Advertisement
ದೇಶಾದ್ಯಂತ ಸೋನು, ಬಾಬು, ಮಚ್ಚ, ಶೋನಾ ಮತ್ತು ಪಿಂಕಿ ಎಂಬ ಅಡ್ಡ ಹೆಸರುಗಳು ಅತ್ಯಂತ ಜನಪ್ರಿಯವಾಗಿವೆ. ಈ ಅಡ್ಡ ಹೆಸರಿನ ಬಗ್ಗೆ ಸ್ನ್ಯಾಪ್ ಚಾಟ್ ಅಧ್ಯಯನವನ್ನೇ ನಡೆಸಿದೆ. ಸ್ನ್ಯಾಪ್ ಚಾಟ್ ನ ಲೆನ್ಸ್ ನಲ್ಲಿ ಆಗ್ಮೆಂಟೆಡ್ ರಿಯಾಲಿಟಿಯಲ್ಲಿ(AR) ಭಾರತದ ಟಾಪ್ ಅಡ್ಡ ಹೆಸರುಗಳು ಮತ್ತು ನನ್ನ ಅಡ್ಡಹೆಸರು ಎಂಬ ಎರಡು ಬಗೆಯ ಅಡ್ಡ ಹೆಸರುಗಳ ಬಗ್ಗೆ ಅಧ್ಯಯನ ನಡೆಸಿದೆ.
Related Articles
ಭಾರತದಲ್ಲಿ, ಅಡ್ಡಹೆಸರುಗಳು ಕೇವಲ ಲೇಬಲ್ ಗಳಾಗಿಲ್ಲ. ಇವುಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಗುರುತುಗಳನ್ನು ಹೇಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಾಮಾನ್ಯವಾಗಿ ಸಾಕುಪ್ರಾಣಿಗಳ ಹೆಸರುಗಳು, ಮನೆಯ ಹೆಸರು ಅಥವಾ ‘ದಾಕ್ ನಾಮ್’ ಎಂದು ಕರೆಯಲಾಗುತ್ತದೆ. ಈ ಅಡ್ಡಹೆಸರುಗಳು ನಮ್ಮ ಸಂಸ್ಕೃತಿಯಲ್ಲೇ ಸಮ್ಮಿಳಿತವಾಗಿಬಿಟ್ಟಿವೆ.
Advertisement
ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ಮಟ್ಟಿಗೆ ಹೇಳುವುದಾದರೆ, ಇಲ್ಲಿ ಹತ್ತು ಹಲವಾರು ಅಡ್ಡ ಹೆಸರುಗಳು ಕಂಡುಬರುತ್ತವೆ. ಅವುಗಳಲ್ಲಿ ಸಮೀಕ್ಷೆಯಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಅಡ್ಡ ಹೆಸರುಗಳೆಂದರೆ ಮಚ್ಚಾ, ಚಿನ್ನು, ಅನು, ಅಮ್ಮು ಮತ್ತು ಮಗಾ ಆದರೆ, ಈ ಜನಪ್ರಿಯತೆಯನ್ನು ಬದಿಗಿಟ್ಟು ನೋಡಿದರೆ, ಈ ಪ್ರೀತಿಯ ಅಡ್ಡಹೆಸರುಗಳು ಭಾರತೀಯರು ತಮ್ಮನ್ನು ತಾವು ಗ್ರಹಿಸಿಕೊಳ್ಳುವ ಮತ್ತು ಇತರೊಂದಿಗೆ ಸಂವಹನ ನಡೆಸುವ ವಿಧಾನದ ಮೇಲೆ ಹೇಗೆ ಮಹತ್ವದ ಪ್ರಭಾವ ಬೀರಿದ್ದಾರೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಡ್ಡ ಹೆಸರುಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಇದೇ ವೇಳೆ ಜನಪ್ರಿಯತೆಯ ಜತೆಯಲ್ಲಿ ಅಡ್ಡಹೆಸರುಗಳು ಹೆಮ್ಮೆಯ ವಿಚಾರವಾಗಿವೆ. ಅಡ್ಡ ಹೆಸರುಗಳ ಬಗ್ಗೆ ಬಹುತೇಕ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದೆಡೆ ಕೇವಲ ಶೇ.15 ರಷ್ಟು ಜನರು ತಮ್ಮ ಅಡ್ಡ ಹೆಸರುಗಳನ್ನು ಸಾರ್ವಜನಿಕವಾಗಿ ಬಳಸಲು ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ!