಗೂ ಹಾಡುಗಳು ಎಲ್ಲಾ ಇದೆ. ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಅಂತ ಹೇಳಬಹುದು’ ಎಂದರು ನಾಯಕ ಧನುಶ್‌.

ಚಿತ್ರದಲ್ಲಿ ಸುಲಕ್ಷ ನಾಯಕಿ. ಹಿರಿಯ ನಟ ಉಮೇಶ್‌ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಅಶೋಕ್‌ ಆರ್‌ ನಿರ್ಮಿಸಿದ್ದಾರೆ. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಭಾ ಮ ಹರೀಶ್‌, ಭಾ ಮ ಗಿರೀಶ್‌, ನಿರ್ದೇಶಕ ಬಿ.ಆರ್‌. ಕೇಶವ್‌ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next