ಸಕಲೇಶಪುರ: ಮನೆಯ ಪ್ಯಾನ್ ನಲ್ಲಿ ನಾಗರಹಾವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮನೆಯ ಕುಟುಂಬ ಸದಸ್ಯರು ಕೆಲ ಕಾಲ ಗಾಬರಿಗೊಂಡಿದ್ದಾರೆ. ಇಂತಹದೊಂದು ಘಟನೆ ಪಟ್ಟಣದಲ್ಲಿ ನಡೆದಿದೆ.
ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾವಣೆಯಲ್ಲಿರುವ ಮನೆಯ ಅಟ್ಟದ ಮೇಲಿನ ಪ್ಯಾನ್ ಹೊಂದರಲ್ಲಿ ಕಾಣಿಸಿಕೊಂಡಿದೆ. ನಾಗರಹಾವನ್ನು ಕಂಡ ಕುಟುಂಬದ ಸದಸ್ಯರುಗಳು ಭಯಭೀತರಾಗಿದ್ದಾರೆ.
ಮನೆಯಲ್ಲಿ ಫ್ಯಾನ್ ಹಾಕುತ್ತಿದ್ದಂತೆ ವಿಚಿತ್ರ ಶಬ್ದ ಕೇಳಿಸಿದೆ. ಬುಸುಗುಡುವ ಶಬ್ದ ಬಂದ ಹಿನ್ನಲೆಯಲ್ಲಿ ಫ್ಯಾನ್ ಆಫ್ ಮಾಡಿ ನೋಡಿದಾಗ ಫ್ಯಾನ್ ನಲ್ಲಿ ನಾಗರಹಾವೊಂದು ಕಾಳಿಸಿಕೊಂಡಿದೆ. ನಾಗರ ಹಾವಿನ ಬಣ್ಣ ಮತ್ತು ಪ್ಯಾನ್ ಬಣ್ಣ ಒಂದೇ ರೀತಿ ಇದ್ದದ್ದರಿಂದ ನಾಗರಹಾವನ್ನು ಹುಡುಕುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿದೆ. ಶಿವನ ಕೊರಳಿನಲ್ಲಿ ಸುತ್ತಿಕೊಂಡ ರೀತಿ ನಾಗರಹಾವು ಸುತ್ತಿಕೊಂಡಿದ್ದು, ಇದರಿಂದ ಮನೆಯಲ್ಲಿದ್ದವರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದಾರೆ.
ಮತ್ತೆ ಫ್ಯಾನ್ ಆನ್ ಮಾಡುತ್ತಿದ್ದಂತೆ ಹೆಡೆ ಎತ್ತಿ ಬುಸುಗುಟ್ಟಿದ ನಾಗರಹಾವನ್ನು ಉರುಗತಜ್ಞ ದಸ್ತಗಿರ್ ಎಂಬುವರು ಹಾವನ್ನು ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ಸಕಲೇಶಪುರದ ಹೊರವಲಯದ ದೋಣಿಗಲ್ ಅರಣ್ಯಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ. ಹಾವು ಹಿಡಿದ ಹಿನ್ನಲೆಯಲ್ಲಿ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Udupi: ಪಕ್ಷ ವಿರೋಧಿ ಚಟುವಟಿಕೆ… 4 ಮಂದಿ ಬಿಜೆಪಿ ಪದಾಧಿಕಾರಿಗಳಿಗೆ ಶಿಸ್ತು ಕ್ರಮದ ನೋಟಿಸ್