ತಿರುವನಂತಪುರಂ: ಹೋಟೆಲ್‌ನಲ್ಲಿ ತಯಾರಿಸಿದ ಪರೋಟದಲ್ಲಿ ಹಾವಿನ ಚರ್ಮ ಸಿಕ್ಕಿರುವ ಘಟನೆ ಕೇರಳದ ತಿರುವನಂತಪುರಂನ ನೆಡುಮಾಂಗಾಡ್‌ನಲ್ಲಿ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹೋಟೆಲ್‌ಗೆ ಬೀಗ ಜಡಿಯಲಾಗಿದೆ.
ಪ್ರಿಯಾ ಹೆಸರಿನ ಮಹಿಳೆ ಇತ್ತೀಚೆಗೆ ತಮ್ಮ ಮಗಳೊಂದಿಗೆ ಹೋಟೆಲ್‌ಗೆ ತೆರಳಿ, ಎರಡು ಪರೋಟಾ ಪಾರ್ಸೆಲ್ ತಂದಿದ್ದರು. ಮಗಳು ಪರೋಟಾ ತಿಂದ ನಂತರ ಪ್ರಿಯಾ ಪರೋಟಾ ತಿನ್ನಲು ಹೋದಾಗ ಅದರಲ್ಲಿ ಹಾವಿನ ಚರ್ಮದ ಚೂರು ಇರುವುದು ಕಂಡುಬಂದಿದೆ. ತಕ್ಷಣ ಆಕೆ ಪೊಲೀಸರ ಸಹಾಯದೊಂದಿಗೆ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡಿದ್ದಾರೆ.
ಪೂರ್ತಿ ಅಶುದ್ಧತೆಯಿಂದಲೇ ತುಂಬಿದ್ದ ಹೋಟೆಲ್‌ಗೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ. ಹಾವಿನ ಚರ್ಮವು ಪಾರ್ಸೆಲ್‌ಗೆ ಬಳಸಿದ್ದ ಪೇಪರ್‌ನಲ್ಲಿ ಇತ್ತು ಎಂದು ಪ್ರಾರ್ಥಮಿಕ ತನಿಖೆ ನಡೆಸಿರುವ ಅಧಿಕಾರಿಗಳು ಹೇಳಿದ್ದಾರೆ.
ಕೊಳೆತ ಮಾಂಸ ವಶ: ಕೇರಳದ ಆಹಾರ ಸುರಕ್ಷತಾ ಅಧಿಕಾರಿಗಳು ಶನಿವಾರ ರಾಜ್ಯಾದ್ಯಂತ ಹೋಟೆಲ್, ಹಾಸ್ಟೆಲ್, ಮೆಸ್‌ಗಳ ಪರಿಶೀಲನೆ ನಡೆಸಿದ್ದಾರೆ. ಇದರಲ್ಲಿ ನೆಡುಮಂಗದ್‌ನ ಹೋಟೆಲ್ ಒಂದರಲ್ಲಿ 25 ಕೆಜಿ ಕೊಳೆತ ಮಾಂಸ ಹಾಗೂ ಮೀನು ಸಿಕ್ಕಿದೆ. ಆ ಹೋಟೆಲ್‌ಗೆ ಬೀಗ ಜಡಿಯಲಾಗಿದೆ.
ತಿರುವನಂತಪುರಂನಲ್ಲಿ ಹೋಟೆಲ್ ಒಂದು ಪರವಾನಗಿ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿದ್ದ ಹಿನ್ನೆಲೆ ಅದಕ್ಕೂ ಬೀಗ ಜಡಿಯಲಾಗಿದೆ.