Advertisement
ಬನ್ನಿ ಹಾಗಾದರೆ ಯಾವ ಪ್ರದೇಶದಲ್ಲಿದೆ ಈ ಗ್ರಾಮ ಜನರು ಯಾಕಾಗಿ ಹಾವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಹಾವುಗಳು ಮನುಷ್ಯರಿಗೆ ಕಚ್ಚಲ್ವಾ ಈ ಎಲ್ಲ ವಿಚಾರದ ಬಗ್ಗೆ ತಿಳಿದುಕೊಂಡು ಬರೋಣ…
Related Articles
ಅಂದಹಾಗೆ ಈ ಗ್ರಾಮದಲ್ಲಿ ಸುಮಾರು 2,600ಕ್ಕೂ ಹೆಚ್ಚು ಮಂದಿ ವಾಸಮಾಡುತ್ತಿದ್ದಾರಂತೆ ವಿಶೇಷವೆಂದರೆ ಈ ಗ್ರಾಮದಲ್ಲಿರುವ ಜನಸಂಖ್ಯೆಗಿಂತ ಹೆಚ್ಚು ಹಾವುಗಳು ಇವೆ ಎಂದು ಹೇಳಲಾಗುತ್ತಿದೆ ಹಾಗಾಗಿ ಹಾವುಗಳು ಗ್ರಾಮದಲ್ಲಿ ಆರಾಮವಾಗಿ ವಾಸಿಸುತ್ತವೆಯಂತೆ.
Advertisement
ಮನೆಗಳಲ್ಲಿ ಹಾವುಗಳಿಗೂ ವಾಸಸ್ಥಾನ ಇನ್ನೊಂದು ವಿಶೇಷವೆಂದರೆ ಈ ಗ್ರಾಮದಲ್ಲಿ ಹಾವುಗಳನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಹಾಗಾಗಿ ಮನೆ ನಿರ್ಮಾಣ ಮಾಡುವಾಗ ಹಾವುಗಳಿಗೂ ಉಳಿದುಕೊಳ್ಳಲು ಮನೆಯ ಒಳಗೆ ಬಿಲಗಳ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಂತೆ ಜೊತೆಗೆ ಹಾವುಗಳು ಯಾರ ಹೆದರಿಕೆಯೂ ಇಲ್ಲದೆ ಮನೆಯೊಳಗೇ ಸಂಚರಿಸುತ್ತಿರುತ್ತವೆ ಮನೆಯಲ್ಲಿರುವ ಮಕ್ಕಳೂ ಕೂಡ ಈ ಹಾವುಗಳನ್ನು ಕಂಡು ಹೆದರದೆ ಅವುಗಳ ಜೊತೆಗೆ ಬೆರೆಯುತ್ತಾರೆ.
ಹಾವುಗಳನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುವ ನಾವುಗಳು ಆದರೆ ಅಲ್ಲಿ ಹಾಗಲ್ಲ ಸಣ್ಣ ಮಕ್ಕಳಿರುವಾಗಲೇ ಹಾವುಗಳ ಜೊತೆಗೆ ಇದ್ದುಕೊಂಡು ಹಾವುಗಳ ಹೆದರಿಕೆಯೇ ಇಲ್ಲದಂತಾಗಿರುತ್ತದೆ ಹಾಗಾಗಿ ಆ ಗ್ರಾಮದ ಮಕ್ಕಳಿಗೂ ಹಾವಿನ ಹೆದರಿಕೆ ಇಲ್ಲದಂತಾಗಿದೆ. ಅಲ್ಲದೆ ಈ ಹಾವುಗಳು ಇದುವರೆಗೂ ಯಾವುದೇ ಒಬ್ಬ ವ್ಯಕ್ತಿಗೂ ಕಚ್ಚಿದ ಉದಾಹರಣೆ ಇಲ್ಲವಂತೆ, ಹಾಗಾಗಿ ನಾವು ನಾಗರ ಪಂಚಮಿಯಂದು ಹಾವಿಗೆ ಪೂಜೆ ಸಲ್ಲಿಸಿದರೆ ಈ ಗ್ರಾಮದ ಜನರು ವರ್ಷವಿಡೀ ನಾಗರಾಜನ ಸೇವೆಯನ್ನು ಮಾಡಿಕೊಂಡೆ ಇರುವವರು, ಜೊತೆಗೆ ಹಾವುಗೆ ಪೂಜ್ಯನೀಯ ಭಾವದಿಂದ ಆಹಾರವನ್ನು ನೀಡುತ್ತಾರೆ. ಮನೆಯ ಸದಸ್ಯರಂತೆ ಹಾವುಗಳು ಮನೆಯೊಳಗೇ ಆಚೆ ಈಚೆ ತಿರುಗಾಡುತ್ತಿರುತ್ತವೆ ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ, ಮನೆಮಂದಿ ತಮ್ಮ ಪಾಡಿಗೆ ಮನೆಗೆಲಸ ಮಾಡಿಕೊಂಡಿದ್ದರೆ ಹಾವುಗಳು ಕೂಡ ಅವುಗಳ ಪಾಡಿಗೆ ಮನೆಯೊಳಗೇ ಸಂಚರಿಸುತ್ತಿರುತ್ತವೆ.
ಈ ಗ್ರಾಮದಲ್ಲಿರುವ ಶಾಲೆಯ ಕೊಠಡಿಯೊಳಗೂ ಹಾವುಗಳು ತಿರುಗಾಡುತ್ತಿರುತ್ತವೆಯಂತೆ ಅಷ್ಟು ಮಾತ್ರವಲ್ಲದೆ ಕಲೆ ವಿದ್ಯಾರ್ಥಿಗಳು ಹಾವುಗಳನ್ನು ಶಾಲೆಗೂ ತರುತ್ತಾರಂತೆ. ಶಾಲೆಯ ಶಿಕ್ಷಕರು ಹಾವುಗಳ ಜೊತೆಗೆ ಪಾಠ ಮಾಡುತ್ತಾರೆ. ಹಲವಾರು ವರ್ಷಗಳಿಂದ ಜನ ಈ ಗ್ರಾಮದಲ್ಲಿ ಹಾವುಗಳ ಜೊತೆ ವಾಸಮಾಡುತ್ತಿದ್ದಾರೆ ಆದರೆ ಯಾವ ಕಾರಣಕ್ಕಾಗಿ ಈ ಗ್ರಾಮದ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂಬುದು ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ. ನೀವು ಹಾವಿನ ಗ್ರಾಮವನ್ನು ನೋಡಲು ಬಯಸುತ್ತೀರಾ?
ನೀವು ಶೆಟ್‌ಫಾಲ್‌ಗೆ ಹೋಗಲು ಬಯಸಿದ್ದರೆ, ಈ ಗ್ರಾಮಕ್ಕೆ ಹತ್ತಿರವಿರುವ ರೈಲು ನಿಲ್ದಾಣವೆಂದರೆ ಮೊಡ್ನಿಂಬ್ ಮತ್ತು ಅಷ್ಟಿ ರೈಲು ನಿಲ್ದಾಣ ಇಲ್ಲಿಗೆ ಬಂದು ಬಾಡಿಗೆ ವಾಹನದಲ್ಲಿ ಶೆಟ್ಪಾಲ್ ಗ್ರಾಮವನ್ನು ತಲುಪಬಹುದು ಇಲ್ಲವಾದಲ್ಲಿ ಶೋಲಾಪುರಕ್ಕೆ ಬಂದು ಇಲ್ಲಿಂದ ಕ್ಯಾಬ್ ಅಥವಾ ಬಸ್ ಮೂಲಕ ಹಾವಿನ ಗ್ರಾಮವನ್ನು ತಲುಪಬಹುದು. – ಸುಧೀರ್. ಪರ್ಕಳ