Advertisement
ಮೂಲಗಳ ಪ್ರಕಾರ ಸ್ನ್ಯಾಪ್‌ಡೀಲ್ ಖರೀದಿಗೆ ಅಂದಾಜು 5760 - 608 0 ಕೋಟಿ ರೂ.ಗಳ ಪರಿಷ್ಕೃತ ಬಿಡ್ಡಿಂಗ್ ಮೊತ್ತವನ್ನು ಫ್ಲಿಪ್‌ಕಾರ್ಟ್ ಪ್ರಸ್ತಾವ ಮಾಡಿದೆ. ಈ ಪ್ರಸ್ತಾವನೆಗೆ ಸ್ನ್ಯಾಪ್‌ಡೀಲ್ ಷೇರುದಾರರು ಸಮ್ಮತಿಯನ್ನು ಸೂಚಿಸಬೇಕಿದೆ.
ಕಾರ್ಟ್‌ಗೆ ಮಾರಾಟ ಮಾಡಲು ಸ್ನ್ಯಾಪ್‌ಡೀಲ್‌ನ ಅತಿ ದೊಡ್ಡ ಹೂಡಿಕೆದಾರ ಕಂಪೆನಿ ಜಪಾನ್‌ನ ಸಾಫ್ಟ್ಬ್ಯಾಂಕ್ ಮನಸ್ಸು ಹೊಂದಿದೆ. ಈ ಮೂಲಕ ಫ್ಲಿಪ್‌ಕಾರ್ಟ್‌ನ ಈಕ್ವಿಟಿಯಲ್ಲಿ ಪಾಲು ಹೊಂದುವ ಉದ್ದೇಶ ಹೊಂದಿದೆ. ಈ ಮೊದಲು ಫ್ಲಿಪ್‌ಕಾಟ್ ಸ್ನ್ಯಾಪ್‌ಡೀಲ್ ಖರೀದಿಗೆ ಅಂದಾಜು 4,480 ಕೋಟಿ ರೂ. ಪ್ರಸ್ತಾವನೆ ಇಟ್ಟಿತ್ತು ಎಂದು ಹೇಳಲಾಗಿತ್ತು. ಕಳೆದ ವರ್ಷ ಅರ್ನೆಸ್ಟ್ ಆ್ಯಂಡ್ ಯಂಗ್ ಎಂಬ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ ವರದಿ ಪ್ರಕಾರ 2020ರ ವೇಳೆಗೆ ಇ-ಕಾಮರ್ಸ್ ಕ್ಷೇತ್ರದ ವಹಿವಾಟು ಭಾರತದಲ್ಲಿ 35 ಬಿಲಿಯನ್ ಡಾಲರ್‌ಗಳಿಗೆ ಏರಲಿದೆ ಎಂದು ಅಂದಾಜಿಸಿತ್ತು.