Advertisement

ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಆರು ಸಾವಿರ ಮತಗಳ ಮುನ್ನಡೆ

09:49 AM Dec 10, 2019 | Team Udayavani |

ಬೆಂಗಳೂರು: ರಾಜ್ಯದ ಹದಿನೈದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, 12 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 13ನೇ ಸುತ್ತಿನ ಮುಕ್ತಾಯದಲ್ಲಿ ಬಿಜೆಪಿಯ ಎಸ್.ಟಿ.ಸೋಮಶೇಖರ್ 6138 ಮತಗಳ ಮುನ್ನಡೆ ಸಾಧಿಸಿದ್ದು, ಜೆಡಿಎಸ್ ನ ಜವರಾಯಿ ಗೌಡ ಹಿನ್ನಡೆ ಅನುಭವಿಸಿದ್ದಾರೆ. 8ನೇ ಸುತ್ತಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ತೀವ್ರ ಹಣಾಹಣಿ ನಡೆದಿತ್ತು.

Advertisement

ಯಶವಂತಪುರ ಕ್ಷೇತ್ರದಲ್ಲಿ 8ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ಜವರಾಯಿ ಗೌಡ ಅವರಿಗಿಂತ ಕೇವಲ 63 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ 8ನೇ ಸುತ್ತಿನಲ್ಲಿ 48,376 ಮತ ಪಡೆದಿದ್ದು, ಜೆಡಿಎಸ್ ನ ಜವರಾಯಿಗೌಡ 48, 313 ಮತಗಳನ್ನು ಪಡೆದಿದ್ದು, 9ನೇ ಸುತ್ತಿನ ಮತ ಎಣಿಕೆ ಆರಂಭಗೊಂಡಿದೆ. ಈ ಸುತ್ತಿನಲ್ಲಿ ಎಸ್ ಟಿ ಸೋಮಶೇಖರ್ 400 ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next