Advertisement

ಪಿಯು ವಿದ್ಯಾರ್ಥಿಯ ಉರಗ ಪ್ರೇಮ

05:35 PM Oct 09, 2019 | Suhan S |

ಚಿಕ್ಕನಾಯಕನಹಳ್ಳಿ: ಹಾವು ಕಂಡರೆ ಮಾರುದ್ದ ಓಡುವವರೇ ಹೆಚ್ಚು. ಅಂತಹದರಲ್ಲಿ ವಿದ್ಯಾರ್ಥಿಯೊಬ್ಬ ನೂರಾರು ಹಾವು ರಕ್ಷಿಸುವ ಹವ್ಯಾಸ ಬೆಳೆಸಿಕೊಂಡಿದ್ದಾನೆ.

Advertisement

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಪಟ್ಟಣದ ಮಹಾಲಕ್ಷ್ಮೀ ಬಡಾವಣೆ ಮನು 7ನೇ ತರಗತಿಯಿಂದಲೇ ಹಾವುಗಳ ಮೇಲೆ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದು, ನಾಗರಹಾವು, ಕೇರೆ ಹಾವುಗಳು ಸೇರಿ ವಿವಿಧ ಜಾತಿಯ ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾನೆ. ಹಾವುಗಳಿಗೆ ನೋವು ಮಾಡಬಾರದು. ಅವುಗಳೂ ಸ್ನೇಹ ಜೀವಿಗಳು, ಮನುಷ್ಯರು ತೊಂದರೆ ನೀಡದಿದ್ದರೆ ಅವುಗಳೂ ತೊಂದರೆ ಕೊಡುವುದಿಲ್ಲ. ಹಾವು ರೈತನ ಮಿತ್ರನಾಗಿದ್ದು, ಅವುಗಳನ್ನು ರಕ್ಷಿಸು ಮನೋಭಾವನೆ ಬೆಳೆಸಿಕೊಳ್ಳಬೇಕು. ಹಾವುಗಳು ಹಿಡಿಯುವುದು ಕಷ್ಟದ ಕೆಲಸ. ಜೋಪಾನವಾಗಿ ಪಳಗಿಸಬೇಕು. ಅನುಭವವಿಲ್ಲದವರು ಹಾವಿನ ಸಹವಾಸಕ್ಕೆ ಹೋಗದೇ ಇರುವುದು ಉತ್ತಮ ಎಂದು ಹೇಳುತ್ತಾರೆ ಮನು.

Advertisement

Udayavani is now on Telegram. Click here to join our channel and stay updated with the latest news.

Next