ಕೊಯಮತ್ತೂರು/ಕೊಚ್ಚಿ: ಕೊಯ ಮತ್ತೂರಿನ ವ್ಯಕ್ತಿಯೊಬ್ಬರ ಬಿಎಂಡಬ್ಲೂ ಕಾರ್‌ನಲ್ಲಿ 5 ಅಡಿ ಉದ್ದದ ನಾಗರಹಾವು ಇದ್ದದ್ದು ಪತ್ತೆಯಾಗಿದೆ. ತಿರುಪ್ಪೂರ್‌ನಲ್ಲಿರುವ ಮನೆಗೆ ತೆರಳುವಾಗ ಹಾವು ಬುಸುಗುಟ್ಟು ವುದು ಕಾರು ಮಾಲೀಕ ವಿಘ್ನೇಶ್ ರಾಜ್‌ರ ಗಮನಕ್ಕೆ ಬಂತು. ಮಾರ್ಗಮಧ್ಯೆ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಚಾಸಿಸ್ ಮೇಲೆ ಹಾವು ಇರುವುದು ಗೊತ್ತಾದರೂ ಸ್ಪಷ್ಟವಾಗಲಿಲ್ಲ. ಶೋರೂಮ್‌ಗೆ ಕಾರನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಹಾವು ಇದ್ದದ್ದು ಗೊತ್ತಾಯಿತು. ಅದನ್ನು ಮದುಕರೈ ಮೀಸಲು ಅರಣ್ಯಕ್ಕೆ ಬಿಡಲಾಯಿತು. ಮತ್ತೂಂ ದೆಡೆ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ತೆರಳಬೇಕಾಗಿದ್ದ ಪ್ರಯಾಣಿಕ ರೊಬ್ಬರ ಬ್ಯಾಗ್‌ನಲ್ಲಿ ವಿಷಪೂರಿತ ಹಾವು ಇದ್ದದ್ದು ಪತ್ತೆಯಾಗಿದೆ. ಸುನಿಲ್ ಎಂಬವರು ತಂದಿದ್ದ ಪ್ಯಾಕೆಟ್‌ನಲ್ಲಿ ಹಾವು ಇತ್ತು. ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದರೂ. ಕೇಸು ದಾಖಲಿಸಲಾಗಿಲ್ಲ.